ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಮಹಾರಾಣಾ ಪ್ರತಾಪಸಿಂಹ • ? ? ? + V + 4 vv v , , vv vvv vv vv vvvv vv vvvv vvvv vv •y ಜಗತ್ತಿನಲ್ಲಿ ಪ್ರತಾಪನಿಗೆ ಧರ್ಮರಕ್ಷಣೆಯ ವಿಷಯದಲ್ಲಿ ಯಾರ ನಿಭ್ರತ ಸಹಾಯವೂ ಇಲ್ಲವೇನು? ಅಮಿತ ವೀರತ್ವವೂ, ಒರೆಯಿಂದ ಹಿರಿದ ಆಯುಧವೂ ಕ್ಷಾತ್ರಧರ್ಮದ ರಕ್ಷಣೆಯನ್ನು ಮಾಡುವವು. ನಮ್ಮ ಈ ಜಾತಿಧರ್ಮಗಳನ್ನು ಕೊಂಡ ಅಕಬರನಿಗೆ ಒಂದಿಲ್ಲೊಂದು ಕೆಟ್ಟ ಸಮಯವೊದಗುವದು. ಸಂದೇಹಪೂರ್ಣವಾದ ಮಾನವಜೀವನದ ಆ ದಿವಸದಲ್ಲಿ ಅವನು ನಾಶವಾಗಿ ಹೋಗುವನು. - ಅಯ್ಯೋ! ರಾಜಪುತ್ರಕ್ಷೇತ್ರವೇ ! ಈಗ ನೀನು ವೃಕ್ಷಲತಾಶೂನ್ಯವಾಗಿ ಶೋಕಿಸುವೆ, ಆದರೆ ಅಂದು ಸುಬೀಜವನ್ನು ಹೊಂದಿ, ಪುನಃ ಶೋಭಾಯಮಾನ ವಾಗುವೆ. ಈ ಸುಸಮಯದಲ್ಲಿ ಯಾವತ್ತು ರಜಪೂತರು ಪ್ರತಾಪನ ಹತ್ತಿರ ಓಡಿ ಬರುವರು. ಪ್ರತಾಪನು ರಜಪೂತರ ಬೀಜವನ್ನು ಕಾಯ್ದು ಕೊಳ್ಳುವನು; ಅವನ ಪವಿ ತತೆಯು ಉಜ್ವಲವಾಗುವದು; ಅವನು ರಜಪೂತ-ಧರ್ಮವನ್ನು ಪಾಲಿಸುವನು; ಈ ಆಶೆಯನ್ನು ನಾವೆಲ್ಲರೂ ಹೊಂದಿದ್ದೇವೆ. ” - ಪ್ರತಾಪನಿಗೆ ವೀರಕವಿಯ ಈ ಉತ್ತೇಜನಾಪೂರ್ಣವಾದ ಪತ್ರವು ಮುಟ್ಟಿತು, ಅವನಿದನ್ನು ಅನೇಕ ಸಾರೆ ಓದಿದನು. ಬಾದಶಹನಿಗೆ ಪತ್ರ ಬರೆದ ಸಮಯದಿಂದ ಅವನ ಮನಸ್ಸು ಸ್ವಸ್ಥವಾಗಿರಲಿಲ್ಲ. ತಾನಿದೊಂದು ಅಕೃತ್ಯ ಮಾಡಿ ದೆನೆಂಬ ದಾರುಣವ್ಯಥೆಯು ಅವನಲ್ಲುಂಟಾಗಿತ್ತು. ಈ ಪತ್ರವನ್ನು ನೋಡಿದ ಕೂಡಲೇ ಆ ದಾರುಣ-ದುಃಖವು ಇಲ್ಲದಂತಾಯಿತು; ಪುನಃ ಧೈರ್ಯವು ಬಂದಿತು. ಪುನಃ ಗೌರವಾಭಿಲಾಷೆಯ ಸಂಚಾರವಾಯಿತು. ಕಾರಣ ಅವನು ತನ್ನ ಹಿಂದಿನ ಮನಸ್ಥಿತಿಯನ್ನ ಪೂರ್ಣವಾಗಿ ತಿರುಗಿಸಿ, ಸ್ವದೇಶದ ಉದ್ಧಾರಕ್ಕಾಗಿ ಪುನಃ ಪ್ರಯತ್ನ ಮಾಡುವದನ್ನು ಗೊತ್ತು ಮಾಡಿಕೊಂಡನು. ಇದರಿಂದ ರಜಪೂತರ ಗೌರ ವವು ರಕ್ಷಿತವಾಯಿತು. ಮೇವಾಡದ ಭಾಗ್ಯಾಕಾಶದಲ್ಲಿ ಕಾಣಿಸಿಕೊಂಡ ನಿಬಿಡ ತರವಾದ ಮೇಘವು, ಪೃಥ್ವಿರಾಜನ ಉತ್ತೇಜನಾವೂರ್ಣ ಕವಿತೆಯ ಬಿರುಗಾ ಳಿಯಿಂದ ಭಿನ್ನ ವಿಚ್ಛಿನ್ನವಾಗಿ, ಅದೃಶ್ಯವಾಗಿ ಹೋಯಿತು. / A \