ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ಮಹಾರಾಣಾ ಪ್ರತಾಪಸಿಂಹ • • • • ಯೆಂದು ಅತೀವ ನಿರಾಶೆಯಿಂದ ಪ್ರತಾಪನು ಭಾವಿಸಿ, ಬೇರೆ ಕಡೆಯಲ್ಲಿ ಹೋಗಿ, ವಾಸಮಾಡುವ ಮನಸು ಮಾಡಿದನು. ಇದಕ್ಕಾಗಿ ಅವನು ತನ್ನ ಜನರನ್ನು ಕರೆ ದುಕೊಂಡು, ಅರವಲೀ ಪರ್ವತವನ್ನು ದಾಟಿ, ಮುಂದಿರುವ ವಿಸ್ತೀರ್ಣವಾದ ಮರುಭೂಮಿಯನ್ನು ದಾಟಿ, ದೂರದಲ್ಲಿರುವ ಸಿಂಧೂನದದ ದಂಡೆಯ ಪ್ರದೇಶ ದಲ್ಲಿ ಹೋಗಿ, ವಾಸವಾಗಿರಬೇಕೆಂಬದನ್ನು ಸ್ಥಿರಪಡಿಸಿಕೊಂಡನು. ನಾಲ್ಕೂ ಕಡೆಯಲ್ಲಿರುವ ತನ್ನ ಅನುಚರರಿಗೆ ಗುಪ್ತರೀತಿಯಿಂದ ಈ ಸುದ್ದಿಯನ್ನು ತಿಳುಹಿಸಿ ದನು, ಅತ್ಯವಶ್ಯವಾಗಿ ಬೇಕಾಗುವ ವಸ್ತುಗಳನ್ನು ಸಂಗ್ರಹಿಸಿದನು, ಅತ್ತಿತ್ತ ಹೊಸ ರಜಪೂತ ಸೈನಿಕರು ಮಹಾರಾಣಾನ ಹತ್ತಿರ ಬಂದರು; ಹೀಗೆ ಹೊರಡುವ ಯಾವತ್ತು ಸಿದ್ಧತೆಯಾಯಿತು ಕಡೆಯಲ್ಲಿ ಪ್ರತಾಪನು ಪರಿವಾರವರ್ಗವನ್ನೂ, ಆತ್ಮೀಯಸ್ವಜನರನ್ನೂ, ಸೇವಕರನ್ನೂ ಕರೆದುಕೊಂಡು, ಅಶ್ರುಪೂರ್ಣನೇತ್ರನಾಗಿ ಸ್ವದೇಶದ ಕಡೆಯ ಅಪ್ಪಣೆಯನ್ನು ತೆಗೆದುಕೊಂಡನು; ಮತ್ತು ಅರವಲೀ ಪರ್ವ ತದಿಂದ ಪಶ್ಚಿಮದ ಕಡೆಗೆ ಇಳಿಯಹತ್ತಿದನು. ಪರ್ವತದ ಕೆಳಭಾಗದಲ್ಲಿ- -ಮರು ಭೂಮಿಯ ಪೂರ್ವದ ಮೇರೆಯಲ್ಲಿ ಮಹಾರಾಣಾನು ಇಳಿದುಕೊಂಡನು. ರಾಜ ಸ್ಥಾನದ ಬೇರೆ ಭಾಗಗಳಿಂದ ಬಹುಜಾತಿಯ ಸ್ವಜನರು, ಮೇವಾಡೇಶ್ವರನ ಕಡೆಯ ಅಪ್ಪಣೆಯನ್ನು ಹೊಂದಲು ಬಂದರು. ಅವರಲ್ಲಿ ಮೇವಾಡದ ಮೊದಲಿನ ಮಂತ್ರಿ ಯಾದ ಭೀಮಸಿಂಹನೊಬ್ಬನು. ಮೇವಾಡದ ಇತಿಹಾಸದಲ್ಲಿ ಅನೇಕ ನಿರ್ದಯತರವಾದ ಸಂಗತಿಗಳಿವೆ, ಇದರೆ ಇವುಗಳೊಡನೆ ಕರುಣಹೃದಯರ ಅತುಲನೀಯ ಉತ್ತಮ ಕಾರ್ಯಗಳಿಗೆ ಅಭಾವವಿಲ್ಲ. ಕುದ್ರ ಬನಾಸನದಿಯು ನಾಚುತ್ತ ನಾಚುತ್ತ ಪ್ರವಾಹಿತವಾಗಿ, ಅರವಲಿಯ ಗುಡ್ಡಗಾಡು ಪ್ರದೇಶವನ್ನು ಸುಂದರವೂ ಸುಶಾಂತವೂ ಆಗುವಂತೆ ಮಾಡಿದೆ, ಇದರಂತೆ ಆತ್ಮತ್ಯಾಗದ ಕ್ಷೀರ-ಧಾರೆಯು ರಜಪೂತರ ಕಠೋರ ಜೀವ ನವನ್ನು ಅಮೃತಮಯವಾಗಿ ಮಾಡಿದೆ ಮನುಷ್ಯನು ಯಾವದೇ ಉದ್ದೇಶವನ್ನು

  1. ಟಾಡ್ ಸಾಹೇಬರ ರಾಜಸ್ಥಾನವೆಂಬ ಗ್ರಂಥದಲ್ಲಿ ಈ ಮಂತ್ರಿಯ ಹೆಸರು ಭಾಮಾಶಹ ( Bhama Sab ) ಎಂದೂ, ರಾಜಸ್ತಾನದ ವಿವರಣೆಯಲ್ಲಿ ಭೀಮಶಪ ( Bhinna Sah ) ಎಂದೂ ಬರೆದಿದ, Se Rajasthan, Vol I P. 281; Ray, Gazetteer Vol. III P 19 ಮೂಲತಃ ಇವನ ಹೆಸರು ಭೀಮಸಿಂಹನಂಬದಾಗಿರಬಹುದು, ಮತ್ತು ಇವನು, ಪ್ರತಾಪನನ್ನು ಪಟ್ಟಕ್ಕೆ ಕುಳ್ಳಿರಿಸಿದ ಚಂದಾಯತ್ ಸರದಾರನಾದ ಕೃಷ್ಣ ಸಿಂಹನ ವಂಶಜನು,