ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

do ••••. ಮಹಾರಾಣಾ ಪ್ರತಾಪ ಸಿಂಹ, AAAAAAA ಲರು ಕೆಲವು ದಿವಸಗಳಲ್ಲಿ ಪಟ್ಟಣದ ನಾಲ್ಕೂ ಕಡೆಯಲ್ಲಿ ಕಂದಕವನ್ನು ತೋಡಿಸಿ' ಎತ್ತರವಾದ ಗೋಡೆಯನ್ನು ಕಟ್ಟಿಸಿದರು. ರಜಪೂತರ ಕುದುರೆಗಳು ಹಾರಿ, ಒಳಗೆ ಪ್ರವೇಶ ಮಾಡಲಿಕ್ಕೆ ಬರಬಾರದೆಂಬದು ಮೊಗಲರ ಉದ್ದೇಶವಾಗಿತ್ತು. ತರು ವಾಯ ಮೊಗಲರು ತುಸುಮಟ್ಟಿಗೆ ಶಾಂತರಾದರು; ಮತ್ತು ಯುದ್ಧದಲ್ಲಾದ ಲಾಭ-ಹಾನಿಗಳ ಲೆಕ್ಕವನ್ನು ನೋಡಹತ್ತಿದರು. ಬಾದಶಹನಿಂದ ಕಳುಹಿಸಲ್ಪಟ್ಟ ಮಹಮ್ಮದಖಾನನೆಂಬುವವನು ಬಂದು, ಯುದ್ದದ ಯಾವತ್ತು ಸಂಗತಿಗಳನ್ನು ತಿಳಿದುಕೊಂಡು ಹೋದನು ಕಡೆಯಲ್ಲಿ ಮಾನಸಿಂಹನು ಐತಿಹಾಸಿಕ ಅಬ್ದುಲಖಾ ದಿರ ಬದಾವುನಿಯ ಕೈಯಲ್ಲಿ ಯುದ್ಧದ ಯಾವತ್ತು ವಿವರಣೆಯನ್ನೂ, ಸುಲಿಗೆಯಲ್ಲಿ ದೊರೆತ ಪದಾರ್ಥಗಳನ್ನೂ ಕೊಟ್ಟು, ಉಪಯುಕ್ತವಾದ ಸೈನ್ಯದೊಡನೆ ಅವನನ್ನು ಬಾದಶಹನ ಬಳಿಗೆ ಕಳುಹಿಸಿಕೊಟ್ಟನು, ಮತ್ತು ರಣಭೂಮಿಯಲ್ಲಿ ಹಸ್ತಗತ ವಾದ ಮಹಾರಾಣಾನ ರಾಮಪ್ರಸಾದವೆಂಬ ಆನೆಯನ್ನು ಬದಾವುನಿಯೊಡನೆ ಕಳಿಸಿದನು ಮಾನಸಿಂಹನು ಸ್ವತಃ ಮೋಹಾನೀ ನಗರದವರೆಗೆ ಬದಾವುನಿಯೊ ಡನೆ ಹೋದನು. ಬೇಟೆಯಾಡುವ ನೆವದಿಂದ ಹೋಗಿ, ಬೇರೆ ಬೇರೆ ಕಡೆಯಲ್ಲಿ ಪ್ರಹರಿಗಳನ್ನು ನಿಯಮಿಸಿಬರುವದು ಮಾನಸಿಂಹನ ಉದ್ದೇಶವಾಗಿತ್ತು. ಬದಾ ವನಿಯು ಬಾದಶಹನ ಬಳಿಗೆ ಹೋಗುತ್ತಿರುವಾಗ ಮಾರ್ಗದಲ್ಲಿ ಯುದ್ಧದ ವೃತ್ತಾಂತವನ್ನು ಜನರಲ್ಲಿ ಪ್ರಚಾರಮಾಡುತ್ತ ನಡೆದನು, ಆದರೆ ಯಾರೂ ಇವನು ಹೇಳುತ್ತಿರುವ ಸಂಗತಿಯನ್ನು ನಂಬಲಿಲ್ಲ,* ಯಾಕಂದರೆ ಪ್ರತಾಪನ ಪರಾಜಯದ ಸುದ್ದಿಯು ರಜಪೂತರೆಲ್ಲರಿಗೂ ಅಪ್ರಿಯವಾಗಿತ್ತು.

  • ಬದಾವುನಿಯು ಬಾಖೋರ, ಮಂಡಲಗಡಗಳ ಮಾರ್ಗವಾಗಿ ಮೊದಲು ಅಂಬರಕ್ಕೆ ಹೋದನು ತರುವಾಯ ಫತೇಪುರಕ್ಕೆ ಹೋಗಿ ಬಾದಶಹನ ದರ್ಶನ ತಕ್ಕೂ೦ಡನು ಬಾದಶ

ಹನು ಇವನನ್ನು ಬಹುರೀತಿಯಿಂದ ಗೌರವಿಸಿದನು,

  • ಮೋಹಾನೀ ನಗರವು ಗೋಗುಂಡದಿಂದ ೨೦ ಕ್ರೋಶ ದೂರದಲ್ಲಿರುವದು, ಇದಕ್ಕೆ ಬದಾ ವನಿಯು ಮೋಹಾನೀ ಎಂದೂ, ಬ್ಲಾಕ್ಮನ್ನನು ಮೋಹಿನೀ ಎಂದೂ, ಬೆವರಿಜನು ಮೋಹಿ ಎಂದೂ ಹೇಳಿದ್ದಾರೆ Badaoni (Lowe) II 242-9, A. N. ( Beveridge ) III 274, Bloch 372, 383.
  • Wherever we passed, the circumstance of the battle were published but the people would not credit our statements.”

owe II, P. 242,