ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಲಮೀರದುರ್ಗ ೧೨೭ ಅಲ್ಲಿ ವಾಸಮಾಡತೊಡಗಿದನು; ಮತ್ತು ಆಹಾರದ ಪದಾರ್ಥಗಳನ್ನೂ, ಮತ್ತು ಇತರ ಯುದ್ಯೋಪಕರಣಗಳನ್ನೂ ಕೂಡಿಸತೊಡಗಿದನು. ಯಾಕಂದರೆ ಮಳೆ ಗಾಲವು ಮುಗಿದ ಕೂಡಲೇ ಪುನಃ ಮೊಗಲರು ದಂಡೆತ್ತಿ ಬರುವವರಾಗಿದ್ದರು. ಅದರಿಂದ ಒಂದು ವರ್ಷದವರೆಗೆ ಮೊಗಲರು ಮುತ್ತಿಗೆಯನ್ನು ಹಾಕಿದರೂ ತಾವು ತಡೆದುಕೊಳ್ಳಲಿಕ್ಕೆ ಸಮರ್ಥರಾಗುವಷ್ಟು ತಯಾರಿಯನ್ನು ರಜಪೂತರು ಮಾಡಿ ಕೊಳ್ಳಬೇಕಾಗಿದ್ದಿತು. ಕಾರಣ ಇವರು ಈ ಸಿದ್ಧತೆಯನ್ನು ಮಾಡಿಕೊಂಡು, ಯುದ್ದದ ಮಾರ್ಗವನ್ನು ನಿರೀಕ್ಷಿಸುತ್ತ ಕುಳಿತುಕೊಂಡರು. ಷೋಡಶ ಪರಿಚ್ಛೇದ. = > ಕಮಲಮೀರದುರ್ಗ, ಸಮನೆಲದಿಂದತ್ಯುನ್ನತ | ಸುಮನೋಹರ ತಾಣದಲಿರುವ ಕಮಲಮೀರಂ || ವಿಮಲಗಿರಿ. ದುರ್ಗಮಿರ್ಪುದ | ಸಮಗೋಡೆಗಳಿ೦ ಬಳೆಯಿಸಿ ರಿಪುದುರ್ಭ ದ್ಯ೦ || ೧ || ಕಮಲಮೀರವು ಅತಿ ಮನೋಹರವಾದ ಸ್ಥಳವು, ಮೇವಾಡದ ವಾಯವ್ಯ ಮೇರೆಯಿಂದ ಅರವಲೀ ಪರ್ವತಮಾಲೆಯು ವಿಸ್ತ್ರತವಾಗುತ್ತ ಪೂರ್ವದ ಕಡೆಗೆ ಬಹು ದೂರದ ವರೆಗೆ ಹೋಗಿದೆ. ಈ ಸೀಮಾಂತರದ ಸಮೀಪದಲ್ಲಿರುವ ಒಂದು ಎತ್ತರವಾದ ಗಿರಿ-ಶಿಖರದಲ್ಲಿ ಕಮಲರದುರ್ಗವಿದೆ. ಈ ಕೋಟೆಯನ್ನು ಕಟ್ಟಿ ಸಿದವನ ರಣಕೌಶಲ್ಯವನ್ನೂ, ಸೌಂದರ್ಯಜ್ಞಾನವನ್ನೂ ನಾವು ಹೊಗಳದಿರಲಾ ರೆವು. ಮೇವಾಡದ ಪೂರ್ವಭಾಗದಲ್ಲಿ ಚಿತೋಡಕ್ಕೆ ಮಹತ್ವವಿರುವಂತೆ, ಪಶ್ಚಿಮ ಭಾಗದಲ್ಲಿ ಕಮಲಮೀರವು ಅತ್ಯಂತ ಮಹತ್ವದ ಸ್ಥಳವು. ಚಿತೋಡವು ಪ್ರಾಂತರ ಮಧ್ಯದಲ್ಲಿ ಒಂದು ಶಿಖರದ ಮೇಲಿರುವದು; ಕಮಲಮೀರವು ಪರ್ವತಮಾಲೆಯ ಮಧ್ಯದಲ್ಲಿ ಗಿರಿ-ಶಿಖರದಲ್ಲಿರುವದು. ಇವೆರಡೂ ಮೇವಾಡದ ರಾಜಧಾನಿಗಳಾ ಗಿವೆ. ಚಿತೋಡವು ಶತ್ರುಗಳ ಅಧೀನವಾದಾಗೆಲ್ಲ, ಕಮಲಮಿರವು ಮಹಾರಾ ಣಾರ ಆಶ್ರಯಸ್ಥಾನವಾಗಿದೆ. ಇದು ರಾಜಧಾನಿಯೇಕೆ ಆಯಿತು? ಇದರಲ್ಲಿ ವಿಶೇಷತ್ವವೇನು? ಇದನ್ನು ನಾವು ಇಲ್ಲಿ ಹೇಳುವೆವು.