ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮರಲೀಲಾ ct vvvv vvvvv vv vv v V \ vv v \ \ \ vvvvvv v + \ \ / \ \ \ \ MY ದಲ್ಲಿ ಅಪರಿಚಿತವಾದ ಗಿರಿ-ಪಧವನ್ನು ಪ್ರವೇಶ ಮಾಡಲು ಸಾಹಸಿಗಳಾಗಲಿಲ್ಲ. ಮೊಗಲರು ಘಟ್ಟದ ಮಾರ್ಗವನ್ನು ಪ್ರವೇಶಿಸದಿರಲಿಕ್ಕೆ ಬೇರೊಂದು ಕಾರಣವೂ * ಇದ್ದಿತು. ಅದೇನಂದರೆ-ರಾಣಾನ ಸೈನಿಕರು ಕೌಶಲ್ಯದಿಂದ ಎಲ್ಲಿಯಾದರೂ ಅಡ ಗಿಕೊಂಡಿದ್ದು, ಅಕಸ್ಮಾತ್ತಾಗಿ ತಮ್ಮನ್ನೆಲ್ಲಿ ಆಕ್ರಮಿಸುವರೋ ಎಂಬ ಭೀತಿಯು ಅವರಿಗಿದ್ದಿತು. ಈ ಯಾವತ್ತು ಸಂಗತಿಗಳನ್ನು ವಿಚಾರಮಾಡಿ, ಮೊಗಲರು ರಜಪೂ ತರ ಬೆನ್ನು ಹತ್ತಿ ಹೋಗದೆ, ಶಿಬಿರದಲ್ಲಿ ಆಶ್ರಯ ಹೊಂದಿದರು. ಹಳದೀಘಟ್ಟವು ಪರ್ವತ ಪ್ರದೇಶದ ಬಾಗಿಲದಂತಿದ್ದಿತು. ಈ ಬಾಗಿಲನ್ನು ದಾಟಿಹೋದಲ್ಲಿ, ಅಲ್ಲಿ ಯಾವತರದ ವಿಪತ್ತೊದಗಬಹುದೆಂಬದನ್ನು ಹೇಳಲಿಕ್ಕೆ ಬರುವಂತಿದ್ದಿಲ್ಲ. ಸಾಯಂಕಾಲದ ತರುವಾಯ ಮಾನಸಿಂಹನು ಗುಪ್ತಚಾರರನ್ನು ಕಳುಹಿಸಿ, ಎದುರಿನಲ್ಲಿರುವ ಮಾರ್ಗದ ಸಂಬಂಧವಾದ ಸಂಗತಿಗಳನ್ನು ಗೊತ್ತು ಹಚ್ಚಿದನು. ಗುಪ್ತಚಾರರು ಆ ದಾರಿಯ ವಿಷಯವಾಗಿರುವ ಸಂಗತಿಗಳನ್ನು ಹೇಳಿದರು, ಆದರೆ ಆ ಅಂಕಡೊಂಕಾದ ಪರ್ವತಮಾಲೆಯ ಒಳಭಾಗದಲ್ಲಿ ರಜಪೂತರೆಲ್ಲಿ ಅಡಗಿ ಕೊಂಡಿರುವರು ? ಅವರೆಷ್ಟು ಜನರಿರುವರು ? ಅಥವಾ ಯಾರೂ ಅಡಗಿಲ್ಲವೇ ? ಈ ಮೊದಲಾದ ಸಂಗತಿಗಳನ್ನು ಅವರಿಂದ ತಿಳಿಯುವದಾಗಲಿಲ್ಲ. ಮಾನಸಿಂಹನು ಪ್ರಾತಃಕಾಲದಲ್ಲಿದ್ದು, ಮೊದಲು ಯುದ್ಧಭೂಮಿಯನ್ನು ಅವಲೋಕಿಸಿದನು; ತರುವಾಯ ಸೈನಿಕರೊಡನೆ ಘಟ್ಟದ ಮಾರ್ಗವನ್ನು ಪ್ರವೇಶಿಸಿದನು. ಎರಡು ಪ್ರಹ ರಗಳಾಗುವದಕ್ಕಿಂತ ಮೊದಲೇ ಇವರು ಗೋಗುಂಡವನ್ನು ಮುಟ್ಟಿದರು; ಆದರೆ ಗಿರಿ-ಶಿಖರದಲ್ಲಿರುವ ಸುಂದರವಾದ ಈ ಗೋಂಗುಡ ನಗರವು ಇಂದು ಜನಶೂನ್ಯ ವಾಗಿದ್ದಿತು; ಮೊಗಲರ ಭೀತಿಯಿಂದ ಯಾವತ್ತು ಜನರು, ನಗರವನ್ನು ಬಿಟ್ಟು ಹೋಗಿದ್ದರು; ಕೆಲವು ಜನ ರಜಪೂತವೀರರು ಮಾತ್ರ ಪ್ರಹರಿಗಳಂತೆ ಅಲ್ಲಿರುವ ಮಂದಿರಗಳ ರಕ್ಷಣೆಗಾಗಿಯೂ, ಕೋಟೆಯ ಸಂರಕ್ಷಣೆಗಾಗಿಯೂ ವಾಸಮಾಡಿ ದ್ದರು. ಇವರು ಅತಿಸ್ಕಟ್ಟು ಜನರಾಗಿದ್ದರೂ, ಹಿಂದೂವೀರರ ಚಿರಾನುಗತ ಮಾರ್ಗ ವನ್ನವಲಂಬಿಸಿ, ದುರ್ಗರಕ್ಷಣೆಯ ಸಲುವಾಗಿ ಜೀವವಿರುವವರೆಗೆ ಯುದ್ಧ ಮಾಡಿ ದರು. ಅನಾಯಾಸವಾಗಿ ಗೋಗುಂಡ ನಗರವು ಮಾನಸಿಂಹನ ವಶವಾಯಿತು; ಆದರೆ ಮಾನಸಿಂಹನು ನಿರಾಪದನಾಗಲಿಲ್ಲ; ಯಾಕಂದರೆ ರಾಣಾನು ರಾತ್ರಿಯ ಸಮಯದಲ್ಲಿ ಅಕಸ್ಮಾತ್ತಾಗಿ ತಮ್ಮ ಮೇಲೆ ಬಿದ್ದು, ಎಲ್ಲಿ ಸಂಕಟಕ್ಕೊಳಗು ಮಾಡುವನೋ ಎಂಬ ಭೀತಿಯು ಸರ್ವರಿಗೂ ಉಂಟಾಯಿತು. ಕಾರಣ ಮೊಗ