ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೇವಾಡದ ಮುತ್ತಿಗೆ, ೧೨೩ འའའའའ, ,ཀའ༩༩༢༢ འའའའ ་ ་༩༨་འའའའ༩ ೧೧೧೧ ೧೧ 1೧೧೧೧ - ೧ An ೧೧ ೧n \ \ ಮತ್ತು ಅವರು ರಂಜಿತಭಾಷೆಯಿಂದ ರಜಪೂತರನ್ನು ಓಡಿಸಿದೆವೆಂಬ ಸುದ್ದಿಯನ್ನು ಬಾದಶಹನ ದರಬಾರಕ್ಕೆ ಕಳುಹಿಸುತ್ತಿದ್ದರು; ಆದರೆ ಈ ಸುದ್ದಿಯು ಮುಟ್ಟಿತೋ ಇಲ್ಲವೋ ಎನ್ನುವಷ್ಟರಲ್ಲಿ ರಜಪೂತರು ಪುನಃ ಕಾಣಿಸಿಕೊಳ್ಳುತ್ತಿದ್ದರು; ಇವರ ಭಿಲ್ಲಸೇನೆಯ ಬಾಣಗಳ ಆಘಾತದಿಂದ ಮೊಗಲ ಶಿಬಿರದಲ್ಲಿ ಹಾಹಾಕಾರವೇಳು ತಿದ್ದಿತು. ಮಾನಸಿಂಹನು ರಜಪೂತರನ್ನು ಸೋಲಿಸಿ ಓಡಿಸಿದೆನೆಂದು ಬಾದಶಹನಿಗೆ ತಿಳುಹಿಸಿ, ಶಿಫಾರಸು ಪಡೆಯಬೇಕೆಂದು ಬಹುಸಾರೆ ಪ್ರಯತ್ನ ಮಾಡಿದನು, ಆದರೆ ಮುಂದೆ ನಡೆಯುತ್ತಿರುವ ಘಟನಾವಳಿಗಳಿಂದ ಇವನ ಈ ವರ್ಣನೆಯ ಪತ್ರಗಳೆಲ್ಲ ಅಸತ್ಯವಾದವುಗಳೆಂದು ಗೊತ್ತಾಗುತ್ತಲಿದ್ದಿತು ಈ ಮೇರೆಗೆ ಚಳಿಗಾಲವು ಸಮಾ ಸ್ತವಾಯಿತು. ಅರವಲೀ ಪರ್ವತದ ದಾರುಣವಾದ ಶೀತದಲ್ಲಿ, ನಿರಾಶ್ರಯ ಕಂದ ರಗಳಲ್ಲಿ, ಪ್ರತಾಪನ ಪರಿವಾರ ವರ್ಗವೂ, ಪ್ರಭುಭಕ್ತರಾದ ರಜಪೂತರೂ ಎಂತಹ ಭೀಷಣ ಕಷ್ಟವನ್ನು ಸಹಿಸಿದರೆಂಬದನ್ನು ಭಾಷೆಯಿಂದ ವರ್ಣನೆ ಮಾಡಲಿಕ್ಕೆ ಬರುವಂತಿಲ್ಲ. ಮಕ್ಕಾ-ಯಾತ್ರಿಕರ ರಕ್ಷಕರಾಗಿ ಹೊರಟ ಬಾದಶಾಹೀ ಸೈನಿಕರು ಇದರ ದಲ್ಲಿ ತಮ್ಮ ಶಿಬಿರವನ್ನು ಬಿಟ್ಟಿದ್ದರು; ಈ ಸೈನ್ಯಕ್ಕೆ ಕೂಲಿಜಖಾನನು ಮುಖ್ಯ ಸೇನಾಪತಿಯಾಗಿದ್ದನು. ಬಾದಶಹನು ಈದರದಿಂದ ಬೇರೆ ಸೇನಾಪತಿಯನ್ನು ಕಳಿಸಿ, ಯಾತ್ರಿಕರನ್ನು ಸುರತಕ್ಕೆ ಮುಟ್ಟಿಸುವ ಆಲೋಚನೆಯಲ್ಲಿದ್ದನು; ಆದರೆ ಗುಜರಾಧದ ಮೇರೆಯಲ್ಲಿ ಯಾತ್ರಿಕರ ಮೇಲೆ ಬಹಳ ಅತ್ಯಾಚಾರವು ನಡೆಯುವ ದೆಂಬ ಸುದ್ದಿಯನ್ನು ಕೇಳಿ, ಬಾದಶಹನು ಕೂಲಿಜಖಾನನನ್ನೇ ಯಾತ್ರಿಗಳೊಡನೆ ಕಳುಹಿಸಿದನು; ಮತ್ತು ಅಸಫಖಾನನನ್ನು ಈದರದಲ್ಲಿಯ ಸೈನಿಕರ ಅಧಿನಾಯಕ ನನ್ನಾಗಿ ಮಾಡಿದನು. ಈ ಸುಸಮಯದಲ್ಲಿ ಇದರದ ರಜಪೂತ ರಾಜನಾದ ನಾರಾಯಣದಾಸನು ಭಯಂಕರವಾದ ಬಂಡಾಯವನ್ನೆಬ್ಬಿಸಿದನು. ಇವನು ವಂಶವಾರ ಮತ್ತು ಡೊಂಗರಪುರಗಳ ರಾವಳರ ಉದಾಹರಣೆಯಂತೆ ನಡೆದು ಕೊಂಡಿರಲಿಲ್ಲ; ಇವನು ಮೊದಲಿನಿಂದಲೂ ಮಹಾರಾಣಾನ ಪವಿತ್ರ ಆದರ್ಶದ ಅನುಕರಣಮಾಡಿ, ಛಾಯೆಯಂತೆ ರಾಣಾನ ಪಂಥವನ್ನವಲಂಬಿಸಿದ್ದನು. ಮೊಗಲ ಸೈನಿಕರು ಇದರಕ್ಕೆ ಬಂದೊಡನೆಯೇ ಇವನು ರಾಣಾನಂತೆ ಪರ್ವತ ವನ್ನಾಶ್ರಯಿಸಿದನು; ಮತ್ತು ಅಡಮಿಅಡವಿಯಲ್ಲಿ ಅಲೆದು ಸೈನ್ಯವನ್ನು ಕೂಡಿಸ ತೊಡಗಿದನು. ಕೂಲಿಜಖಾನನು ಗುಜರಾಧಕ್ಕೆ ಹೊರಟುಹೋದ ಕೂಡಲೆ,