ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ಮಹಾರಾಣಾ ಪ್ರತಾಪಸಿಂಹ, ಕಮಲಮೀರದ ಉತ್ತರದಿಂದ ಅರವಲೀ ಪರ್ವತವು ಕ್ರಮವಾಗಿ ಎತ್ತರ ವಾಗುತ್ತ ಬಂದಿದೆ. ಇದರ ಪೂರ್ವದಿಕ್ಕಿನಲ್ಲಿ ಪರ್ವತಮಾಲೆಯು ಸಾಲುಸಾಲಾಗಿ ಕ್ರಮವಾಗಿ ಮುಂದಕ್ಕೆ ಹೋಗಿದೆ. ಪಶ್ಚಿಮ ದಿಕ್ಕಿನಲ್ಲಿಯ ಪರ್ವತವು ಕಡಿಮೆ ಎತ್ತರವಾದದ್ದೂ, ದೂರದ ವರೆಗೆ ವಿಸ್ತಾರವಾಗದ್ದೂ ಅದೆ. ಈ ದಿಕ್ಕಿನಿಂದ ಪರ್ವತವನ್ನು ಹತ್ತುವದು ಬಹು ಕಠಿಣವು; ಯಾಕಂದರೆ ಮಾರ್ಗವು ಸರಿಯಾ ದದ್ದಿಲ್ಲ. ಎತ್ತರವಾದ ಪರ್ವತವು ಒಮ್ಮೆಲೇ ಇಲ್ಲದಂತಾಗಿದೆ. ಅದರಿಂದ ಶತ್ರು ಗಳು ಈ ದಿಕ್ಕಿನಿಂದ ಪರ್ವತವನ್ನೇರಿ ಬರಲಾರರು. ಪೂರ್ವದಿಕ್ಕಿನಿಂದ ಶತ್ರುಗಳು ಏರಿಬರಬಹುದಾಗಿದೆ, ಆದರೆ ಈ ಮಾರ್ಗವೂ ಅತ್ಯಂತ ಬಿಕ್ಕಟ್ಟಿನದಿರುವದು. ಈ ದಿಕ್ಕಿನಿಂದ ಶತ್ರುಗಳು ಬರಬೇಕಾದಲ್ಲಿ ಅನೇಕ ಪರ್ವತದ ಸಾಲುಗಳನ್ನು ದಾಟಿ ಬರಬೇಕಾಗುವದು; ಕೆಲವೆಡೆಯಲ್ಲಿ ಪರ್ವತ, ಬೇರೆ ಕೆಲವೆಡೆಯಲ್ಲಿ ಭಯಂಕರ ವಾದ ಅರಣ್ಯ; ಈ ಯಾವತ್ತನ್ನೂ ದಾಟಿ ಬರುವದು ಅತೀವ ದುಸ್ತರವಾದು ದೆಂಬದನ್ನು ಹೇಳಬೇಕಾಗಿಲ್ಲ, ಕಾರಣ ಕಮಲಮೀರವು ಈ ದಿಕ್ಕಿನಲ್ಲಿ ಒಂದು ತರದಿಂದ ದುರ್ಭೇದ್ಯವಾಗಿದೆಯೆಂದು ಹೇಳಬಹುದು. ದಕ್ಷಿಣದಿಕ್ಕಿನಲ್ಲಿ ಪರ್ವತದ ಸಾಲುಗಳು ಬಹು ದೂರದ ವರೆಗೆ ಹಬ್ಬಿವೆ; ಇದರ ಮಾರ್ಗಗಳು ಬಹು ಭಯಾ ನಕವಾಗಿವೆ; ಅದರಿಂದ ಈ ದಿಕ್ಕಿನಿಂದ ಶತ್ರುಗಳು ಬರುವಂತಿರಲಿಲ್ಲ. ಶತ್ರುಗಳು ನಾಲ್ಕೂ ದಿಕ್ಕಿನ ಸ್ಥಿತಿಯನ್ನವಲೋಕಿಸಿ, ಕಮಲವಿರಕ್ಕೆ ಬರಬೇಕಾದಲ್ಲಿ, ಬಹುಶಃ ಪೂರ್ವದಿಕ್ಕಿನಿಂದಲೇ ಬರುವ ಪ್ರಯತ್ನ ಮಾಡುತ್ತಿದ್ದರು. ಪೂರ್ವಭಾಗದಲ್ಲಿ “ನಾಧದ್ವಾರದಿಂದ ಮಾರ್ಗವು ಬನಾಸ ನದಿಯ ಒಂದು ಸಣ್ಣ ಶಾಖೆಯ ದಂಡೆಗುಂಟ ಸಾಗಿ, ಮುಂದೆ ಪರ್ವತದ ಪ್ರದೇಶವನ್ನು ಪ್ರವೇಶಿ ಸುವದು. ಈ ಸ್ಥಳದಲ್ಲಿ ಸುತ್ತಲೂ ನೋಡಿದರೆ, ಸಮನೆಲವಿರುವಲ್ಲಿ ಹೊಲಗಳಿ ದ್ದದ್ದು ಕಂಡುಬರುವದು. ಇಲ್ಲಿ ಸಾಕಷ್ಟು ಧಾನ್ಯವು ಬೆಳೆಯುವದು; ಸುಂದರವಾದ ಕಬ್ಬಿನ ತೋಟಗಳು ಕಂಡುಬರುವವು; ಬೇರೆ ಬೇರೆ ಕಡೆಯಲ್ಲಿ ಅಸಂಖ್ಯ ಮಾವಿನ ಗಿಡಗಳಿರುವದು ಕಾಣಿಸುವದು; ಮತ್ತು ಇವುಗಳಲ್ಲಿ ಸಾಕಷ್ಟು ಹಣ್ಣುಗಳಾಗು ವವು. ಈ ಸ್ಥಳದ ನಿರ್ಮಲ ಹವೆಯು ಜೀರ್ಣದೇಹದಲ್ಲಿ ನವೀನ ಶಕ್ತಿಯನ್ನುಂಟು ಮಾಡುವದು; ಬೇನೆಯ ಮನುಷ್ಯನಲ್ಲಿ ಆಹಾರದ ರುಚಿಯನ್ನು ಹುಟ್ಟಿಸುವದು.

  • ಉದಯಪುರದಿಂದ ೨೨ ಮೈಲು ಉತ್ತರದಲ್ಲಿ ಬನಾರ ನದಿಯ ದಕ್ಷಿಣ ತೀರದಲ್ಲಿರುವ ಪ್ರಾಚೀರವೇಷ್ಟಿತ ಪಟ್ಟಣವು, ಇಲ್ಲಿರುವ ಕಾನಾಯಿ ಅಥವಾ ಕೃಷ್ಣನ ಗುಡಿಯು ವಿಖ್ಯಾತವಾಗಿದೆ,

Y