ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಮಹಾರಾಣಾ ಪ್ರತಾಪಸಿಂಹ. MMMMMMMMMMMMMMMMMMMMMMM y ದಕ್ಕೆ ಇಂತಹ ಒಂದು ಕ್ಷುಲ್ಲಕ ಸಂಗತಿಯೇ ಕಾರಣೀಭೂತವಾಯಿತೆಂದು ಇತಿ ಹಾಸದಿಂದ ತಿಳಿದುಬರುವದು. ಪ್ರತಾಪನ ಜೀವಿತದಲ್ಲೂ ಇಂತಹದೊಂದು ಪ್ರಸಂಗವೊದಗಿತು. ಒಂದುದಿವಸ ಪ್ರತಾಪನ ಹೆಂಡತಿಯೂ, ಮಗಳೂ ಕೂಡಿ, (( ಮಲ ” ವೆಂಬ ಹೆಸರಿನ ಒಂದು ತರದ ಬೀಜದ ಹಿಟ್ಟಿನಿಂದ ರಾಜಪರಿವಾರ ಕ್ಕಾಗಿ ಕೆಲವು ರೊಟ್ಟಿಗಳನ್ನು ಸಿದ್ಧ ಮಾಡಿದರು. ಇವು ಎಲ್ಲರಿಗೂ ಸಂಪೂರ್ಣ ವಾಗಿ ಸಾಲುವಂತಿರಲಿಲ್ಲ, ಎಲ್ಲರಿಗೂ ಒಂದೊಂದು ರೊಟ್ಟಿಯಂತ ಮಾತ್ರ ಕೊಡಬಹುದಾಗಿದ್ದಿತು; ಅದರಂತೆ ಎಲ್ಲರಿಗೂ ಒಂದೊಂದು ರೊಟ್ಟಿಯು ಕೊಡ ಲ್ಪಟ್ಟಿತು. ಈ ದಿವಸ ಬೇರೆ ಆಹಾರದ ಪದಾರ್ಧಗಳಿರಲಿಲ್ಲ. ಕೇವಲ ಒಂದೊಂದು ರೊಟ್ಟಿಯಿಂದ ತೃಪ್ತರಾಗಬೇಕಾಗಿದ್ದಿತು. ಕಾರಣ ಎಲ್ಲರೂ ಅರ್ಧ ರೊಟ್ಟಿಯನ್ನು ತಿನ್ನಬೇಕೆಂದೂ, ಉಳಿದರ್ಧವನ್ನು ಎರಡನೆಯ ಸಾರೆಗೆ ತೆಗೆದಿಡಬೇಕೆಂದೂ ಗೊತ್ತು ಮಾಡಿಕೊಂಡರು. ಅದರಂತೆ ಪ್ರತಾಪನ ಮಗಳು ಅರ್ಧ ರೊಟ್ಟಿಯನ್ನು ಹತ್ತರದಲ್ಲಿಟ್ಟು ಕೊಂಟು, ಉಳಿದರ್ಧವನ್ನು ತಿನ್ನ ತೊಡಗಿದ್ದಳು. ಈ ಸಮಯದಲ್ಲಿ ಒಂದು ಅಡವಿಯ ಬೆಕ್ಕು ಅಕಸ್ಮಾತ್ತಾಗಿ ಬಂದು, ರಾಜಕುಮಾರಿಯ ತೆಗೆದಿಟ್ಟ ರೊಟ್ಟಿಯನ್ನು ತೆಗೆದುಕೊಂಡು ಓಡಿಹೋಯಿತು. ಬಾಲಿಕೆಯು ಚಿತ್ಕಾರಮಾಡುತ್ತ ಅಳತೊಡಗಿದಳು ಈ ವೇಳೆಯಲ್ಲಿ ಪ್ರತಾಪನು ಸಮೀಪದಲ್ಲಿಯೇ ಹುಲ್ಲಿನ ಹಾಸು ಗೆಯ ಮೇಲೆ ಅರ್ಧ ಮಲಗಿದ್ದನು, ಅವನು ತನ್ನ ಮತ್ತು ಸ್ವರಾಜ್ಯದ ವಿಷಯವಾಗಿ ಚಿಂತೆಮಾಡುತ್ತ, ಬಹು ವಿಷಾದದಲ್ಲಿದ್ದನು ಮಗಳ ಕರುಣಾಜನಕವಾದ ಅಳು ವನ್ನು ಕೇಳಿ ಒಮ್ಮೆಲೆ ಎಚ್ಚನು, ಸುತ್ತಲೂ ನೋಡಿದನು; ನಡೆದ ಸಂಗತಿಯು ಗೊತ್ತಾಯಿತು. ಅವನ ಹೃದಯವು ಒಡೆದುಹೋಯಿತು. ಯುದ್ಧಭೂಮಿಯಲ್ಲಿ ಅಸಂಖ್ಯ ಜಾತಿಬಾಂಧವರ ಹತ್ಯೆಯನ್ನು ನೋಡಿಯೂ ಕೂಡ, ತುಸುಮಾತ್ರವೂ ವಿಚಲಿತನಾಗದ ಅವನು ಇಂದು, ಅವುದೋ ಅಜ್ಞಾತ ಕಾರಣದಿಂದ, ಈ ಸಾಮಾ ನ್ಯ ಘಟನೆಯನ್ನು ನೋಡಿ ಎಚ್ಚರದಪ್ಪಿಹೋದನು; ಈ ಸಮಯದಲ್ಲಿವನನ್ನು ಸಂಸಾರದ ಮೋಹವು ಆವರಿಸಿತು. ರಾಜ್ಯಧನ, ವಿಲಾಸವೈಭವಗಳೆಲ್ಲವನ್ನು ಕಳೆದು ಕೊಂಡು ಸ್ಥಿರನಾಗಿದ್ದ ಅವನು, ಇಂದು ಕನೈಯ ಕಾತರಧ್ವನಿಯನ್ನು ಕೇಳಿ, ಎಲ್ಲವನ್ನೂ ಮರೆತನು. ಕ್ಷಣಕಾಲದ ವರೆಗೆ ತನ್ನಾ ಕಠೋರವ್ರತವನ್ನು ಮರೆದು ಬಿಟ್ಟನು; ಅದರೊಡನೆ ಭೂತಕಾಲದ ಅನೇಕ ಕಷ್ಟದ ಮತ್ತು ಶೋಕದ ಸಂಗ ತಿಗಳನ್ನು ಸ್ಮರಿಸಿದನು; ಆಗವನ ಕಣ್ಣಿನಿಂದ ಅಶ್ರುಧಾರೆಯು ಹರಿಯತೊಡಗಿತು.