ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ, ೧೨೦ wwA ಕ್ಕೆ ಹೋದರು; ತರುವಾಯ ಅಲ್ಲಿಂದ ಅರವಲೀ ಪರ್ವತವನ್ನು ದಾಟಿ, ಪಣ* ವಾರಾ ಎಂಬ ಸ್ಥಳಕ್ಕೆ ಮುಟ್ಟಿದರು. ಈ ಸ್ಥಳದಿಂದ ರಾಜಾಭಗವಾನದಾಸ, ಕುಮಾರ ಮಾನಸಿಂಹ, ಕುತಬಖಾ, ಕಾಶೀಮಖಾ ಮೊದಲಾದ ಸೇನಾಪತಿಗಳು ಬಾದಶಹನ ಅಪ್ಪಣೆಯಂತೆ ಗೋಗುಂಡಕ್ಕೆ ತಿರುಗಿಬಂದರು; ಮತ್ತು ಪರ್ವತದ ಅಂಚಿನಲ್ಲಿ ಅತ್ತಿತ್ತ ತಿರುಗಾಡಿ, ಪ್ರತಾಪಸಿಂಹನನ್ನು ಹುಡುಕಹತ್ತಿದರು. ಕೂಲಿ ಜಖಾ, ಅಸಫಖಾ, ನರೇಬಖಾ ಮೊದಲಾದ ಪ್ರಖ್ಯಾತ ಸೇನಾಪತಿಗಳು ಯಾತ್ರಿಕ ರನ್ನು ಕರೆದುಕೊಂಡು ಪಣವಾರದಿಂದ ಹೊರಟು ಈದರಕ್ಕೆ ಮುಟ್ಟಿದರು.+ - ಮೋಹಾನಿಯಲ್ಲಿ ಮೂರು ಸಾವಿರ ಅಶ್ವಾರೋಹೀ ಸೈನಿಕರೊಡನೆ ಬಾಜೀ ಖಾ, ಸೆರಿಫಖಾ, ಮುಜಾಹಿದಖಾ ಮೊದಲಾದ ಸೇನಾಪತಿಗಳನ್ನಿರಿಸಿ, ಅಕಬರನು ಉಳಿದ ಸೈನ್ಯವನ್ನು ತೆಗೆದುಕೊಂಡು, ಉದಯಪುರದ ಕಡೆಗೆ ಹೊರಟನು. ತರು ವಾಯ ಬಾದಶಹನು ಮರ್ದಾರಿಯಾ ಎಂಬ ಸ್ಥಳದಲ್ಲಿ ಕೆಲವು ಜನ ದಕ್ಷರಾದ ಸೇನಾಪತಿಗಳನ್ನಿರಿಸಿದನು; ಮತ್ತು ಅನೇಕ ಸ್ಥಳಗಳಲ್ಲಿ ಮೊಗಲಸೈನ್ಯವು ವಾಸ ಮಾಡತೊಡಗಿತು. ಇದರಿಂದ ಪ್ರತಾಪನು ಗಿರಿ-ಗುಹೆಯಿಂದ ಹೊರಬಿದ್ದ ಕೂಡ ಲೇ, ಅವನಿಗೆ ಯೋಗ್ಯ ದಂಡನೆಯನ್ನು ವಿಧಿಸಬಹುದಾಗಿದ್ದಿತು. ಈ ಮೇರೆಗೆ ಉತ್ತರದಿಕ್ಕಿನಲ್ಲಿ ಮುತ್ತಿಗೆಯು ಹಾಕಲ್ಪಟ್ಟಿತು.

  • ಈ ಪಣವಾರವು ಶಿರೋಹಿಯಲ್ಲಿರುವದು, ಸದ್ಯಃ ಇದಕ್ಕೆ ಪಿಂಡವಾರವೆಂಬ ಹೆಸರಿದೆ ಯೆಂದು ಹೇಳಬಹುದು ಗೋಗುಂಡದಿಂದ ಹೊರಟು, ಅರವಲಿಯನ್ನು ದಾಟ, ಈ ಸ್ಥಳಕ್ಕೆ ಬರುವದಕ್ಕರಾಜಮಾರ್ಗವಿದೆ

+ ರಾಜಸ್ತಾನದ ದಕ್ಷಿಣದಲ್ಲಿ, ಮತ್ತು ಅಹಮ್ಮದನಗರದ ಉತ್ತರದಲ್ಲಿ ಇದರವೆಂಬ ಸಣ್ಣ ಸಂಸ್ಥಾನವಿದೆ ಇದರವು ಇದರ ರಾಜಧಾನಿಯಾಗಿದೆ ಅಕಬರನ ಕಾಲದಲ್ಲಿ ಒಬ್ಬ ರಜಪೂತ ಸರದಾರನು ಇದರ ಅಧಿಪತಿಯಾಗಿದ್ದನು Bombay Gezetter, Vol. I Part 1 P. 232.

  • ಈ ಸ್ಥಳವು ಚಿತೋಡ ವಿಭಾಗದಲ್ಲಿರುವದು, Jairett, Vol. II. P. 274,

- “ Srinilarly, brave man were appointed to other places in order that whenever that wicked strife-monger ( Rana Partap ) should come out of the rayınes of disgrace, he might tuffer retribution.” Akbarnama, ( Beveridge ) III P 274,