ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಛಾಗ್ಯ ಪರಿವರ್ತನ ೧ ೪

ಊನವಿಂಶ ಪರಿಚ್ಛೇದ. ಇಥಿ ಭಾಗ್ಯ- ಪರಿವರ್ತನ, ಅ೦ಭೋಧಿಃ ಸ್ಥಲತಾ ಸ್ಥಲಂ ಜಲಧಿತಾ೦ ಧೂಲೀ ಲವ ಶೈಲತಾಂ | ಮೇರರ್ಮ ತುಣತಾ೦ ತೃಣ೦ ಕುಲಿಶತಾಂ ವಂ ತೃಣಪ್ಯತಾಮ್ || ನನ್ತಿಃ ಶೀತಲತಾಂ ಹಿ ದುಂ ದಹನತಾನಾಯಾತಿ ಯಸ್ಕೃಚ್ಛಯಾ | ಲೀಲಾ ದುರ್ಲಲಿತಾದ್ದು ತಮ್ಮ ಸನಿನೇ ದೇವಾಯ ತಸ್ಕೃ ನಮಃ || ೧ || ಭೋಜಪ್ರಬಂಧ ಗಿರಿನದಿಯ ಪ್ರಬಲ ಪ್ರವಾಹವು ಕಲ್ಲಿನ ತಡೆಯುವಿಕೆಯಾದ ಮಾತ್ರದಿಂದ, ತನ್ನ ಗತಿ-ಪರಿವರ್ತನವನ್ನು ಮಾಡುವಂತೆ, ಪೃಥ್ವಿರಾಜನ ಪತ್ರದಿಂದ ಪ್ರತಾಪನ ಜೀವನಪ್ರವಾಹವು ಬೇರೆ ದಿಕ್ಕಿಗೆ ಒಲೆಯಿತು. ಪ್ರತಾಪನು ಅಕಬರನ ಆಧೀನ ತ್ವವನೊ ಪ್ಪಿಕೊಳ್ಳಬಾರದೆಂಬದನ್ನು ಸ್ಥಿರಪಡಿಸಿಕೊಂಡನು; ಆದರೆ ಮುಂದೇನು ಮಾಡಬೇಕೆಂಬದು ಇವನಿಗೆ ತಿಳಿಯಲಿಲ್ಲ. ಮೊಗಲರ ಅಸಂಖ್ಯ ಸೈನಿಕರೊಡನೆ, ಮೇಲಿಂದ ಮೇಲೆ ಯುದ್ಧ ಮಾಡಿದುದರಿಂದ ಪ್ರತಾಪನ ಸೈನ್ಯಬಲವು ಕಡಿಮೆಯಾ ಗಿದ್ದಿತು. ಮೊಗಲರು ತಮಗೊದಗಿದ ಹಾನಿಯನ್ನು ರಾಜಧಾನಿಯಿಂದ ಹೊಸ ಸೈನ್ಯವನ್ನು ತರಿಸಿ, ತುಂಬಿಕೊಳ್ಳುತ್ತಿದ್ದರು; ಆದರೆ ಪ್ರತಾಪನು ಕಳೆದುಹೋದ ಬಲವನ್ನು ಪುನಃ ತಂದುಕೊಳ್ಳಲು ಸಮರ್ಧನಾಗಿರಲಿಲ್ಲ; ಯಾಕಂದರೆ ಬೇರೆ ಕಡೆಯಿಂದ ಇವನಿಗೆ ಸಹಾಯವು ದೊರೆಯುವಂತಿರಲಿಲ್ಲ. ಮೇಲಾಗಿ ಇವನ ಭಾಂಡಾರವು ಬರಿದಾಗಿತ್ತು; ಅದರಿಂದ ಇದ್ದ ಸೈನಿಕರ ಉಪಜೀವನವನ್ನು ಸಾಗಿ ಸುವದು ಅತಿಶಯ ಕಷ್ಟಕರವಾಗಿದ್ದಿತು ಕಾರಣ ಪ್ರತಾಪನು ತನ್ನಾಶ್ರಿತ ಜನರ ಅವಸ್ಥೆಯೇನಾಗುವದೋ ಎಂಬದನ್ನು ಭಾವಿಸಿ, ಅತಿಶಯ ವ್ಯಾಕುಲನಾಗಿ ಹೋದನು. ಕಡೆಯಲ್ಲಿ ಪ್ರತಾಪನು, ಇಷ್ಟು ದಿವಸಗಳವರೆಗೆ ರಾಜಧಾನಿಯಾದ ಚಿತೋ ಡವನ್ನು ಬಿಟ್ಟಿದ್ದಂತೆ, ಇನ್ನು ಮುಂದೆ ವೀರಭೂಮಿಯಾದ ಮೇವಾಡವನ್ನು ಬಿಟ್ಟು ಹೋಗಬೇಕೆಂಬದನ್ನು ಗೊತ್ತು ಮಾಡಿಕೊಂಡನು. ಪೂರ್ವಜರ ಸ್ವತ್ತಾದ ಚಿತೋಡಕ್ಕೊದಗಿದ ಅವಸ್ಥೆಯು, ಪ್ರತಾಪನ ಮೇವಾಡಕ್ಕೂ ಉಂಟಾಗಲಿ