ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರೋರಪರೀಕ್ಷೆ ೧೩ ಹಗಲು-ರಾತ್ರಿ ಇವರನ್ನು ಕಾಯುತ್ತಿದ್ದರು; ಶತ್ರುಗಳು ಸಮೀಪದಲ್ಲಿ ಬಂದದ್ದಾ ದರೆ ಇವರನ್ನು ಪೆಟ್ಟಿಗೆಯಲ್ಲಿ ಕುಳ್ಳಿರಿಸಿಕೊಂಡು, ಗುಪ್ತ ಮಾರ್ಗದಿಂದ ಪಲಾಯನ ಮಾಡುತ್ತಿದ್ದರು. ಕೆಲಕೆಲವು ಪ್ರಸಂಗದಲ್ಲಿ ಪ್ರತಾಪನಿಗೂ ಅವನ ಪರಿವಾರ ವರ್ಗ ದವರಿಗೂ ಒಂದು ವಾರದವರೆಗೂ ದರ್ಶನವಾಗುತ್ತಿದ್ದಿಲ್ಲ ಪ್ರತಾಪನು ತನ್ನ ರಾಜ ನಿಮ್ಮ ಸೈನಿಕರನ್ನು ಕರೆದುಕೊಂಡು, ಪರ್ವತ-ಪರ್ವತದಲ್ಲಿ ಅಡವಿ-ಅಡವಿಯಲ್ಲಿ ಅಡ್ಡಾಡುತ್ತಲಿದ್ದನು. ಇವನು ಸಾಂಕೇತಿಕ ಭಾಷಣದಿಂದ ಸೈನಿಕರನ್ನು ಒತ್ತ ಟ್ಟಿಗೆ ಕೂಡಿಸುತ್ತಿದ್ದನು, ಶತ್ರುಗಳಿಗಪರಿಚಿತವಾದ ಸ್ಥಳದಲ್ಲಿ ಅಡಗುತ್ತಿದ್ದರು, ಅಕಸ್ಮಾತ್ತಾಗಿ ಕೌಶಲ್ಯದಿಂದ ಶತ್ರುಗಳನ್ನು ಆಕ್ರಮಿಸುತ್ತಿದ್ದರು ಕೂಡಲೇ ರಜ ಪೂತರು ಪರ್ವತವನ್ನೇರಿ, ಶಿಖರದಲ್ಲಿದ್ದು, ಮೊಗಲರ ಕಣ್ಣಿಗೆ ಬೀಳುತ್ತಿದ್ದರು, ಮೊಗಲರು ಇವರನ್ನು ಹಿಡಿಯುವದಕ್ಕಾಗಿ ಹಿಂಬಾಲಿಸುತ್ತಿದ್ದರು; ಈ ಸಮಯ ದಲ್ಲಿ ಭಿಲ್ಲರು ಬಾಣಗಳಿಂದಲೂ, ಕಲ್ಲನ್ನೆ ಸೆಯುವದರಿಂದಲೂ ಶತ್ರುಗಳನ್ನು ಗೋಳಾಡಿಸಿ ಬಿಡುತ್ತಿದ್ದರು; ಇಷ್ಟರಲ್ಲಿ ಪ್ರತಾಪನು ಅಂತರ್ಹಿತನಾಗಿ ಹೋಗು ತಿದ್ದನು ಮೊಗಲರು ಪ್ರತಾಪನು ಜೀವವುಳಿಸಿಕೊಂಡು, ದೂರ ಓಡಿಹೋದ ನೆಂದು ಭಾವಿಸುತ್ತಿದ್ದರು; ಅದರಿಂದವರು ಚಿಂತೆಯಿಲ್ಲದವರಾಗಿ ಜಯೋಲ್ಲಾಸ ದಿಂದ ಕಾಲಕಳೆಯುತ್ತಿದ್ದರು, ಮತ್ತು ಇದೊಂದು ಸಾರೆ ರಜಪೂತರನ್ನು ಪರಾಜಿ ತರನ್ನಾಗಿ ಮಾಡಿದೆವೆಂದು ಮೊಗಲರ ದರಬಾರಕ್ಕೆ ಸುದ್ದಿಯನ್ನು ತಿಳಿಸುತ್ತಿದ್ದರು. ಈ ಸಮಯದಲ್ಲಿ ಪರ್ವತವು ಕಂಪಿತವಾಗುತ್ತಿದ್ದಿತು, ಗಿರಿಕಂದರಗಳಲ್ಲಿ ಭೇರಿಯ ನಿನಾದವುಂಟಾಗುತ್ತಲಿದ್ದಿತು, ಸಹಸಾ ರಜಪೂತವೀರರು ಶತ್ರುಸೈನ್ಯವನ್ನಾಕ್ರಮಿ ಸುತ್ತಿದ್ದರು ಮೊಗಲ ಸೈನ್ಯವನ್ನು ಭಿನ್ನ ಭಿನ್ನವಾಗಿ ಮಾಡಿ, ಅವರ ರಕ್ತದಿಂದ ಪರ್ವತವನ್ನು ರಂಜಿತಮಾಡಿ, ರಜಪೂತರು ಪುನಃ ತಮ್ಮ ಚಿರಪರಿಚಿತವಾದ ಆ ಪರ್ವತಮಾರ್ಗದಲ್ಲಿ ವಿಲೀನರಾಗಿಹೋಗುತ್ತಿದ್ದರು. ಒಂದು ಸಾರೆ ಫರೀದ ಖಾನನು ಒಂದು ಸ್ಥಳದಲ್ಲಿ ರಜಪೂತರನ್ನು ಸೋಲಿಸಿದನು; ಆಗ ಅವನು ಪ್ರತಾ ಪನನ್ನು ಹಿಡಿಯುವ ಭರಕ್ಕೆ ಬಿದ್ದು, ಇಕ್ಕಟ್ಟಿನಲ್ಲಿ ಸಿಕ್ಕನು; ಈ ಸಮಯದಲ್ಲಿ ಪ್ರತಾಪನು ಅಕಸ್ಮಾತ್ತಾಗಿ ಇವನ ಮೇಲೆ ಬಿದ್ದು, ಕೌಶಲ್ಯದಿಂದ ಮೊಗಲರನ್ನು ಘಟ್ಟದ ಮಾರ್ಗದ ಇಕ್ಕಟ್ಟಿನಲ್ಲಿ ಹಿಡಿದಿರಿಸಿದನು; ಇದರಿಂದ ಒಬ್ಬ ಮನುಷ್ಯನೂ ಕೂಡ ಪ್ರಾಣವನ್ನುಳಿಸಿಕೊಂಡು, ತಿರುಗಿ ಹೋಗಲು ಸಮರ್ಧನಾಗಲಿಲ್ಲ. ಈ ತರದ ಉಚಂಖಲಯುದ್ಧ ವ್ಯಾಪಾರದಲ್ಲಿ ಮೊಗಲರು ಅನಭ್ಯಾಸಿಗಳಾಗಿ