ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ r೧೩೪ ••••••• vvvvy ವದು ಸಾಹಜಿಕವ. ಈ ನೀರಿನ ತೊಂದರೆಯು ಗ್ರೀಷ್ಟ ಕಾಲದಲ್ಲಿ ಬಹಳವಾಗಿ ಆಗುತ್ತಿರುವದು. ಕಮಲಮೀರದಲ್ಲಿ - ನಗುಣ ' ವೆಂಬ ಹೆಸರಿನ ಉತ್ಕೃಷ್ಟವಾದ ಬಾವಿಯಿದ್ದಿತು; ಇದೇ ಒಳಗಿರುವ ಯಾವತ್ತು ಜನರಿಗೆ ನೀರಿನ ಪೂರೈಕೆಯನ್ನು ಮಾಡುತ್ತಲಿತ್ತು. ಶಿರೋಹಿಯ ದೇವರಾ ಸರದಾರನು ಕೆಲವು ದಿವಸಗಳ ಹಿಂದೆ ಮೊಗಲರ ವಶನಾಗಿ, ಆತ್ನ ಮರ್ಯಾದೆಯನ್ನು ಮರೆತುಹೋದನೆಂಬದನ್ನು ಹಿಂದೆ ಹೇಳಿದ್ದೇವೆ. ಇವನು ಮೇಲಿನ ಬಾವಿಯ ಸಂಬಂಧದ ಸುದ್ದಿಯನ್ನು ಮೊಗಲರಿಗೆ ತಿಳುಹಿಸಿದನೆಂದು ಹೇಳುತ್ತಿರುವರು. ಮೊಗಲರು ಗೌಪ್ಯವಾಗಿ ಕೃತ್ರಿಮ ರೀತಿ ಯಿಂದ ಇದರ ನೀರನ್ನು ಕೆಡಿಸಿಬಿಟ್ಟರು + ಈ ಕೆಟ್ಟ ನೀರನ್ನು ರಜಪೂತರು ಕುಡಿ ಯಹತ್ತಿದ್ದರಿಂದ, ರೋಗಗ್ರಸ್ತರಾಗತೊಡಗಿದರು, ಪ್ರತಾಪನು ಇಂತಹ ಸಮಯ ದಲ್ಲಿ ಕೋಟೆಯನ್ನು ಬಿಟ್ಟು ಹೋಗುವದೇ ಉತ್ತಮವೆಂದು ಭಾವಿಸಿದನು. ಇವನು ಶೋಣಿಗುರು ಸರದಾರನ ಮೇಲೆ ದುರ್ಗ-ರಕ್ಷಣೆಯ ಭಾರವನ್ನಿರಿಸಿ, ರಾತ್ರಿಯ ಕಾಲದಲ್ಲಿ ಅಧಿಕಾಂಶ ಸೈನಿಕರನ್ನು ಕರೆದುಕೊಂಡು, ಗುಪ್ತ ಮಾರ್ಗದಿಂದ ಕೋ ಟೆಯನ್ನು ಬಿಟ್ಟು ನಡೆದನು | ಮೊಗಲರು ಇದನ್ನು ಎಷ್ಟು ಮಾತ್ರವೂ ತಿಳಿಯ ಲಿಲ್ಲ. ಯಾಕಂದರೆ ಕೋಟೆಯಿಂದ ಹೊರಬೀಳಲಿಕ್ಕಿರುವ ಗುಪ್ತ ಮಾರ್ಗಗಳಿರು ವದನ್ನು ಅವರು ತಿಳಿದಿರಲಿಲ್ಲ. ಮರುದಿವಸ ಪ್ರಾತಃಕಾಲದಲ್ಲಿ, ದುರ್ಗದ ಬಾಗಿಲಲ್ಲಿರುವ ದೇವರ ಗುಡಿ ಯ ಸಮೀಪದಲ್ಲಿ ಭಯಂಕರವಾದ ಯುದ್ಧವಾಯಿತು. ರಜಪೂತ ಸೈನಿಕರು ಬಹು ಶತ್ರುಗಳನ್ನು ಕೊಂದರು. ಕಡೆಯಲ್ಲಿ 'ಆತ್ಮಜೀವನಬಲಿಯನ್ನು ಕೊಟ್ಟು ಬಿಟ್ಟರು. ಶೋಣಿಗುರು ಸರದಾರನ ವೀರತ್ವವು ಅಮಾನುಷಿಕವಾದುದು; ಇವನು ಕಡೆತನಕ ಕೋಟೆಯನ್ನು ರಕ್ಷಿಸಿ, ಕಡೆಯಲ್ಲಿ ಯುದ್ಧಭೂಮಿಯಲ್ಲಿ ಮರಣವನ್ನು _t Rajasthan, Vol. I P 277, ↑ Blast Vol. V P. 419- ರಾಣಾನು ಸನ್ಯಾಸಿಯ ವೇಷದಿಂದ ರಾತ್ರಿಯ ಕಾಲದಲ್ಲಿ ಕೋಟೆಯಿಂದ ಪಲಾಯನ ಮಾಡಿದನೆಂದು ಕೆಲವರು ಹೇಳಿದ್ದಾರೆ. Masir-ulamra, Vol. II P. 593; Blochmana's Ain, P. 500, ಬೆವರಿಜ್ ಸಾಹೇಬರು ರಾಣಾನು ಸನ್ಯಾಸಿಯ ವೇಷದಿಂದ ಹೋದನೆಂಬ ಸಂಗತಿಯನ್ನು ನಂಬುವದಿಲ್ಲ. Vol. III 340 ಟಾಡ್ ಸಾಹೇಬರು ಬರೆದದ್ದೇನಂದರೆ- “ Partap •thence withdrew to chaoad, ”