ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fin೪ ಮಹಾರಾಣಾ ಪ್ರತಾಪಸಿಂಹ, ಹೊರತು ಬೇರೆ ಉಪಾಯವಿರಲಿಲ್ಲ; ಆದರೆ ಮಾನಸಿಂಹನು ಇದನ್ನು ಸಮ್ಮತಿಸ ಲಿಲ್ಲ. ಏನೇ ಆಗಲಿ, ಮಾನಸಿಂಹನು ರಜಪೂತನಾಗಿದ್ದನು; ಅವನು ಮೊಗಲರ ಸೇವೆಗಾಗಿ ಆತ್ಮವಿಕ್ರಯಮಾಡಿಕೊಂಡಿದ್ದರೂ, ಸ್ವಜಾತೀಯ ರಜಪೂತರ ದರಿದ್ರ ಮನೆಗಳನ್ನು ನಾಶಮಾಡುವದಕ್ಕೆ-ಅವರ ಹೊಟ್ಟೆಯಲ್ಲಿ ಹೋಗತಕ್ಕೆ ತುತ್ತನ್ನು ಕಸಿದುಕೊಳ್ಳುವದಕ್ಕೆ ಮಾನಸುಮಾಡಲಿಲ್ಲ ಸ್ವದೇಶಪ್ರೇಮಿಯಾದ ಪ್ರತಾಪ ಸಿಂಹನ ವಿಷಯದಲ್ಲಿರುವ ಮಾನಸಿಂಹನ ಆಂತರಿಕಭಕ್ತಿಯು ಇದಕ್ಕೆ ಬೇರೊಂದು ಗುಪ್ತ ಕಾರಣವಾಗಿದ್ದಿತು. ಸೈನಿಕರು ಮಾನಸಿಂಹನಿಗೆ ತಿಳಿಯದಂತೆ, ದೂರದಲ್ಲಿ ರುವ ಸ್ಥಾನಗಳಿಗೆ ಹೋಗಿ, ಖಾದ್ಯ ಪದಾರ್ಥಗಳನ್ನು ಸುಲಿಗೆಮಾಡಿ ತರುತ್ತಿದ್ದರು. ಆದರೆ ಮಾನಸಿಂಹನು ಇದನ್ನು ತಿಳಿದರೆ ಬಹಳ ಸಿಟ್ಟಿಗೇಳುತ್ತಿದ್ದನು. ಅವನು ಈ ರೀತಿಯಾಗಿ ಸುಲಿಗೆ ಮಾಡಬಾರದೆಂದು ಸೈನಿಕರೆಲ್ಲರಿಗೆ ಕಟ್ಟಪ್ಪಣೆ ಮಾಡಿದ್ದನು. ಕಡೆಯಲ್ಲಿ ಈ ಯಾವತ್ತೂ ಸಂಗತಿಗಳು ಬಾದಶಹನಾದ ಅಕಬರನಿಗೆ ಗೊತ್ತಾದವು. ಈ ಸಮಯದಲ್ಲಿ ಬಾದಶಹನು ಅಜಮಿರದಲ್ಲಿದ್ದನು. ಅವನು ಮಾನಸಿಂಹ ಮತ್ತು ಅಸಫಖಾನರನ್ನು ಕರೆಕಳುಹಿಸಿಕೊಂಡನು. ಮಾನಸಿಂಹನು ದರಬಾರದಲ್ಲಿ ಬಾದಶಹನ ದರ್ಶನ ತಕ್ಕೊಂಡನು. ಬಾದಶಹನು ಯುದ್ಧದ ತರು ವಾಯ ಶತ್ರುಗಳ ಬೆನ್ನು ಹತ್ತುವ ಕೆಲಸವನ್ನೇಕೆ ಮಾಡಲಿಲ್ಲ? ಶತ್ರುಗಳ ರಾಜ್ಯ ವನ್ನು ಸುಲಿಗೆಮಾಡಲಿಕ್ಕೆ ಸಮ್ಮತಿಯನ್ನೇಕೆ ಕೊಡಲಿಲ್ಲ? ಈ ಮೊದಲಾದ ವಿಷ ಯಗಳ ಸಲುವಾಗಿ ಮಾನಸಿಂಹನನ್ನು ತಿರಸ್ಕರಿಸಿದನು. ಇದಕ್ಕಾಗಿ ಬಾದಶಹನು ಮಾನಸಿಂಹನ ಮೇಲೆ ಬಹಳ ಸಿಟ್ಟಾಗಿದ್ದನು; ಇದರಿಂದ ಕೆಲವು ದಿವಸಗಳವರೆಗೆ ಮಾನಸಿಂಹನು ದರಬಾರದಲ್ಲಿ ಪ್ರವೇಶಿಸದಂತೆ ಅಪ್ಪಣೆಯಾಯಿತು.” ಈ ಕಡೆಯಲ್ಲಿ ಅರವಲೀ ಪರ್ವತದ ಪ್ರದೇಶದಲ್ಲಿ ಭಯಂಕರವಾದ ಮಳೆ ಯಾಗುತಲಿತ್ತು, ಮಾನಸಿಂಹನು ಹೋದನಂತರ ತುಸು ಸೈನಿಕರು ಬೇರೆ ಬೇರೆ ಕಡೆಯಲ್ಲಿದ್ದರು; ಅವಿಶ್ರಾಂತ ಮಳೆಯಿಂದ ಇವರಿಗೆ ಬಹಳ ತೊಂದರೆಯಾಯಿತು;

  • " When the distress of the army was inquired into, it appeared that, although the men were in such great straits, Kunwar Mausingh would not suffer any plundering of Rana Kika's (Pratap's ) country Tabakat-i-Akbari, Biot, Vol. V . 401; Bloch, P. 340. ಕೇವಲ ಮಾನಸಿಂಹನೊಬ್ಬನೆ. ಅಲ್ಲ, ಅಸಫಖಾನನೂ ಈ ಅಪರಾಧದಿಂದ ತಿರಸ್ಕೃತನಾದನೆಂದು ಬದಾವುನಿಯು ಹೇಳುತ್ತಿರುವನು.