ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೩ My -- ಮಹಾರಾಣಾ ಪ್ರತಾಪಸಿಂಹ. ಎಲ್ಲ ಕಡೆಯಲ್ಲಿಯೂ ಈ ಅನಂದಪ್ರದರ್ಶಕ ಉತ್ಸವಗಳು ನಡೆದವು. ಅಕಬರನು ಈ ಪತ್ರವನ್ನು ಸೃಥ್ವಿರಾಜನಿಗೆ ತೋರಿಸಿದನು. ಪೃಥ್ವಿರಾಜನು ಇದನ್ನು ನೋಡಿ, ಅತಿಶಯ ಮರ್ಮಾ ಹತನಾದನು ಯಾಕಂದರೆ ಮೊಗಲರನ್ನಾಶ್ರಯಿಸಿದ ರಜವೂ ತರಲ್ಲಿ ಇವನಂತಹ ಸ್ವಜಾತಿಭಕ್ತರಾದ ಮಹಾನುಭಾವರು ಬೇರೆ ಯಾರೂ ಇರ ಲಿಲ್ಲ. ಮೊದಲು ಇವನ ಈ ಪತ್ರದ ಅಭಿಪ್ರಾಯವನ್ನು ನಂಬಲೇ ಇಲ್ಲ. ಮುಂದೆ ವಿಶ್ವಾಸವುಂಟಾದ ತರುವಾಯ ಇದೊಂದು ಕೆಟ್ಟ ಕೆಲಸವಾಯಿತೆಂದು ಭಾವಿಸಿ ದನು, ಯಾಕಂದರೆ ಅವನು ಪ್ರತಾಪನ ಈ ಕೆಲಸವು ಅತೀವ ಹೀನವಾದುದೆಂದು ತಿಳಿದನು. ಅದರಿಂದವನು ಪ್ರಕಾಶವಾಗಿ ಬಾದಶಹನಿಗೆ ಹೇಳಿದನು'- ಜಹಾಂ ಪನಾ' ಈ ಪತ್ರದಲ್ಲಿ ಮೋಸವಿರುವದು, ಯಾಕಂದರೆ ಪ್ರತಾಪನು ಎಂದೂ ತಮ್ಮ ಆಧೀನತ್ವವನ್ನೊಪ್ಪಿಕೊಳ್ಳಲಾರನು ನಾನು ಪ್ರತಾಪನನ್ನು ಪೂರ್ಣವಾಗಿ ಬಲ್ಲೆನು. ಅವನು ತನ್ನ ರಾಜಮುಕುಟವು ದೊರೆಯುವಂತಿದ್ದರೂ ಕೂಡ, ತಮ್ಮ ಇಚ್ಛೆ ಯಂತೆ ಸಂಧಿಯನ್ನು ಮಾಡಿಕೊಳ್ಳಲು ಒಡಂಬಡಲಾರನು; ಅದರಿಂದ ಈ ಪತ್ರವು ಪ್ರತಾಪನ ಯಾವನೋ ಒಬ್ಬ ಶತ್ರುವಿನಿಂದ ಕಳಿಸಲ್ಪಟ್ಟಿರಬಹುದು. ನಾನು ಈ ಸಂಗತಿಯ ನಿಜತ್ವವನ್ನು ತಿಳಿದು ಹೇಳುವೆನು ” ಇದಕ್ಕಾಗಿ ಸೃಥ್ವಿರಾಜನು ಪ್ರತಾಪನಿಗೆ ಪತ್ರ ಬರೆಯುವ ಅನುಮತಿಯನ್ನು ಹೊಂದಿದನು. ಇವನು ಈ ಸಂಗ ತಿಯು ಸತ್ಯವೋ, ಅಸತ್ಯವೋ ಎಂಬದನ್ನು ತಿಳಿದುಕೊಳ್ಳುವದಕ್ಕಾಗಿ ಪತ್ರ ಬರೆ ಯುವೆನೆಂದು ಅಕಬರನಿಗೆ ತಿಳುಹಿಸಿದ್ದನು, ಆದರೆ ಇವನ ಪ್ರಕೃತ ಉದ್ದೇಶವು ಇದಾಗಿರಲಿಲ್ಲ ಪ್ರತಾಪನನ್ನು ಇದರಿಂದ ತಿರುಗಿಸಿ ಅವನು ಶರಣುಬರುವದನ್ನು ಬಿಡಿಸಿ, ಶಿಶೋದಿಯಾ ಕುಲದ ಗೌರವವನ್ನು ಕಾಯ್ದುಕೊಳ್ಳುವದು ಇವನ ಮುಖ್ಯ ಉದ್ದೇಶವಾಗಿದ್ದಿತು. ಇವನು ಉತ್ತಮ ಕವಿಯು; ಇವನ ಕವಿತ್ವಖ್ಯಾ ತಿಯು ಬಹು ಜನ ಪರಿಚಿತವಾಗಿದ್ದಿತು. ಇವನು ಪ್ರತಾಪನಿಗೆ ಮಾತೃಭಾಷೆಯಲ್ಲಿ ರಚಿಸಿದ ಸಂಕ್ಷಿಪ್ತವೂ, ಸಾರಗರ್ಭವೂ, ತೇಜಮಯವೂ ಆದ ಕವಿತೆಗಳುಳ್ಳ ಒಂದು ಪತ್ರವನ್ನು ಕಳುಹಿಸಿಕೊಟ್ಟನು. ರಜಪೂತರ ಜಾತಿಯು ಇರುವವರೆಗೆ, ಹಿಂದು ಸ್ನಾನದ ಇತಿಹಾಸದಲ್ಲಿ ರಜಪೂತರ ಹೆಸರು ಅಕ್ಷಯ ಅಕ್ಷರಗಳಿಂದ ಬರೆದಿರುವ ವರೆಗೆ, ಪೃಥ್ವಿರಾಜನ ಮಹತ್ವವೂ, ಇವನ ಕವಿತೆಯ ಗೌರವವೂ ಅಕ್ಷುಣ್ಣವಾಗಿ ಉಳಿಯುವದರಲ್ಲಿ ಸಂದೇಹವಿಲ್ಲ. ನಾವು ಈ ಸ್ಥಳದಲ್ಲಿ ಇವನ ಪತ್ರದ ಸಾರವನ್ನು ಕೊಡುತ್ತೇವೆ.