n೧೨ ಮಹಾರಾಣಾ ಪ್ರತಾಪಸಿಂಹ. ಗಳವರೆಗೆ ಔರಂಗಜೇಬನಂತಹ ಪರಾಕ್ರಮಿಯಾದ ಬಾದಶಹನ ಅಸಂಖ್ಯ ಸೈನಿಕ ರನ್ನು ಎದುರಿಸಿ, ಅವರನ್ನು ಗೋಳಾಡಿಸಿ ಬಿಟ್ಟನು. ಶಿವಾಜಿಗಿಂತ ನೂರು ವರ್ಷ ಮೊದಲೇ ಪ್ರತಾಪಸಿಂಹನು ಈ ಮಾರ್ಗವನ್ನವಲಂಬಿಸಿ, ಸಾಮ್ರಾಟನಾದ ಅಕ ಬರನನ್ನು ಸಂಕಟದಲ್ಲಿ ಕೆಡವಿದನು. ಇದರಿಂದ ಪ್ರತಾಪಸಿಂಹನು ಅವಲಂಬಿಸಿದ ಯುದ್ದ ಮಾರ್ಗವು ಶಿವಾಜಿಯ ಆದರ್ಶಸ್ವರೂಪವಾಯಿತೆಂದು, ಸುಲಭವಾಗಿ ಹೇಳಬಹುದಾಗಿದೆ. ಆದರೆ ಪ್ರತಾಪಸಿಂಹನು ಹಳದೀಘಟ್ಟದ ಯುದ್ಧದಲ್ಲಿ ಈ ಮಾರ್ಗವನ್ನವ ಲಂಬಿಸಲಿಲ್ಲ; ಯಾಕಂದರೆ ಅವನಿಗೆ ಮೊಗಲರ ಸಂಪೂರ್ಣ ಬಲವು ಗೊತ್ತಾಗಿರ ಅಲ್ಲ; ಅಂದರೆ ಮೊಗಲರ ಸೇನೆಯಷ್ಟು ? ಅದು ಯಾವತರದ್ದಿರುವದು ? ಈ ಮೊದ ಲಾದ ಯಾವತ್ತು ಸಂಗತಿಗಳು ಪ್ರತಾಪನಿಗೆ ತಿಳಿದಿರಲಿಲ್ಲ; ಕಾರಣ ಪ್ರತಾಪನು ಮೊಗಲರ ಎದುರಿಗೆ ನಿಂತು ಯುದ್ಧ ಮಾಡಿದನು. ಹೀಗೆ ಮಾಡುವದಕ್ಕೆ ಇನ್ನೊಂದು ಕಾರಣವೂ ಇದ್ದಿತು. ಅದೇನಂದರೆ ಗುಡ್ಡಗಾಡು ಪ್ರದೇಶವನ್ನು ಪ್ರವೇಶ ಮಾಡುವ ಮಾರ್ಗದಲ್ಲಿ, ಮೊಗಲರು ಸೋತದ್ದಾದರೆ, ಅವರು ಮುಂದೆ ಸಾಗಿಬರಲು ಎಂದೂ ಮನಸು ಮಾಡುವದಿಲ್ಲೆಂದು ಪ್ರತಾಪನು ಭಾವಿಸಿದ್ದನು. ಹೀಗಾಗಿದ್ದಲ್ಲಿ ಮೊಗ ಲರಿಗೆ ಪ್ರತಾಪನ ಭೀತಿಯು ಪೂರ್ಣವಾಗಿ ಉಳಿಯುತ್ತಿತ್ತು. ಪ್ರತಾಪನಲ್ಲಿ ಈ ತರದ ಕೆಲಸ ಮಾಡುವನೆಂಬ ಪೂರ್ಣ ವಿಶ್ವಾಸವಿದ್ದಿತು. ಯಾಕಂದರೆ ಅವನು ಕೂಡಿ ಸಿದ ಸೈನ್ಯವನ್ನು ನೋಡುತ್ತಿರಲು ಸೋಲುವ ಸಂಭವವಿರಲಿಲ್ಲ. ಅದರಿಂದವನು ತಾನು ಸೋಲುವೆನೆಂಬದನ್ನು ಎಷ್ಟು ಮಾತ್ರವೂ ಮನಸಿನಲ್ಲಿ ತಂದಿರಲಿಲ್ಲ. ಆದರೆ ದೈವಗತಿಯು ವಿಪರೀತವಾಗಿತ್ತು; ಅದರಿಂದದು ಪ್ರತಾಪನು--ಮಹಾವೀರನೂ, ಅಸಂಖ್ಯ ಸ್ವಾಮಿಭಕ್ತ-ಸ್ವದೇಶಪ್ರಿಯ ಶೂರ ರಜಪೂತರ ನಾಯಕನೂ ಆದ ವನು ಪರಾಜಿತನಾಗುವಂತೆ ಮಾಡಿತು. ತಾನು ಕನಸುಮನಸಿನಲ್ಲಣಿಸದ ಪರಾಭ ವವು ಬಂದೊದಗಿದರೂ ಪ್ರತಾಪನು ಹೆದರಲಿಲ್ಲ; ಧೈರ್ಯಗುಂದಲಿಲ್ಲ; ಬಂದ ಯಾವತ್ತು ಸಂಕಟಗಳಿಗೆ ಎದೆಗೊಟ್ಟು ನಿಲ್ಲಲು ಅವನು ಸಿದ್ಧನಾಗಿದ್ದನು. ಒಂದು ವೇಳೆ ತಾನು ಸೋಶಲ್ಲಿ ಮೊಗಲರು ಬೆನ್ನು ಹತ್ತಿ ಬಂದು ಗೋಗುಂಡಾ ಮತ್ತು ಕಮಲಮೀರ ದುರ್ಗಗಳನ್ನು ಆಕ್ರಮಿಸುವರೆಂಬದನ್ನು ದೂರದರ್ಶಿಯಾದ ಪ್ರತಾ ಪನು ಮೊದಲೇ ತರ್ಕಿಸಿದನು; ವಿಜಯಿಗಳಾದ ಮೊಗಲರು ಮೊದಲು ಗೋಗುಂಡವನ್ನು ಮುತ್ತುವರೆಂದು ತಿಳಿದು, ತನ್ನ ಪರಿವಾರವನ್ನೆಲ್ಲ ಬೇರೆ ಕಡೆಗೆ
ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೧
ಗೋಚರ