ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

had ಮಹಾರಾಣಾ ಪ್ರತಾಪಸಿಂಹ vvv , V V V V V V V vs ಅತ್ಯಲ್ಪ ಭಾಗವು ಮಾತ್ರ ಪಶ್ಚಿಮ ದಿಕ್ಕಿಗೆ ಹೋಗುತ್ತಲಿತ್ತು. ಮಹಾರಾಣಾ ಕುಂಭನು ಕಮಲಮೀರದಲ್ಲಿ ಈ ಅಪೂರ್ವವಾದ ದುರ್ಗವನ್ನು ಕಟ್ಟಿಸಿದ್ದಾನೆ; ಕಾರಣ ಇದಕ್ಕೆ ರಾಣಾನ ಹೆಸರನ್ನನುಸರಿಸಿ ಕುಂಭಮೇರು ದುರ್ಗವೆಂದೆನ್ನುವರು. ರಾಣಾ ಕುಂಭನು ಹುಟ್ಟುವದಕ್ಕಿಂತ ಬಹು ಕಾಲ ಮೊದಲೇ ಈ ಕಮಲರವ ಪ್ರಖ್ಯಾತ ಸ್ಥಳವಾಗಿದ್ದಿತು. ಇದು ಜೈನರ ಒಂದು ಮುಖ್ಯ ಯಾತ್ರೆಯ ಸ್ಥಳವು; ಸುಮಾರು ಎರಡು ಸಾವಿರ ವರುಷಗಳ ಹಿಂದೆ ಇಲ್ಲಿ ನಿರ್ಮಿತವಾದ ಜೈನಮಂದಿರ ಗಳಲ್ಲಿ ಕೆಲವು ಈಗಲೂ ಇವೆ. ಆದರೆ ಈ ದುರ್ಗ-ನಿರ್ಮಾಣ ಕೌಶಲ್ಯವೇ ಕಮಲಮೊರದ ಶೋಭೆಯನ್ನೂ ಗೌರವವನ್ನೂ ಬೆಳೆಸಿದೆ. ಈ ಗಿರಿ-ದುರ್ಗವಿರುವ ದರಿಂದಲೇ ಕಮಲಮಿರವು ಪ್ರತಾಪನ ಆಶ್ರಯಸ್ಥಳವಾಯಿತು. ಮೊಗಲರ ನಿರ್ದಯ ಹಸ್ತದಿಂದ ರಜಪೂತರ ಗೌರವ-ರಕ್ಷಣೆಯನ್ನು ಮಾಡುವದಕ್ಕಾಗಿ ಪ್ರತಾಪನು ತನ್ನ ಪ್ರಜೆಗಳಿಗೆಲ್ಲ ಗುಡ್ಡಗಾಡು ಪ್ರದೇಶದಲ್ಲಿ ಆಶ್ರಯ ಹೊಂದು ವಂತೆ ಅಪ್ಪಣೆ ಮಾಡಿದನೆಂದು ಹಿಂದೆ ಹೇಳಿದ್ದೇವೆ. ಈ ಸಮಯದಲ್ಲಿ ಕೈಲಬಾರ ನಗರವೇ ಪ್ರಜೆಗಳ ವಾಸಸ್ಥಳವಾಯಿತು. ಕೈಲಬಾರದ ವಾಸಭೂಮಿಯೂ, ಸುತ್ತ ಲಿರುವ ಅರಣ್ಯವೂ ಪ್ರಜಾಜನರಿಂದ ತುಂಬಿಹೋಯಿತು. ರಜಪೂತರು ಕೈಲಬಾ ರದ ಸಮೀಪದಲ್ಲಿರುವ ನಾನಾ ಸ್ಥಳಗಳಲ್ಲಿ ಮೊಗಲರೊಡನೆ ಅನೇಕ ಸಣ್ಣ ದೊಡ್ಡ

  • ಪ್ರತಾಪಸಿಂಹನ ಸಂತತಿಯವನಾದ ಮಹಾರಾಣು ರಾಜಸಿಂಹನು ಬನಾಸ ನದಿಗೆ ಕೂಡುತ್ತಿರುವ ಒಂದು ನಿರಾಕರಣಿಯ ಹಾದಿಯನ್ನು ಕಟ್ಟಿ, ರಾಜಸಮುದ್ರವೆ೦ಬ ಒ೦ದು ಅಪೂರ್ವವಾದ ಮಡುವನ್ನು ನಿರ್ಮಿಸಿದ್ದಾನೆ ಈ ಕಾಲದಿಂದ ಪರ್ವತದ ಜಲಪ್ರವಾಹವು ತುಸು ಪಶ್ಚಿಮಕ್ಕೆ ಹೋಗುತ್ತದೆ.
  • ಈ ಯಾವತ್ತು ಗುಡಿಗಳು ಜೈನಸಾಮಾಟನಾದ ಸ೦ಪ್ರತಿಯ ಕಾಲದಲ್ಲಿ ನಿರ್ಮಿತವಾದ ವೆಂದು ಜನರು ಹೇಳುತ್ತಿರುವರು, ಸಂಪ್ರತಿಮಹಾರಾಜನು ಅಶೋಕನ ಮೊಮ್ಮಗನು, ಕ್ರಿ ಶ. ಪೂರ್ವದಲ್ಲಿ ೨೩೨ನೇ ವರ್ಷ ಅಶೋಕನು ತೀರಿದ ತರುವಾದ ಅವನ ಮೊಮ್ಮಕ್ಕಳು ಅರಸರಾ ದರು ದಶರಥನು ಇವನ ರಾಜ್ಯದ ಪೂರ್ವಭಾಗವನ್ನೂ, ಸಂಪ್ರತಿಯು ಪಶ್ಚಿಮಭಾಗವನ್ನೂ ಹೊಂದಿದರು, ಅಶೋಕನು ಅನೇಕ ಸಾವಿರ ಬೌದ್ಧ ಸ್ತೂಪಗಳನ್ನು ನಿರ್ಮಿಸಿದಂತೆ, ಸ೦ಪ್ರತಿಯು ಜೈನರ ಗುಡಿಗಳನ್ನು ಕಟ್ಟಿಸಿದನೆಂದು ಹೇಳುತ್ತಿರುವರು See Bombay Gazetteer, Vol. I Part 1 P. 15 Smith's Early History (3rd edition) P 193 Tod's Rajasthan, Vol. I PP. 238, 525.