ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಲಮೀರದುರ್ಗ ೧೩೩ ಹೊಂದಿದನು. ತನ್ನ ಅಮೃತಮಯವಾದ ಕವಿತೆಯಿಂದ ಪ್ರತಾಪನ ವೀರತ್ವದ ಕಥೆಯನ್ನು ಪ್ರಸಿದ್ಧ ಮಾಡಿದ, ಓಜಸ್ವಿನೀ ಭಾಷೆಯಿಂದ ನಿರ್ಜಿವಾಣದಲ್ಲಿಯೂ ಸಂಜೀವಿನೀ ಶಕ್ತಿಯನ್ನು ಂಟುಮಾಡಿದ, ಉತ್ಸಾಹಗೀತೆಯಿಂದ ರಜಪೂತ ವೀರ ರರನ್ನು ಕಠೋರವ್ರತವನ್ನಾಚರಿಸುವಂತೆ ಮಾಡಿದ, ಚಾರಣದೇವನು ಈ ಯುದ್ದ ದಲ್ಲಿ ಮಡಿದನು. ರಜಪೂತರಲ್ಲಿ ಉತ್ಸಾಹವನ್ನುಂಟುಮಾಡುವ ವೀರಗಾಥೆಯನ್ನು ನಿರ್ಮಾಣಮಾಡಿದ ಚಾರಣದೇವನಿಲ್ಲದಂತಾದರೂ, ರಜಪೂತರ ಉತ್ಸಾಹವು ಕಡಿಮೆಯಾಗಲಿಲ್ಲ. ರಜಪೂತರ ಮುಖ್ಯ ಆಶ್ರಯಸ್ಥಾನವಾದ ಕಮಲಮಿರವು ಶತ್ರುಗಳ ವಶವಾದರೂ, ಆಶ್ರಯಹೀನನಾದ ಪ್ರತಾಪನು ವ್ರತಹೀನನಾಗಲಿಲ್ಲ, ಯಾವನ ಸಲುವಾಗಿ ಇಷ್ಟು ಪ್ರಯತ್ನ ಮಾಡಬೇಕಾಯಿತೋ ಆ ಮಹಾ ರಾಣಾನು ತನ್ನ ಕೈಯಿಂದ ತಪ್ಪಿಸಿಕೊಂಡು ಹೋದ ಸಂಗತಿಯನ್ನು, ಶಹಬಾಜಿ ಖಾನನು ಕಮಲಮಿರ ದುರ್ಗವು ಕೈವಶವಾದನಂತರ ತಿಳಿದನು. ಕಾರಣ ಇವನು ಇನ್ನು ಇಲ್ಲಿ ವ್ಯರ್ಥವಾಗಿ ಕಾಲಹರಣ ಮಾಡುತ್ತ ಕುಳಿತುಕೊಳ್ಳುವದು ಸರಿಯಲ್ಲವೆಂದು ಭಾವಿಸಿದನು. ಅದರಿಂದಿವನು ಗಾಜೀಖಾನನೆಂಬ ಸೇನಾಪತಿಗೆ ಕೋಟೆಯ ಅಧಿಕಾರವನ್ನು ಒಪ್ಪಿಸಿ, ತಾನು ಪ್ರತಾಪನನ್ನು ಹುಡುಕುವದಕ್ಕಾಗಿ ದಕ್ಷಿಣಾಭಿಮುಖನಾಗಿ ನಡಿದನು.

  • “They ( Isoghuls ) encountered a large body of Rajputs posted at a gate near the temple, who made a firm stand, but were cut to pieces and fort was secured " Akbarnama (Elliot ) Vo1 VI PP 58-9

... ಸನ್ ೧೫೭೮ ನೇ ಎಪ್ರಿಲ ೪ನೇ ತಾರೀಖಿನ ದಿವಸ ( ಚೈತ್ರಮಾಸದ ಮಧ್ಯಭಾಗದಲ್ಲಿ ) ಶಹಬಾಜಖಾನನು ಕಮಲವಿರದುರ್ಗವನ್ನು ಕೈವಶಮಾಡಿಕೊಂಡನು.