ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ಮಹಾರಾಣಾ ಪ್ರತಾಪಸಿಂಹ سيبرمرمرمرمر ಅವರು ಪ್ರತಾಪನು ಎಲ್ಲಿರುವನೆಂದದನ್ನು ಗೊತ್ತು ಹಚ್ಚಿ ಮೊಗಲರಿಗೆ ತಿಳಿಸುತ್ತಿ ದ್ದರು. ಬೇರೆ ಕೆಲವರು ಪ್ರತಾಪನ ಸಲುವಾಗಿ ಹೋಗುತ್ತಿರುವ ಆಹಾರದ ಸದಾ ರ್ಧಗಳಿಗೆ ತಡೆಯನ್ನುಂಟುಮಾಡುತ್ತಿದ್ದರು. ಅಗುಣಾ-ಪಣೇರಾ ಮೊದಲಾದ ಸ್ಥಳಗಳ ಜನರು ಪ್ರತಾಪನಿಗೆ ಬೇಕಾಗುವ ಸಾಮಾನುಗಳನ್ನು ಪೂರೈಸಿಕೊಡು ತಿದ್ದರು. ಅಮಿಶಹನೆಂಬೊರ್ವ ರಜಪೂತ ಕುಲಾಂಗಾರನು ಈ ಮಾರ್ಗವನ್ನು ತಡೆದು, ಪ್ರತಾಪನಿಗೆ ಸಾಮಾನುಗಳು ಮುಟ್ಟದಂತೆ ಮಾಡಿದನು.* ಈ ಸಮಯ ದಲ್ಲಿ ಫರೀದಖಾನನೆಂಬ ಮೊಗಲರ ಸೇನಾಪತಿಯು ಚಪ್ಪನಪ್ರದೇಶವನ್ನಾಕ್ರಮಿಸಿ ದನು; ಮತ್ತು ದಕ್ಷಿಣ ದಿಕ್ಕಿನಿಂದ ಚಾಂದಾನಗರದ ಅಭಿಮುಖವಾಗಿ ಮುಂದೆ ಸಾಗಿದನು ಈಗ ಪ್ರತಾಪನು ನಾಲ್ಕೂ ದಿಕ್ಕಿನಲ್ಲಿ ಶತ್ರುಗಳಿಂದ ಪರಿವೇಷ್ಟಿತನಾ ದನು; ಇವನಿಗಾಗಿ ಬರುತ್ತಿರುವ ಸಾಮಾನುಗಳು ಬರದಂತಾದವು, ಹೊರಬಿದ್ದು ಹೋಗುವ ಮಾರ್ಗವು ಬಂದಾಯಿತು, ಕಡೆಯಲ್ಲಿ ಪ್ರತಾಪನು ಬಹು ಶ್ರಮಬಟ್ಟು ಚಾತುರ್ಯದಿಂದ ಚಾಂದಾನಗರವನ್ನು ಬಿಟ್ಟು ನಡೆದನು. ಮಾನಸಿಂಹ, ಶಹಬಾ ಜಖಾ, ಮೊಹಬತಖಾ ಫರಿದಖಾ, ಮೊದಲಾದ ಪ್ರಮುಖ ಮೊಗಲ ಸೇನಾಪ ತಿಗಳು ಪ್ರತಾಪನ ವಿರುದ್ಧವಾಗಿ ಶಸ್ತ್ರ ಹಿಡಿದು ನಿಂತುಕೊಂಡಿದ್ದರು; ಮೊಗಲರ ಅಪರಿಮಿತವಾದಅರ್ಧಬಲವೂ, ಅಗಣಿತ ಸೈನ್ಯಬಲವೂ ಪ್ರತಾಪನ ವಿರುದ್ಧವಾಗಿ, ಉಪಯೋಗಿಸಲ್ಪಡುತ್ತಿತ್ತು. ಇಂತಹ ಭೀಷಣ ಪ್ರಸಂಗದಲ್ಲಿಯೂ ಕೂಡ ಪ್ರತಾ ಪನು ಅಚಲನಾಗಿದ್ದನು. ಅವನ ಪ್ರತಿಜ್ಞೆಯು ಸ್ಥಿರವಾಗಿದ್ದಿತು; ವ್ರತಭಂಗಮ ಡಲು ಎಷ್ಟು ಮಾತ್ರವೂ ಇಚ್ಚಿಸಲಿಲ್ಲ. ಪ್ರತಾಪನು ಚಾಂದಾಪಟ್ಟಣವನ್ನು ಬಿಟ್ಟ ತರುವಾಯ ಅವನಿಗೆ ನಿರ್ದುಷ್ಟ ವಾದ ಯಾವ ಆಶ್ರಯಸ್ಥಾನವೂ ಉಳಿಯಲಿಲ್ಲ. ಇವನು ತನ್ನ ಅನುಚರರೊಡನೆ ಆ ಭಿಲ್ಲಪ್ರದೇಶದ ಕಂದರ-ಕಂದರಗಳಲ್ಲಿ ಅಲೆಯತೊಡಗಿದನು. ಭಿಲ್ಲರು ಅನಾ ರ್ಯರು-ಕಾಡುಜನರು ಆಗಿದ್ದರೂ, ಪರಮ ವಿಶ್ವಾಸಿಕರಾಗಿದ್ದರು; ಮತ್ತು ಮಹಾರಾಣಾನ ಪರಿವಾರವರ್ಗದ ರಕ್ಷಣೆಯ ಭಾರವನ್ನು ಭಿಲ್ಲರೇ ವಹಿಸಿದ್ದರು. ಪ್ರತಾಪನ ಹೆಂಡತಿಯೂ, ಶಿಶುವೂ, ಇತರರೂ ಭಿಲ್ಲರಿಂದ ಪ್ರತಿಪಾಲಿತರಾಗತೊ ಡಗಿದರು. ಭಿಲ್ಲರೇ ಇವರಿಗೆ ಆಹಾರದ ಪದಾರ್ಥಗಳನ್ನೊದಗಿಸಿಕೊಡುತ್ತಿದ್ದರು.

  1. Rajasthan, Vol- I - 277 note• ಆಗುಣಾ ಮತ್ತು ಪರಾ ಇವು ಗುಡ್ಡಗಾಡು ಪ್ರದೇಶದಲ್ಲಿರುವ ಹಳ್ಳಿಗಳು,