ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೇವಾಡದ ಮುತ್ತಿಗೆ, ೧೬. •nnnnnnnnnnnAA An \ \n ` sh

  • * \ \10

ಮಾರ್ಗವನ್ನು ಬಂದುಮಾಡಿದಂತಾಗುತ್ತಿತ್ತು. ಈ ಕಾರಣದಿಂದಲೇ ಮೊಗಲರು ಈ ಮಾರ್ಗವನ್ನು ಬಂದುಮಾಡಿಕೊಂಡು ಕುಳಿತರು.* ಈ ಸಮಯದಲ್ಲಿ ದೇವರಾಸರದಾರನು ದಂಡು ಕೂಡಿಸಿಕೊಂಡು ಪುನಃ ಬಂಡಾಯಮಾಡಿದನು ರಜಪೂತರ ಆಲೋಚನೆಯು ಇದರ ಮೂಲಕಾರಣ ವಾಗಿತ್ತೆಂಬದನ್ನು ಹೇಳುವ ಕಾರಣವಿಲ್ಲ, ಅಂದರೆ ಶಿರೋಹಿ ಸರದಾರನು ರಜ ಪೂತರ ಹೇಳಿಕೆಯಂತೆ ಮೊಗಲರ ವಿರುದ್ಧವಾಗಿ ಬಂಡಾಯವನ್ನೆಬ್ಬಿಸಿದನು. ರಾಯಸಿಂಹ ಮತ್ತು ಹಾಸಿಮರು ಬಂದು ಶಿರೋಹಿಯನ್ನು ಮುತ್ತಿದರು. ದೇವ ರರಾಯನು ಈ ಸಮಯದಲ್ಲಿ ಶಿರೋಹಿಯಲ್ಲಿರಲಿಲ್ಲ; ಇವನು ಪರ್ವತಮಾಲೆ ಯಲ್ಲಿ ಆಶ್ರಯಹೊಂದಿದ್ದನು. ಶಿರೋಹಿಯನ್ನು ಮುತ್ತಿದ ತರುವಾಯ ಕೆಲವು ದಿವಸಗಳಾದ ಬಳಿಕ ರಾಯಸಿಂಹನು ತನ್ನ ಪರಿವಾರದವರನ್ನು ಶಿಬಿರಕ್ಕೆ ಕರೆ ಯಿಸುವ ವ್ಯವಸ್ಥೆ ಮಾಡಿದನು ಈ ವೇಳೆಯಲ್ಲಿ ದೇವರಾರಾಯನು ಹಾದಿಯಲ್ಲಿ ಈ ಪರಿವಾರದವರ ಮೇಲೆ ಅಕಸ್ಮಾತ್ತಾಗಿ ಬಿದ್ದು, ರಾಯಸಿಂಹನ ಕೆಲವು ಆತ್ಮೀ ಯರನ್ನು ಕೊಂದನು; ತರುವಾಯ ಅಬೂಸರ್ವತದಲ್ಲಿ ಹೋಗಿ ಅಡಗಿಕೊಂಡು ಕುಳಿತನು. ಆಗ ರಾಯಸಿಂಹನು ಶಿರೋಹಿಯನ್ನು ಕೈವಶಮಾಡಿಕೊಂಡು, ಅಬೂ ದುರ್ಗವನ್ನು ಮುತ್ತಿದನು. ಅಬೂದಂತಹ ಅತ್ಯುನ್ನತ ಪರ್ವತಶಿಖರದಲ್ಲಿರುವ ದುರ್ಭೇದ್ಯದುರ್ಗದಲ್ಲಿ ಆಶ್ರಯಹೊಂದಿದರೇನಾಯಿತು? ದೇವರರಾಯನಲ್ಲಿ ಈ ಮುತ್ತಿಗೆಯಿಂದ ಆತ್ಮರಕ್ಷಣೆಯನ್ನು ಮಾಡಿಕೊಳ್ಳುವ ಸಾಮರ್ಧವಿರಲಿಲ್ಲ. ಅದು ರಿಂದ ಅವನು ಅದನ್ನೊಪಾಯನಾಗಿ ಶತ್ರುಗಳ ಮರೆಹೊಕ್ಕನು. ರಾಯಸಿಂಹನು ಕಾವಲುಗಾರರೊಡನೆ ದೇವರಾರಾಯನನ್ನು ಬಾದಶಹನ ಹತ್ತರ ಕಳುಹಿಸಿದನು; ಮತ್ತು ತಾನು ಅರವಲೀ ಪರ್ವತದ ಪಶ್ಚಿಮಪಾದ ದೇಶದಲ್ಲಿಯ ಮಹಾರಾಣಾನ ಪದವನ್ನು ಬಂದುಮಾಡುವದಕ್ಕಾಗಿಯೂ, ರಾಣಾನ ಗತಿವಿಧಿಯನ್ನು ಅವಲೋಕಿ “ * The roads of ingresa aud egress form the Rana's country were closed ” A. N. ( Bev. ) III P 267. 8 ಅಬೂ ಅಥವಾ ಅರ್ಬುದಾಚಲವು ರಾಜಸ್ಥಾನದೊಳಗಿನದೊ೦ದು ಅತಿ ರಮಣೀಯ ವಾದ ಪಟ್ಟಣವು, ಮತ್ತು ಸ್ವಾಸ್ಥ್ಯ ನಿವಾಸವು ಇದು ಹಿಂದೂ ಮತ್ತು ಜೈನರ ಮಹಾತೀರ್ಥವು ಇದರ ಮಂದಿರಗಳು ಆಶೀವ ರಮಣೀಯವಾದವುಗಳೂ, ಆಶ್ಚರ್ಯವನ್ನು೦ಟುಮಾಡತಕ್ಕವುಗಳೂ ಆಗಿವೆ ಟಾಡ್ ಸಾಹೀಬರು ಇದಕ್ಕೆ Olympus of India ಎಂದು ಹೇಳಿದ್ದಾರೆ ಅಬೂ ಶಿಖರವು ರಾಜಸ್ತಾನದಲ್ಲಿಯ ಎಲ್ಲಕ್ಕೂ ಎತ್ತರವಾದ ಶಿಖರವು