ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

na ಮಹಾರಾಣಾ ಪ್ರತಾಪಸಿಂಹ, ಸಪ್ರದಶ ಪರಿಚ್ಛೇದ. ಕಠೋರ ಪರೀಕ್ಷೆ, ಕೌಶಿಕನು ಹರಿಶ್ಚಂದ್ರನ | ಮಾಸತ್ವವನು ಪರಿಕಿಸಲು ಕಾಡಿದ ತೆರದಿ೦ || ದೀ ಸುಪ್ರತಾಪವೀರನ | ಸುಸವ ನೋಡಲಕ ಬರನು ಮನದ೦ದಿರ್ದ೦ || ೧ || ಪ್ರತಾಪಸಿಂಹನು ಕಮಲಮೀರದಿಂದ ಹೊರಟು, ಗೋಗುಂಡ ಇಲ್ಲವೆ ಉದಯ ಅಸುರಕ್ಕೆ ಹೋಗಿರಬಹುದೆಂದು, ಶಹಬಾಜಖಾನನು ಭಾವಿಸಿದನು. ಅದರಂತೆ ಇವನು ಮರದಿವಸವೇ ಗೋಗುಂಡಕ್ಕೆ ಬಂದು ಮುಟ್ಟಿದನು; ಈ ಪರಿತ್ಯಕ್ಕೆ ನಗರವು ಸಹಜವಾಗಿ ಇವನ ಕೈವಶವಾಯಿತು. ತರುವಾಯ ಇವನು ಅದೇ ರಾತ್ರಿ ಹೊರಟು, ಉದಯಪುರಕ್ಕೆ ಮುಟ್ಟಿದನು; ಉದಯಪುರವು ಹೆಸರಿಗೆ ಮಾತ್ರ ರಜಧಾನಿಯಾಗಿದ್ದು, ಅಲ್ಲಿ ಕೋಟೆ ಮೊದಲಾದವುಗಳ ರಚನೆಯಾಗಿರಲಿಲ್ಲ. ಹೀಗಿದ್ದರೂ ಶಹಬಾಜಖಾನನು ಅಲ್ಲಿರುವ ತುಸು ಜನರ ಧಾನ್ಯಾದಿಗಳನ್ನು ಸುಲಿಗೆ ಮಾಡಿದನು. ಇಲ್ಲಿಯೂ ಶಹಬಾಜಖಾನನಿಗೆ ಪ್ರತಾನು ಸಿಗಲಿಲ್ಲ. ಈ ಸ್ಥಳದಿಂದ ಶಹಬಾಜಖಾನನು ಕಮಲಮಿರ ಕೋಟೆಯನ್ನು ಗೆದ್ದು ಕೊಂಡ ಸಂತೋಷದ ಸುದ್ದಿಯನ್ನು ಬಾದಶಹನಿಗೆ ತಿಳುಹಿಸಿದನು. ಈ ಸಮಯದಲ್ಲಿ ಅಕ ಬರನು ಲಾಹೋರದಲ್ಲಿದ್ದನು; ಅವನು ಈ ವೀರಸೇನಾಪತಿಗಳಿಗೆ ಸಾಕಷ್ಟು ಬಹುಮಾನ ಕೊಡುವ ಅಪ್ಪಣೆಯನ್ನು ಮಾಡಿದನು.* ಶಹಬಾಜಖಾನನು ಉದಯಪುರದಿಂದ ಪುರ-ಮಂಡಲಗಳ ವರೆಗಿರುವ ಗುಡ್ಡಗಾಡು ಪ್ರದೇಶದಲ್ಲಿ ೫೦, ಮತ್ತು ಪ್ರಾಂತರಪ್ರದೇಶದಲ್ಲಿ ೩೫ ಬೇರೆ ಬೇರೆ ಸ್ಥಳಗಳನ್ನು ಗೊತ್ತು ಮಾಡಿ, ಅಲ್ಲಿ ಸೈನಿಕರನ್ನಿರಿಸಿದನು. ತರುವಾಯ ಇವನು ಹರವತಿಯ ಬಂಡಾಯವನ್ನು ಮುರಿದು, ರಾಜಧಾನಿಗೆ ತಿರುಗಿ ಹೋದನು. ಕಮಲಮೀರವನ್ನು ಗೆದ್ದು ಕೊಳ್ಳುವ ಮೊದಲೇ ರಾಜಾಭಗವಾನದಾಸ ಮತ್ತು

  • Akbartama ( Beveridge ) Vol. III PP. 340-41 note

+ Blochman P-400 ಪುರ ಮತ್ತು ಮಂಡಲಗಳು ಬೇರೆ ಬೇರೆಯಾದ ಅತಿ ಪ್ರಾಚೀನ ಪಟ್ಟಣಗಳು ಇವು ಉದಯಪುರದ ಆಗ್ನೆಯ ಮೂಲೆಯಲ್ಲಿ ೬೦-೭೦ ಮೈಲುಗಳ ಮೇಲಿನ Ra- Gaz- Vol- III P- 50