ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮರಲೀಲಾ. ಹಳದೀಘಟ್ಟದ ಯುದ್ಧದ ತರುವಾಯ ಪ್ರತಾಪನು ದಕ್ಷಿಣಾಭಿಮುಖವಾಗಿ ಹೊರಟನೆಂದು ನಾವು ಹಿಂದೆ ಹೇಳಿದ್ದೇವೆ. ಇವನ ಸೈನಿಕರೂ ಕ್ರಮವಾಗಿ ಈ ಪ್ರದೇಶದಲ್ಲಿ ಕೂಡುತ್ತ ನಡೆದರು. ರಜಪೂತರಲ್ಲಿಯ ಅಸಂಖ್ಯ ಜನರು ಯುದ್ಧ ಭೂಮಿಯಲ್ಲಿ ಮಡಿದಿದ್ದರೂ, ಅವರು ನಾಮಶೇಷರಾಗಿರಲಿಲ್ಲ; ಇದ್ದ ಅಲ್ಪ ಜನರು ಮೊಗಲರಿಗೆ ಹೆದರಲಿಲ್ಲ. ಮೇವಾಡದ ಆಬಾಲವೃದ್ಧ-ವನಿತೆಯರೆಲ್ಲರೂ ಗುಡ್ಡು ಗಾಡು ಪ್ರದೇಶವನ್ನಾಶ್ರಯಿಸಿದ್ದರು. ಇವರೆಲ್ಲರೂ ಯುದ್ಧ ಮಾಡಲು ಸಿದ್ದರಾಗಿ ದ್ದರು. ಪ್ರತಾಪನು ಇವರಲ್ಲಿಯ ಯೋಗ್ಯರಾದ ಜನರನ್ನಾರಿಸಿ, ಹೊಸ ಸೈನ್ಯವನ್ನು ನಿರ್ಮಾಣ ಮಾಡಿದನು; ಪುನಃ ಯುದ್ಧ ಮಾಡುವದಕ್ಕೆ ಪ್ರಸ್ತುತನಾದನು; ಆದರೆ ಈ ಸಾರೆ ಯುದ್ಧ ಮಾಡುವ ರೀತಿಯು ಬೇರೆತರದ್ದಾಗಿತ್ತು. ಅಲ್ಪ ಸಂಖ್ಯಾಕರಾದ ಸೈನಿಕರನ್ನು ಕಟ್ಟಿಕೊಂಡು, ಶತ್ರುಗಳ ಅಸಂಖ್ಯ ಸೈನಿಕರೊಡನೆ ಯುದ್ಧ ಮಾಡಬೇಕಾಗಿದ್ದಲ್ಲಿ--ಎದುರಿಗೆ ನಿಂತು ಕಾಳಗವಾಡು ವದು ಸರಿಯಾದ ಉಪಾಯವಲ್ಲ. ಈ ರೀತಿಯಾಗಿ ಯುದ್ಧ ಮಾಡಿದಲ್ಲಿ ಆ ಜನರ ಸರ್ವನಾಶವಾಗುವದು ನಿಶ್ಚಿತವು, ಕಾರಣ ಈ ತರದ ವಿಪತ್ತಿನ ಸಮಯದಲ್ಲಿ ಯುದ್ಧ ವ್ಯವಸಾಯಿಗಳು ಒಂದು ಕುಟಿಲ-ಯುದ್ಧದ ನಿರ್ಮಾಣ ಮಾಡುವರು. ಬೈಲು ಪ್ರದೇಶದಲ್ಲಿ ಈ ತರದ ಕೂಟಯುದ್ಧವನ್ನು ಮಾಡುವದು ದುಸ್ತರವು. ಯಾವದೇ ರೀತಿಯಿಂದಾಗಲಿ, ಕುಟಿಲ-ಕೌಶಲ್ಯದಿಂದ ಶತ್ರುಗಳ ನಾಶಮಾ ಡುವದು ಈ ಯುದ್ಧದ ಉದ್ದೇಶವು, ದುರ್ಬಲ ಪಕ್ಷದ ಸೈನಿಕರು ಗುಡ್ಡಗಾಡು ಪ್ರದೇಶದ ಬೇರೆ ಬೇರೆ ಸ್ಥಳಗಳಲ್ಲಿ ಅಡಗಿಕೊಂಡಿದ್ದು, ಶತ್ರುಗಳ ಮೊರ್ಗವನ್ನು ತಡೆಯುವರು; ಶತ್ರುಗಳ ಖಾದ್ಯಾದಿ ಪದಾರ್ಥಗಳೂ, ಸಹಾಯಕ ಸೈನ್ಯವೂ ಯುದ್ಧಭೂಮಿಗೆ ಮುಟ್ಟದಂತೆ-ಶತ್ರುಗಳಿಗೆ ದೊರೆಯದಂತೆ ಮಾಡುವರು; ಅಕ ಸ್ಮಾತ್ತಾಗಿ ವೈರಿಗಳ ಮೇಲೆ ಬಿದ್ದು, ಅವರ ದ್ರವ್ಯವನ್ನ ಪಹರಿಸುವರು; ಆದಷ್ಟು ತೀವ್ರ ಸಾಧ್ಯವಾದಷ್ಟು ಹಗೆಗಳ ನಾಶವನ್ನು ಮಾಡುವರು; ಮತ್ತು ಇದೆಲ್ಲವನ್ನು ಮಾಡಿ, ಕ್ಷಣಮಾತ್ರದಲ್ಲಿ ಪರ್ವತದ ಪ್ರದೇಶದಲ್ಲಿ ಅಡಗಿಹೋಗುವರು. ಈ ಜನರು ಸಮರಭೂಮಿಯಲ್ಲಿ ಎದುರಿಗೆ ನಿಂತು ಯುದ್ಧ ಮಾಡುವದನ್ನು ಎಂದೂ ಇಚ್ಚಿಸುವ ದಿಲ್ಲ. ಇದರ ಹೆಸರು ಕುಟಿಲ ಸಮರ-ಕಾರ್ಯವು ( Guerrilla Warfare), ಅನೇಕ ದೇಶಗಳಲ್ಲಿ ದುರ್ಬಲಪಕ್ಷದ ಜನರು ಈ ಮಾರ್ಗವನ್ನವಲಂಬಿಸಿದ್ದಾರೆ. ಮಹಾರಾಷ್ಟ್ರ ವೀರನಾದ ಶಿವಾಜಿಯು ಈ ಮಾರ್ಗವನ್ನವಲಂಬಿಸಿ, ಬಹು ವರ್ಷ