ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ha ಕಮಲಮೀರದುರ್ಗ, vvvv vv vvvv - VyY vy / /w\ yyy

  1. vA \

\ \ /VS vs ಯುದ್ಧಗಳನ್ನು ಮಾಡಿದ್ದಾರೆ. ಅದರಿಂದ ಕೈಲಬಾರವು ಐತಿಹಾಸಿಕ ದೃಷ್ಟಿಯಿಂದ ಒಂದು ಮಹತ್ವದ ಸ್ಥಳವಾಗಿದೆ.x ಕಮಲಮಿರಕ್ಕೆ ಹೋಗಬೇಕಾದರೆ ಕೈಲಬಾರದಿಂದ ಮೇಲಕ್ಕೆ ಹೋಗ ಬೇಕೆಂದು ನಾವು ಹಿಂದೆ ಹೇಳಿದ್ದೇವೆ. ಕಮಲರ ನಗರದಿಂದ ಒಂದು ಮೈಲಿನ ಮೇಲಿರುವ ಆಡಾಯಿಲ ಬೋಲವು, ದುರ್ಗವನ್ನೇರುವದರ ಮೊದಲನೆಯ ತೋರಣವು ಕ್ರಮವಾಗಿ ಹುಲ್ಟಾಮೀಲವನ್ನು ದಾಟಿ, ಹನುಮಾನ್ ಸೋಲಿಗೆ ಹೋಗಬೇಕಾಗುವದು, ಈ ಸ್ಥಳದಿಂದ ಕೋಟೆಯ ಗೋಡೆಗಳು ಆರಂಭವಾ ಗಿವೆ. ಕೋಟೆಯೊಳಗೆ ಪ್ರವೇಶಮಾಡಿದ ತರುವಾಯ ಕ್ರಮವಾಗಿ ವಿಜಯ ಸೋಲ, ರಕ್ತದೋಲ, ರಾಮಸೋಲಗಳೆಂಬ ಮೂರು ಬಾಗಿಲಗಳನ್ನು ದಾಟಿ, ಎಲ್ಲಕ್ಕೂ ಕಡೆಯಲ್ಲಿರುವ ಚೌಗುಣತೋರಣಕ್ಕೆ ಹೋಗಬೇಕಾಗುವದು. ಈ ಕೋಟೆಗೆ ಕೇವಲ ಒಂದೇ ಗೋಡೆಯಿಲ್ಲ; ಅಂಕುಡೊಂಕಾದ ಅನೇಕ ಗೋಡೆಗಳು ಕೋಟೆಯನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರಿದಿವೆ ಇದರಿಂದ ಕೋಟೆಯಲ್ಲಿ ಪ್ರವೇಶಿಸುವದಕ್ಕೆ ಒಂದೇ ಮಾರ್ಗವಿರುವದು; ಇದನ್ನುಳಿದು ಬೇರೆ ರೀತಿಯಿಂದ ದುರ್ಗದಲ್ಲಿ ಹೋಗಲಿಕ್ಕೆ ಬರುವಂತಿಲ್ಲ. ಕೋಟೆಯಿಂದ ಹೊರಬೀಳುವದಕ್ಕಾಗಿ ಇರುವ ಒಂದೆರಡು ಗುಪ್ತ ಮಾರ್ಗಗಳನ್ನು ದುರ್ಗವಾಸಿಗ ಇನ್ನುಳಿದು ಇತರರು ಅರಿತಿರಲಿಲ್ಲ. ದೂರದಿಂದ ನೋಡಲು ದುರ್ಗದ ಸುತ್ತಲೂ ಕೆಲವೆಡೆಯಲ್ಲಿ ಒಂದೇ ಗೋಡೆಯಿದ್ದಂತೆ ಬೋಧೆಯಾಗುತ್ತಿದ್ದಿತು; ಆದರೆ ನಿಜ ಸ್ಥಿತಿಯು ಹೀಗಿರಲಿಲ್ಲ. ಒಂದು ಗೋಡೆಯನ್ನು ದಾಟಿ, ಒಳಗೆ ಹೋದ ತರು ವಾಯ ಮತ್ತೊಂದು ಗೋಡೆಯನ್ನು ದಾಟಬೇಕಾಗುತ್ತಿದ್ದಿತು; ಆದರೂ ಕೋಟೆ ಯೊಳಗೆ ಪ್ರವೇಶವಾಗುತ್ತಿರಲಿಲ್ಲ; ಎದುರಿನಲ್ಲಿ ಮತ್ತೊಂದು ಗೋಡೆಯು ಕಾಣಿ ತಿದ್ದಿತು. ಈ ಗೋಡೆಗಳನ್ನು ದಾಟುವ ಸ್ಥಳದಲ್ಲಿರುವ ಪರ್ವತದ ಒಳಭಾಗದಲ್ಲಿ ಸೈನಿಕರು ಯಾವ ರೀತಿಯಿಂದಡಗಿಕೊಂಡಿರುವರು? ಅಧವಾ ಸೈನಿಕರು ಅಡಗಿರು ರೋ ಇಲ್ಲವೋ? ಈ ಮೊದಲಾದ ಸಂಗತಿಗಳು ಮುತ್ತಿಗೆಯನ್ನು ಹಾಕಿದ ಶತ್ರು ಗಳಿಗೆ ಎಷ್ಟು ಮಾತ್ರವೂ ತಿಳಿಯುವಂತಿರಲಿಲ್ಲ. ಇದಕ್ಕಾಗಿಯೇ ಕಮಲಮಿರವು x There is not a rock or a stream that has not goine legend attached to it, connected with these times ” Tod, VolI P. 523,