ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೇವಾಡದ ಮುತ್ತಿಗೆ, Ar ಅವನ ಮುಖ್ಯ ಉದ್ದೇಶವಾಗಿರಲಿಲ್ಲ. ಮೊಗಲರು ಹಳದೀ ಘಟ್ಟದ ಯುದ್ಧದಲ್ಲಿ ಜಯಶಾಲಿಗಳಾಗಿದ್ದರೂ, ಅದರಿಂದಾವ ಲಾಭವೂ ಆಗಿರಲಿಲ್ಲ. ಮಾನಸಿಂಹ ನಂತಹ ವೀರರಿಂದಲೂ ಕೂಡ ಪ್ರತಾಪನ ದಮನಮಾಡುವದಾಗಲಿಲ್ಲ. ಪ್ರತಾಪ ಸಿಂಹನನ್ನು ಶಿಕ್ಷಿಸುವದು ಇಷ್ಟು ಕಠಿಣ ವ್ಯವಹಾರವಾಗಿರಬಹುದೆ? ಬಾದಶಹನು ಸ್ವತಃ ಇದ್ದು, ಚಿತೋಡದ ಯುದ್ಧದಲ್ಲಿ ಜಯ ಪಡೆದಿದ್ದನು ! ಮಹಾರಾಣಾನು ಈಗ ಮುಖ್ಯಮಯ ಸೈನ್ಯದ ಅಧಿಪತಿಯು, ವಿಶೇಷವಾಗಿ ಅವನೀಗ ಗೃಹ ಈಸೂ, ಧನಶೂನ್ಯನೂ, ಸಹಾಯಶೂನ್ಯನೂ ಆಗಿದ್ದಾನೆ. ಹೀಗಿರುವದರಿಂದ ರಾಣಾನಂತಹ ಕುದ್ರಶತ್ರುವನ್ನು ದಂಡಿಸುವದು, ಚಿತೋಡದ ಯುದ್ಧದಂತಹ ಕಠಿಣ ಕಾರ್ಯವಾಗಲಾರದು ಅಕಬರನು ಭಾವಿಸಿದ್ದೇನಂದರೆ'- ಈ ವರೆಗೆ ರಾಣಾನನ್ನು ಶಿಕ್ಷಿಸುವದಕ್ಕೆ-ರಜಪೂತರನ್ನು ಸಂಪೂರ್ಣವಾಗಿ ಪರಾಜಯ ಗೊಳಿಸದಿರುವದಕ್ಕೆ ಸೇನಾಪತಿಗಳ ಶಿಥಿಲತ್ವವೇ ಕಾರಣೀಭೂತವಾಗಿದೆ. ಸ್ವತಃ ನಾನು ಇದ್ದದ್ದಾದರೆ ಈ ರೀತಿಯಾಗುತ್ತಿರಲಿಲ್ಲ. ಈ ಸಾರೆ ಮೇವಾಡಕ್ಕೆ ನಾಲ್ಕೂ ಕಡೆಯಲ್ಲಿ ಮುತ್ತಿಗೆಯನ್ನು ಹಾಕಿದಲ್ಲಿ ಪ್ರತಾಪನು ನಿಶ್ಚಯವಾಗಿ ಸಿಗುವನು.” ಮೊಗಲರ ಯಶೋ-ಗೌರವವು ನಾಲ್ಕೂ ಕಡೆಯಲ್ಲಿ ಹಬ್ಬಿತ್ತು; ವಂಗ, ಬಿಹಾರ, ಮಾಳವ, ಗುಜರಾಧ ಮೊದಲಾದ ಎಲ್ಲ ಪ್ರದೇಶಗಳಲ್ಲಿ ಬಾದಶಹನ ವಿಜಯದುಂದುಭಿಯು ಬಾರಿಸುತ್ತಲಿತ್ತು ಪ್ರತಾಪನಂತಹ ಕುದ್ರ ವೈರಿಯೋರ್ವನನ್ನು ಅವನತನನ್ನಾಗಿ ಮಾಡಲಿಕ್ಕೆ ಸಮರ್ಥನಾಗದಿದ್ದಲ್ಲಿ, ಬಾದಶಹನ ಈ ಯಶೋರಾಶಿಯಲ್ಲಿ ಕಲಂಕದ ಆರೋಪವಾಗುತ್ತಲಿತ್ತು ಏನೇ ಆಗಲಿ, ಈ ಸಾರೆ ಕಾಲ ವಿಲಂಬವನ್ನು ಮಾಡದೆ, ಯಾವದೇ ರೀತಿಯಿಂದಾಗಲಿ, ಈ ಕಲಂಕಮೋಚನವನ್ನು ಮಾಡಿಕೊಳ್ಳಲೇಬೇಕು. ಇದಕ್ಕಾಗಿಯೇ ಅಕಬರನು ಸ್ವತಃ ದಂಡೆತ್ತಿ ಹೊರಟನು. ಅಕಬರನು ಗೋಗುಂಡಕ್ಕೆ ಹೋಗುವ ಮಾರ್ಗದಲ್ಲಿರುವ ಮೋಹಾನೀ ನಗರದಲ್ಲಿ ತನ್ನ ಶಿಬಿರವನ್ನು ಸ್ಥಾಪಿಸಿದನು. ಹಾದಿಯಲ್ಲಿ ಎಷ್ಟೋ ರಜಪೂತರು ಬಂದು, ಅಕಬರನ ಆಧೀನತ್ವವನ್ನೊಪ್ಪಿಕೊಂಡರು; ಆದರೆ ಮಹಾರಾಣಾನ ಸಂಬಂಧವಾದ ಯಾವ ಸುದ್ದಿಯೂ ಗೊತ್ತಾಗಲಿಲ್ಲ. ಬಾದಶಹನು ಬಹು ಸೈನಿಕ ರೊಡನೆ ಯಾತ್ರಿಕರನ್ನು ಅವಲೀ ಪರ್ವತದ ಮಾರ್ಗವಾಗಿ ಗುಜರಾಧಕ್ಕೆ ಕಳು ಹಿಸಿಕೊಟ್ಟನು. ಇವರು ಹಳದೀಘಟ್ಟದ ಗಿರಿ-ಮಾರ್ಗದಲ್ಲಿ ಹಾಯ್ದು ಗೋಗುಂಡ