ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೃಥ್ವಿರಾಜನ ಪತ್ರ, ೧೪೫ ಪ್ರತಾಪನು ಹತಾಶಭಾವದಿಂದ ಇನ್ನು ಮೇಲೆ ಸಹಿಸಲಾರೆನು; ಈಗ ಯಥೇ ಹ್ಯವಾಗಿ ಕಷ್ಟಗಳನ್ನು ಸಹಿಸಿದ್ದಾಯಿತು. ” ರಾಜಮಹಿಷಿಯು ಅನೇಕ ರೀತಿ ಯಿಂದ ಸಂತಯಿಸಿದಳು; ಸರದಾರರು ಅನೇಕ ರೀತಿಯಿಂದ ಬೋಧಿಸಿದರು; ಆದರೆ ಪ್ರತಾಪನು ಯಾರ ಮಾತನ್ನೂ ಕೇಳಲಿಲ್ಲ. ಭರದಿಂದ ಹರಿದು ಬರುತ್ತಿರುವ ಜಲಪ್ರವಾಹವನ್ನು ತಡೆಯುವದಾಗದಂತೆ, ಪ್ರತಾಪನ ಮನಸು ತಿರುಗಲಿಲ್ಲ. ಪ್ರತಾ ಪನು ಅಕಬರನ ಆಧೀನತ್ವವನ್ನೊಪ್ಪಿಕೊಳ್ಳುವ ಮನಸು ಮಾಡಿ, ಒಂದು ಪತ್ರ ವನ್ನು ಬರೆದನು. ಇದು ಪ್ರತಾಪನ ಚರಿತ್ರೆಯ ದುರ್ಬಲತೆಯು ಅಹುದೋ ಅಲ್ಲವೋ ಎಂಬ ದನ್ನು ನಾವು ಹೇಳಲಾರೆವು; ಹೀಗಿದ್ದರೂ ಇದು ಪ್ರತಾಪಚರಿತ್ರೆಯ ಕಲಂಕವಲ್ಲ ವೆಂಬದನ್ನು ನಿಶ್ಚಯವಾಗಿ ಹೇಳಬಲ್ಲೆವು; ಯಾಕಂದರೆ ಇದರಲ್ಲಿ ಅಸ್ವಾಭಾವಿಕ ತೆಯು ಎಷ್ಟು ಮಾತ್ರವೂ ಇಲ್ಲ. ಪ್ರತಾಪನ ಚರಿತ್ರೆಯಲ್ಲಿ ದೇವತ್ವವಿದ್ದರೂ, ಅವನು ಮನುಷ್ಯನಾಗಿದ್ದನು, ಕಾರಣ ಅವನು ಮನುಷ್ಯರ ದುರ್ಬಲತೆ, ಮನು ಜರ ಮಾಯೆ, ಮಾನವನ ಭ್ರಾಂತಿಗಳಿಂದ ಬಿಡುಗಡೆ ಹೊಂದುವ ಸಂಭವವಿರ ಲಿಲ್ಲ. ತನ್ನ ಅಂತಃಕರಣವು ಕಲ್ಲಿನಂತೆ ಅತೀವ ಕಠೋರವಾಗಿದ್ದರೂ, ಕುಸುಮ ದಂತೆ ಕೋಮಲವಾಗಿದೆಯೆಂಬದನ್ನು ಪ್ರಕಾರಾಂತರದಿಂದ ಪ್ರತಾಪನು ತೋರಿಸಿ ಕೊಟ್ಟಿದ್ದಾನೆ. ಮನುಷ್ಯನು ಕೋಮಲತ್ವ ಮತ್ತು ಕರೋರತೆಗಳಿಂದ ಕೂಡಿರದ ಹೊರತು ಮಹತ್ವವನ್ನು ಪಡೆಯುವಂತಿಲ್ಲ, ಅಂದರೆ ಇವುಗಳಲ್ಲಿ ಕೇವಲ ಒಂದನ್ನೇ ಅವಲಂಬಿಸುವದು ಕೇವಲ ಕಠೋರನಾಗಿರುವದು, ಇಲ್ಲವೆ ಕೋಮಲನಾಗಿರು ವದು ಸರಿಯಾದುದಲ್ಲ; ಯಾಕಂದರೆ ಹೀಗಾದಲ್ಲಿ ಆ ಮನುಷ್ಯನು ಜಗತ್ತಿನ ವ್ಯವ ಹಾರಗಳನ್ನು ತಕ್ಕರೀತಿಯಿಂದ ಸಾಗಿಸಿಕೊಂಡು ಹೋಗಲಾರನು. ಪ್ರತಾಪನು ಈ ಎರಡೂ ಗುಣಗಳಿಂದ ಕೂಡಿದವನಾದುದರಿಂದಲೇ ಹೆಚ್ಚು ಮಹತ್ವವನ್ನು ಪಡೆದಿರುವನೆಂದು ಹೇಳಬಹುದು. ಪ್ರತಾಪನ ಪತ್ರವು ಅಕಬರನಿಗೆ ಮುಟ್ಟಿತು; ಬಾದಶಹನು ಉತ್ಕಟವಾದ 'ಆನಂದದಿಂದ ಪರಿಪೂರ್ಣನಾದನು. ಅಕಬರನು ಮೇವಾಡದ ರಾಜ್ಯವನ್ನಾಗಲಿ, ರಾಜತ್ವವನ್ನಾಗಲಿ ಇಚ್ಚಿಸಿರಲಿಲ್ಲ; ಕೇವಲ ಪ್ರತಾಪನು ಒಮ್ಮೆ ಅವನತನಾದರೆ ಸಾಕಾಗಿತ್ತು. ರಾಜಧಾನಿಯಾದ ದಿಲ್ಲಿಯು ಆನಂದದಿಂದ ತುಂಬಿಹೋಯಿತು;