ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪೃಥ್ವಿರಾಜನ ಪತ್ರ. ೧೪೭ ••••• IC ಹಿಂದುಗಳ ಆಶ-ವಿಶ್ವಾಸಗಳೆಲ್ಲವೂ, ಹಿಂದೂ-ಕುಲತಿಲಕನಾದ ಪ್ರತಾಪ ನನ್ನವಲಂಬಿಸಿವೆ, ಹಿಂದುಗಳ ಆಶ್ರಯನಾದ ಮಹಾರಾಣಾನು ಇಂದು ಯಾತರ ಸಲುವಾಗಿ ತನ್ನ ಧರ್ಮವನ್ನು ಬಿಡಲು ಮನಸು ಮಾಡಿದನು ? ರಜಪೂತರ ಜಾತಿಯು ರಸಾತಳಕ್ಕೆ ಹೋಗಿದೆ, ಕ್ಷತ್ರಿಯರ ವೀರತ್ವದ ಗರ್ವವು ನಾಶವಾಗಿಹೋಗಿದೆ; ರಜಪೂತರಿಗೆ ಲಕ್ಷ್ಮೀ ಸ್ವರೂಪರಾದ ವೀರಾಂಗನೆ ಯರು ಪವಿತ್ರವಾದ ಸನ್ಮಾನದಿಂದ ವರ್ಜಿತರಾಗಿದ್ದಾರೆ. ಪ್ರತಾಪನಂತಹ ವೀರ-ಸುಪುತ್ರರು ಇಂದು ಮೇವಾಡದಲ್ಲಿಲ್ಲದಿದ್ದರೆ, ಮೊಗ ಲರ ಕೂಟನೀತಿಯ ಬಲದಿಂದ, ರಜಪೂತರೆಲ್ಲರೂ ಏಕಾಕಾರರಾಗಿ ಹೋಗು ತಿದ್ದರು. ನಮ್ಮ ಜಾತಿ-ಧರ್ಮವನ್ನು ಏಕಮಾತ್ರನಾದ ಅಕಬರನು ಕೊಂಡಿದ್ದಾನೆ; ನಾವೆಲ್ಲರೂ ಅವನ ಕೀತದಾಸರಾಗಿದ್ದೇವೆ. ರಾಜಸ್ತಾನಕ್ಕೆ ರತ್ನ ಸ್ವರೂಪದಂತಿ ರುವ ಉದಯಕುಮಾರನೊಬ್ಬನು ಮಾತ್ರ ಉಳಿದಿದ್ದಾನೆ. ಯಾರ ಹೃದಯದಲ್ಲಿ ರಜಪೂತರ ರಕ್ತವು ಹರಿದಾಡುತ್ತಿರುವದೋ, ಅವರು ಮೋಸಹೋಗಿ, ತಮ್ಮ ಜಾತಿ-ಧರ್ಮವನ್ನೆಂದಾದರೂ ಮರೆಯಬಹುದೋ? ರೋಜಾಬಾಜಾರದಲ್ಲಿ ಚಿರಂತನವಾದ ಜಾತಿವಂಶಮರ್ಯಾದೆಗೆ ಜಲಾಂಜಲಿ ಯನ್ನು ಕೊಡಬಹುದೇ ? ಹೀಗಿದ್ದರೂ ಅನೇಕರು ಕ್ಷತ್ರಿಯರ ಗೌರವಕ್ಕೂ, ಜಾತಿಯ ಸನ್ನಾನಕ್ಕೂ ಜಲಾಂಜಲಿಯನ್ನು ಕೊಟ್ಟಿದ್ದಾರೆ. ಚಿತೋಡಕ್ಕೆ ಪ್ರಾಣಸ್ವರೂಪದಂತಿರುವ ಪ್ರತಾ ಪನು ಈ ಬಾಜಾರಕ್ಕೆ ಬರಲು ಮನಸು ಮಾಡಬಹುದೇ?

  • ಮಹಾರಾಣಾನ ರಾಜ್ಯ-ರಾಜಧಾನಿಗಳು ಹೋಗಿವೆ, ವಿಪುಲವಾದ ಯಾವ ತ್ತೂ ಸಂಪತ್ತು ಹೋಗಿದೆ, ಆದರೆ ಜಾತಿಧರ್ಮವೂ, ಮಾನವೂ ಮಾತ್ರ ಹೋ ಗಿಲ್ಲ. ಈ ಅಮೌಲ್ಯ ನಿಧಿಯು ಅವನೊಬ್ಬನಲ್ಲಿ ಮಾತ್ರ ಉಳಿದಿದೆ.

- ರಜಪೂತರು ಈ ರೋಜಾಬಾಜಾರಕ್ಕೆ ಹೋಗಿ, ಎಷ್ಟೋ ಸಾರೆ ಅಪ ಮಾನವನ್ನು ಸಹಿಸಿಕೊಂಡಿದ್ದಾರೆ; ಎಷ್ಟೋ ಸಾರೆ ನಿರಾಶೆಯನ್ನು ಹೊಂದಿದ್ದಾರೆ; ಆದರೆ ಹಮ್ಮಿರಕುಲದಲ್ಲಿ ಜನ್ಮ ಹೊಂದಿದವರು ಈ ತರದ ಕಲಂಕವನ್ನೆಂದೂ ಹೊಂದಿಲ್ಲ.