ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಗ್ಯ ಪರಿವರ್ತನ ೧೫೧ vs vvvvvvv vvvvv - ' ಸ್ಥಿರಪಡಿಸಿಕೊಳ್ಳಲಿ, ಆದರೆ ಅದನ್ನು ಸಿದ್ದಿಗೆ ಒಯ್ಯುವದು ದೇವರ ಇಚ್ಛೆಯನ್ನವ ಲಂಬಿರುವದು; ಅಂದರೆ ಮನುಷ್ಯನು ಯಾವದೊಂದು ಕಾರ್ಯವನ್ನು ಕಡೆಗಾಣಿ ಸಬೇಕಾದರೆ ಅದಕ್ಕೆ ದೈವೀ ಸಹಾಯವು ಬೇಕು. ಪ್ರತಾಪನು ಒಂದು ಕಾರ್ಯ ಮಾಡುವದನ್ನು ಸ್ಥಿರಪಡಿಸಿಕೊಂಡಿದ್ದನು, ಆದರೆ ಪೃಥ್ವಿರಾಜನ ಪತ್ರವು ಪ್ರತಾ ಪನನ್ನು ಈ ಕಾರ್ಯದಿಂದ ತಿರುಗಿಸಿತು. ಮತ್ತೆ ಪ್ರತಾಪನು ಬೇರೊಂದು ಕಾರ್ಯ ಮಾಡಲುದ್ಯುಕ್ತನಾಗಿದ್ದನು, ಆದರೆ ಈ ಸಾರೆಯೂ ವಿಧಿಯ ಕೃಪೆಯು ಅವನಿಗೆ ಈ ಕೆಲಸವನ್ನು ಮಾಡಗೊಡಲಿಲ್ಲ, ಬೇರೊಂದು ಉತ್ತಮವಾದ ಕಾರ್ಯವನ್ನು ತೋರಿಸಿಕೊಟ್ಟಿತು. ಪ್ರತಾಪನು ದೇಶಾಂತರಕ್ಕೆ ಹೋಗುವದನ್ನು ನಿಶ್ಚಯಿಸಿ ಹೊರಟಿದ್ದನು, ಆದರೆ ಮಂತ್ರಿಶ್ರೇಷ್ಟನಾದ ಭೀಮಸಿಂಹನು ತನ್ನ ಅಲೌಕಿಕ ಆತ್ಮ ತ್ಯಾಗದಿಂದ, ಇವನು ಪುನಃ ಮೇವಾಡದ ಸಿಂಹಾಸನದ ಮೇಲೆ ಕೂಡುವಂತೆ ಮಾಡಿದನು. ಯಾವದೊಂದು ಕಾರ್ಯದಲ್ಲಿ ಮನಃಪೂರ್ವಕವಾದ ಇಚ್ಛೆಯು ಇರದಿ ದ್ದರೆ, ಮನುಷ್ಯನ ಮನಸಿನಲ್ಲಿ ಆ ಕಾರ್ಯದ ವಿಷಯವಾಗಿ ನಾನಾತರದ ಸಂದೇ ಹಗಳುಂಟಾಗುವವು; ಇದರಿಂದ ಆ ಕಾರ್ಯವನ್ನು ಮಾಡುವದಕ್ಕೆ ಕಾಲವಿಲಂಬ ವಾಗುವದು. ಸ್ವಭಾವ-ಸುಂದರವಾದ ಸ್ವದೇಶವನ್ನು ಬಿಟ್ಟು, ಮರುಪ್ರದೇಶದಲ್ಲಿ ಹೋಗಿ ಇರತೊಡಗುವದು ಪ್ರತಾಪನ ಮನಸಿನಲ್ಲಿರಲಿಲ್ಲ. ಕೇವಲ ನಿರುಪಾಯ ದಿಂದ ಅವನು ಈ ಕಾರ್ಯ ಮಾಡಲುದ್ಯುಕ್ತನಾಗಿದ್ದನು ( ಜನನೀ ಜನ್ಮಭೂವಿಶ್ವ ಸ್ವರ್ಗಾದಪಿ ಗರೀಯಸೀ' ಎಂದಿರುವದರಿಂದ ಜನ್ಮಭೂಮಿಯು ಸಕಲರಿಗೂ ಪ್ರಿಯಕರವು, ಅದರಿಂದ ಸಾಹಜಿಕವಾಗಿ ಸ್ವದೇಶವನ್ನು ಬಿಟ್ಟು ಹೋಗಲು ಯಾರೂ ಇಚ್ಚಿಸಲಾರರು. ತನ್ನ ಮರ್ಯಾದೆಯನ್ನು ಕಾಯ್ದು ಕೊಂಡು, ಸ್ವದೇಶದಲ್ಲಿರಲಿಕ್ಕೆ ಬರುವಂತಿದೆಯೇ ಹೇಗೆಂಬದನ್ನು ಪ್ರತಾಪನು ಕುಲಗುರುಗಳ ಬಳಿಯಲ್ಲಿ ಯಾವಾ ಗಲೂ ಕೇಳುತಲಿದ್ದನು. ಇಂತಹ ಸಮಯದಲ್ಲಿ ಜ್ಞಾನವೃದ್ಧನೂ, ವಯೋವೃ ಧ್ವನೂ, ಆದ ಭೀಮಸಿಂಹನು, ಒಂದು ಉತ್ತಮ ಮಾರ್ಗವನ್ನು ತೋರಿಸಿಕೊಟ್ಟು, ಪ್ರತಾಪನ ಯಾವತ್ತೂ ಸಂದೇಹಗಳನ್ನು ದೂರಮಾಡಿದನು. ಭೀಮಸಿಂಹನೂ, ಇವನ ಪೂರ್ವಜರೂ ಬಹುಕಾಲದವರೆಗೆ ಮೇವಾಡ-ರಾಜ್ಯದ ಮಂತ್ರಿಗಳಾ ಗಿದ್ದು, ಬಹು ಧನವನ್ನು ಸಂಗ್ರಹಿಸಿದ್ದರು. ಭೀಮಸಿಂಹನು ಸ್ವಚ್ಛೆಯಿಂದ ಈ ಯಾವತ್ತು ಧನವನ್ನು ಪ್ರತಾಪನಿಗೆ ಕಾಣಿಕೆಯಾಗಿ ಕೊಟ್ಟನು. ಈ ಧನದಿಂದ