ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ M ಮಹಾರಾಣಾ ಪ್ರತಾಪಸಿಂಹ. ದ್ದರು; ಅದರಿಂದ ಅವರು ಪ್ರತಾಪನನ್ನು ಶಿಕ್ಷಿಸಲು ಎಷ್ಟು ಮಾತ್ರವೂ ಸಮರ್ಧ ರಾಗಲಿಲ್ಲ. ಈ ಮೇರೆಗೆ ಪ್ರಖ್ಯಾತರಾದ ಮೊಗಲ ಸೇನಾಪತಿಗಳ ಆಲೋಚನೆಗೆ ಳೆಲ್ಲವೂ ವ್ಯರ್ಥವಾಗಿ ಹೋದವು ಪುನಃ ವರ್ಷಾಕಾಲವು ಬಂದಿತು. ಗಿರಿನದಿಗ ಳೆಲ್ಲ ತುಂಬಿ ಹರಿಯತೊಡಗಿದವು; ಮತ್ತು ದಾಟಿಹೋಗಲಿಕ್ಕೆ ಬರದಂತಾದವು. ಮೊಗಲರು ಮತ್ತೆ ಮೇವಾಡವನ್ನು ಬಿಟ್ಟು ಹೋದರು; ಅದರಿಂದ ಪ್ರತಾಪನಿಗೆ ಪುನಃ ವಿಶ್ರಾಂತಿಯು ದೊರೆಯಿತು ಈ ಮೇರೆಗೆ ವರ್ಷದ ಮೇಲೆ ವರ್ಷವು ಕಳೆದು ಹೋಗಹತ್ತಿತು. ಪ್ರತಿ ವರ್ಷ ವರ್ಷಾಗಮನಕಾಲದಲ್ಲಿ ಮೊಗಲಸೇನೆಯು ತಿರುಗಿ ಹೋಗುತ್ತಿದ್ದಿತು; ಪುನಃ ಮೊಗಲರು ವಸಂತಾಗಮನ ಕಾಲದಲ್ಲಿ ದಂಡೆತ್ತಿ ಬರುತ್ತಿದ್ದರು. ಪ್ರತಾ ಸನು ಆ ಪರ್ವತದ ಪ್ರದೇಶದಲ್ಲಿ, ಆ ಕೂಟಯುದ್ಧನೀತಿಯನ್ನವಲಂಬಿಸಿ, ಒದ ಗಿದ ಯಾವತ್ತು ಕಷ್ಟಗಳನ್ನು ಸಹಿಸಿಕೊಂಡು, ಆತ್ಮರಕ್ಷಣೆ ಮಾಡಿಕೊಳ್ಳಹತ್ತಿ ದನು. ಇವನ ಕಠೋರ ವತ್ರದ ಭಂಗವಾಗಲಿಲ್ಲ; ಪ್ರತಿಜ್ಞೆಯು ಹೊಯ್ದಾಡ ಹತ್ತಲಿಲ್ಲ ರಜಪೂತ ಸರದಾರರು ಸ್ವಾಮಿಭಕ್ತಿಯನ್ನು ಬಿಡಲಿಲ್ಲ, ಇವನ ಅನುಚ ರರ ಬುದ್ದಿಯು ಸ್ವಲ್ಪ ಮಾತ್ರವೂ ವಿಚಲಿತವಾಗಲಿಲ್ಲ ವೀರಭೂಮಿಯ ಸುಸಂತಾನ ಸಮೂಹವು, ಫಲಮೂಲಗಳನ್ನು ಭುಂಜಿಸಿ,, ವೃಕ್ಷಲದಲ್ಲಿ ಶಯನಮಾಡಿ, ಹೀನ ಸ್ಥಿತಿಯಿಂದ ಕಾಲಕಳೆಯತೊಡಗಿದರು. ಸಾಮಂತ ಸರದಾರರು ರಾಣಾನ ವಿಷ ಯದಲ್ಲಿ ಸನ್ಮಾನವನ್ನು ತೋರಿಸುವದಕ್ಕಾಗಿ, ರಾಜಧಾನಿಯಲ್ಲಿ ಮಹಾಡಂಬರ ದಿಂದ ಮಾಡುತ್ತಿದ್ದ ಉತ್ಸವಗಳನ್ನು, ಇಂದು ಈ ಪ್ರವಾಸದಲ್ಲಿ ಪರ್ವತಗುಹೆಯಲ್ಲಿ ದೀನಭಾವದಿಂದ ಯಧಾವಿಧಿಯಾಗಿ ಮಾಡತೊಗಿದರು ಪ್ರತಾಪನು ಎಲ್ಲಿರುವನು? ಹೇಗಿರುವನು? ಯಾವ ರೀತಿಯಿಂದ ಕಾಲಕಳೆ ಯುತ್ತಿರುವನು? ಈ ಮೊದಲಾದ ಸಂಗತಿಗಳನ್ನು ತಿಳಿದುಕೊಳ್ಳುವದಕ್ಕೆ ಅಕಬ ರನು ಸದಾ ಉತ್ಕಂಠಿತನಾಗಿರುತ್ತಿದ್ದನು. ಇದಕ್ಕಾಗಿ ಇವನು ಅನೇಕ ಗುಪ್ತಚಾ ರರನ್ನು ನಿಯಮಿಸಿದ್ದನು. ಇವರಲ್ಲಿ ಕೆಲವರು ಸ್ವತಃ ನೋಡಿಯಾಗಲಿ, ಪರರ ಮುಖದಿಂದ ಕೇಳಿಯಾಗಲಿ, ಮಹಾರಾಣಾನ ಸಂಗತಿಗಳನ್ನರಿತುಕೊಂಡು, ಬಾದ ಶಹನಿಗೆ ಹೇಳುತ್ತಿದ್ದರು. ಪ್ರತಾಪನ ಅಪ್ರತಿಮವಾದ ವೀರಧರ್ಮದ ವಿಷಯ ವನ್ನು ಕೇಳಿ, ಶತ್ರುಗಳೂ ಕೂಡ, ವಿಸ್ಮಿತರೂ, ಸ್ತಂಭಿತರೂ ಆಗುತ್ತಿದ್ದರು. ಶತ್ರುಗ