ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೇವಾಡದ ಮುತ್ತಿಗೆ, ೧೨ ಅಕಬರನು ಉದಯಪುರದ ಮೇಲೆ ಹಾಯ್ದು, ದಕ್ಷಿಣಾಭಿಮುಖನಾಗಿ ವಂಶವಾರದ• ಮೇರೆಯಲ್ಲಿ ನಡೆದಿದ್ದನು. ಕುತುಬಖಾ ಮತ್ತು ಭಗವಾನದಾಸರು ಗುಡ್ಡಗಾಡುಪ್ರದೇಶದ ಬಹು ಸ್ಥಳಗಳಲ್ಲಿ ರಾಣಾನನ್ನು ಹುಡುಕಿದರು; ಇವರಿಗೆ ಅವನ ಸಂಬಂಧದ ಯಾವ ಸುದ್ದಿಯೂ ತಿಳಿಯಲಿಲ್ಲ. ಕಾರಣ ಇವರು ಬಾದಶ ಹನ ಅಪ್ಪಣೆಯಿಲ್ಲದೆ, ಅವಸರದಿಂದ ಬಂದು ಅಕಬರನ ದರ್ಶನ ತಕೊಂಡರು. ಬಾದಶಹನು ಇವರು ಕೃತಕಾರ್ಯರಾಗದೆ ಬಂದಿರುವದನ್ನು ತಿಳಿದು, ಇವರನ್ನು ತಿರಸ್ಕರಿಸಿ, ಸೇನಾಪತಿಗಳಾದ ಫಕರುದ್ದೀನ ಮತ್ತು ಜಗನ್ನಾಧರನ್ನು ಉದಯಪುರ ದಲ್ಲಿಯೂ, ಸೈಯದ ಅಬ್ದುಲ್ ಮತ್ತು ಭಗವಾನದಾಸರನ್ನು ಉದಯಪುರದ ಪ್ರವೇಶಮಾರ್ಗದಲ್ಲಿಯೂ ಇರಿಸಿ, ತಾನು ವಂಶವಾರದ ಕಡೆಗೆ ಹೊರಟು ಹೋದನು. ಇದರಿಂದ ಮೇವಾಡದ ಪೂರ್ವದಿಕ್ಕಿನಲ್ಲಿ ಮುತ್ತಿಗೆಯನ್ನು ಹಾಕಿ ದಂತೆ ಆಯಿತು. ಅಕಬರನು ವಂಶವಾರವನ್ನು ಮುಟ್ಟಿದ ತರುವಾಯ, ಅಲ್ಲಿಯ ರಾವಳನಾದ ಪ್ರತಾಪನ್ನೂ, ಡೊಂಗರಪುರದ ರಾವಳನಾದ ಆಸ್ಕರಣನೂ ಬಾದಶಹನ ಆಧೀನ ತ್ವವನ್ನು ಸ್ವೀಕರಿಸಿದರು. ಇದರಿಂದ ಬಾದಶಹನಿಗೆ ಪರಮಾನಂದವಾಯಿತು; ಯಾಕಂದರೆ ಈ ರಾವಳರು ಪ್ರತಾಪಸಿಂಹನಂತೆ ಶಿಶೋದಿಯಾ ಕುಲದವರಾಗಿ ದ್ದರು. ಇದರಿಂದ ಮಹಾರಾಣನ ಜಾತೀಯ ಶ್ರೇಷ್ಠತ್ವವು ಉಳಿಯಿತೆಲ್ಲಿ? ಎಲ್ಲರೂ ತಮ್ಮ ಜಾತಿಗೌರವವನ್ನು ಕಳೆದುಕೊಂಡರೂ ಸಹ, ಮಹಾರಾಣಾನು ತನ್ನ ಪ್ರತಿ ಜೈಯಿಂದ ಚ್ಯುತನಾಗುವವನಾಗಿರಲಿಲ್ಲವೆಂಬದನ್ನು ಬಾದಶನು ತಿಳಿದುಕೊಳ್ಳ ಬೇಕಾಗಿದ್ದಿತು. ಪ್ರತಾಪನು ಆರನ್ನೂ ನಂಬಿರಲಿಲ್ಲ. ಎಲ್ಲರೂ ಆತ್ಮವಿಕ್ರಯ ಮಾಡಿ ಕೊಂಡರೂ, ಪ್ರತಾಪನು ಹೆದರುವವನಾಗಿರಲಿಲ್ಲ. ತಾನೊಬ್ಬನೆಯಾದರೂ ವಂಶ ಗೌರವವನ್ನು ಕಾಯ್ದುಕೊಳ್ಳುವೆನೆಂಬ ಆತ್ಮವಿಶ್ವಾಸವು ಅವನಲ್ಲಿದ್ದಿತು. ಡೊಂಗರ ಪುರದ ರಾವಳನ ಪೂರ್ಣ ಅವನತಿಗೆ ಇನ್ನೊಂದು ಸಂಗತಿಯು ಕಡಿಮೆಯಾಗಿ ದ್ದಿತು; ಅದೂ ಕೂಡ ಆಗಿಹೋಯಿತು. ಇವನು ಬಾದಶಹನನ್ನು ಸಂತುಷ್ಟಪಡಿ ಸುವದಕ್ಕಾಗಿ, ತನ್ನ ಪರಮಸುಂದರಿಯಾದ ಕನೈಯನ್ನು ಅಕಬರನಿಗೆ ಸರ್ಮಪಣ • ಇದು ಮೇವಾಡದ ದಕ್ಷಿಣದಲ್ಲಿರುವ ಒಂದು ಸಣ್ಣ ಸಂಸ್ಥಾನವು ಇಲ್ಲಿಯ ರಾವಳರು ಶಿಶೋದಿಯಾ ಕುಲದ ಒಂದು ಶಾಖೆಯವರಾಗಿದ್ದರು,

  1. Badaoni ( Love ) II P. 249, A. N III, P. 274,