ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ M: - ಮಹಾರಾಣಾ ಪ್ರತಾಪಸಿಂಹ - - vy / /VyY \/vv

v \

  1. vv /

vv v VY / vvv vv vvvvvvv ದುರ್ಭೇದ್ಯ ದುರ್ಗವಾಗಿತ್ತು ಅಂತೆಯೇ ಪ್ರತಾಪಸಿಂಹನು ದುರ್ಗಮವಾದ ಮಾರ್ಗದಲ್ಲಿ ನಡೆದು, ತನ್ನ ಸೈನಿಕರನ್ನು ಕರೆದುಕೊಂಡು, ಈ ಚಿರಪರಿಚಿತವಾದ ದುರ್ಗದಲ್ಲಿ ಆಶ್ರಯ ಹೊಂದಿದ್ದನು. ಪ್ರತಾಪನು ಕಮಲಮೀರಕ್ಕೆ ಬಂದಾಗ್ಗೆ, ಮಳೆಗಾಲವಿದ್ದಿತು; ಅದರಿಂದ ರಜಪೂತ ಸೈನಿಕರು ಕೆಲವು ದಿವಸ ವಿಶ್ರಾಂತಿಯನ್ನು ತೆಗೆದುಕೊಂಡರು. ಮಳೆ ಗಾಲವು ಹೋಯಿತು; ಮೊಗಲರು ದಂಡೆತ್ತಿ ಬರಲಿಲ್ಲ. ಪ್ರಚಂಡವಾದ ಚಳಿಯು ಬೀಳಹತ್ತಿತು; ಆದರೂ ಪ್ರತಾಪನು ದುರ್ಗವನ್ನು ಬಿಟ್ಟು ಹೋಗದೆ, ಸೈನಿಕರನ್ನೂ ಯುದ್ದಕ್ಕೆ ಬೇಕಾಗುವ ಸಾಮಾನುಗಳನ್ನೂ ಸಂಗ್ರಹಿಸತೊಡಗಿದನು. ಇಂತಹ ಭೀಷಣವಾದ ಚಳಿಗಾಲದಲ್ಲಿ ಮೊಗಲರು ಕೋಟೆಯನ್ನಾಕ್ರಮಿಸುವದಕ್ಕೆ ಬರ ಲಾರರೆಂದು ಪ್ರತಾಪನು ಭಾವಿಸಿದನು, ಇವನ ತರ್ಕದಂತೆ ಮೊಗಲರು ಬರಲಿಲ್ಲ; ಚಳಿಗಾಲವು ಹೋಗುತ್ತಲೇ ಮೊಗಲರು ಪುನಃ ದಂಡೆತ್ತಿ ಬಂದರು (೧೫೭೮). ಈ ಸಮಯದಲ್ಲಿ ಬಾದಶಹನು ಕಮಲಮೀರದಲ್ಲಿನ ಪ್ರತಾಪನನ್ನು ಮುತ್ತು ವದಕ್ಕೆ ನವೀನ ಸೈನ್ಯವನ್ನು ಕಳುಹಿಸಿಕೊಟ್ಟನು, ಶಹಬಾಜಖಾನನು ಈ ಸೈನ್ಯದ ಅಧಿಪತಿಯಾಗಿದ್ದನು ಮಾನಸಿಂಹನು ಇನ್ನೂ ರಾಜಸ್ತಾನದ ಆ ಗುಡ್ಡಗಾಡು ಪ್ರದೇಶದಲ್ಲಿದ್ದನು. ಬಾದಶಹನು ಇವನಿಗೂ, ಭಗವಾನದಾಸನಿಗೂ ಶಹಬಾಜ ಖಾನನನ್ನು ಹಿಂಬಾಲಿಸಿ ಹೋಗುವದಕ್ಕೆ ಅಪ್ಪಣೆ ಮಾಡಿದನು, ಇವರೆಲ್ಲರು ತನ್ನ ಸೈನ್ಯವನ್ನು ತೆಗೆದ್ದುಕೊಂಡು, ನಾಧದ್ವಾರದ ಮಾರ್ಗವಾಗಿ ಕಮಲಮೀ ರಕ್ಕೆ ಹೊರಟರು. ಶಹಬಾಜಖಾನನು ಕಮಲಮೂರ ದುರ್ಗವು ನಿಶ್ಚಯವಾಗಿಯೂ ತನ್ನ ಕೈವಶವಾಗುವದೆಂದು ಭಾವಿಸಿದನು. ಕಮಲಮೀರವು ದುರ್ಭೇದ್ಯವಾದ ದುರ್ಗ ವೆಂದು ಖ್ಯಾತವಾಗಿತ್ತು; ಈ ಕೋಟೆಯನ್ನು ಕೈವಶಮಾಡಿಕೊಂಡಲ್ಲಿ ಬಾದ ಶಹನ ದರಬಾರದಲ್ಲಿ ವಿಶೇಷ ಮರ್ಯಾದೆಯನ್ನು ಹೊಂದುತ್ತಿದ್ದನು; ಆದರೆ ಮಹಾವೀರನಾದ ಭಗವಾನದಾಸನೂ, ಮಾನಸಿಂಹನೂ ತನ್ನೊಡನೆ ಇರುವಲ್ಲಿ, ಈ ಮರ್ಯಾದೆಯು ತನಗೊಬ್ಬನಿಗೆ ಸಂಪೂರ್ಣವಾಗಿ ದೊರೆಯುವ ಸಂಭವವಿ ದ್ವಿಲ್ಲ. ಮೇಲಾಗಿ ಈ ಈರ್ವರು ಸಹಾಯಕರು ರಜಪೂತರು; ಮಹಾರಾಣಾನ ವಿಷಯವಾಗಿ ಭಕ್ತಿಯುಳ್ಳವರು; ಕಾರಣ ಕೋಟೆಯನ್ನು ಕೈವಶಮಾಡಿಕೊಳ್ಳುವ ದಕ್ಕಾಗಿ ಯಾವದಾದರೊಂದು ಕುಟಿಲವಿಚಾರವನ್ನು ಮಾಡಿದಲ್ಲಿ, ಇಲ್ಲವೆ ಏನಾ