ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಮಹಾರಾಣಾ ಪ್ರತಾಪಸಿಂಹ, MMMMMMMMMMMMMMMMMM MMMM ೧೧೧ ೧೧೧೧ »»» ೧೦ ೨೫ ಸಾವಿರ ಜನರ ೧೨ ವರ್ಷದ ಯಾವತ್ತು ವೆಚ್ಚವನ್ನು ಸಾಗಿಸಬಹುದಾಗಿ ದ್ದಿತು. ಪ್ರತಾಪನೂ ಅವನ ಅನುಜರರೂ ಈ ಅತ್ಯದ್ಭುತವಾದ ದಾನ್ಯತೆಯನ್ನು ನೋಡಿ ಸ್ವಂಭಿತರಾದರು; ತರುವಾಯ ಆ ಸಾವಿರಾರು ಜನರ ವಿಷಣ್ಣ ಮುಖ ದಲ್ಲಿ ನಗೆಯ ಚಿನ್ಹವು ಕಾಣಿಸತೊಡಗಿತು; ಮಹಾರಾಣಾನ ಶಿಬಿರದಲ್ಲಿ ಮಹೋ ಕ್ಲಾಸದ ಧ್ವನಿಯಾಯಿತು. ಭೀಮಸಿಂಹನ ಜಯಜಯಕಾರದ ಧ್ವನಿಯು ಎಲ್ಲ ದಿಕ್ಕುಗಳನ್ನು ವ್ಯಾಪಿಸಿತು. ಈ ದಿವಸದಿಂದ ಭೀಮಸಿಂಹನು ಮೇವಾಡದ ಉದ್ದಾರ ಕರ್ತನೆಂಬ ಹೆಸರಿನಿಂದ ಪ್ರಸಿದ್ಧನಾದನು ಪೃಥ್ವಿರಾಜನ ಪತ್ರ ಮತ್ತು ಭೀಮಸಿಂಹನ ಧನ ಈ ಎರಡರ ಸಹಾಯ ದಿಂದ ಪ್ರತಾಪನ ನಾಹಸವೂ, ವಿಶ್ವಾಸವೂ ನೂರು ಪಟ್ಟಿನಿಂದ ಬೆಳೆದವು. ರಜಪೂ ತರ ನರಗಳಲ್ಲಿ ಪುನಃ ಉಷ್ಣ ರಕ್ತವು ಹರಿಯತೊಡಗಿತು; ಸ್ವದೇಶದ ಶತ್ರುಗಳಾದ ಯವನರ ಸೇಡು ತೀರಿಸಿಕೊಳ್ಳುವ ಪ್ರಬಲವಾದ ಇಚ್ಛೆಯುಂಟಾಯಿತು. ಮೇವಾ ಡವನ್ನು ಬಿಟ್ಟು ಹೋಗುವ ಆಲೋಚನೆಯು ಎತ್ತೊ” ಹೋಗಿಬಿಟ್ಟಿತು. ಪ್ರತಾ ಪಸಿಂಹನು ಧೀರಭಾವದಿಂದ ಕರ್ತವ್ಯ ಮಾಡುವದನ್ನು ನಿಶ್ಚಯಿಸಿಕೊಂಡನು; ತೀವ್ರವೇ ಹೊಸದಾಗಿ ದಂಡೆತ್ತಿ ಹೋಗುವ ಸಿದ್ದತೆಯು ನಡೆಯತೊಡಗಿತು. ಸೈನಿಕರಿಗಾಗಿ ಸಾಕಷ್ಟು ಆಹಾರದ ಪದಾರ್ಥಗಳ ಸಂಗ್ರಹವಾಯಿತು, ಇವರಿಗೆ ಸಾಕಷ್ಟು ವಸ್ತ್ರಗಳು ದೊರೆಯುವ ವ್ಯವಸ್ಥೆಯಾಯಿತು. ಧನವಿಲ್ಲದ್ದ ರಿಂದ ಅಪ್ಪಣೆ ಕೊಟ್ಟು ಕಳುಹಿಸಿದ ಸೈನಿಕರಿಗೆ ತೀವ್ರವೇ ಬರಬೇಕೆಂದು ಅಪ್ಪ ಣೆಯು ಕಳಿಸಲ್ಪಟ್ಟಿತು. ಯುದ್ದಕ್ಕಾಗಿ ಬೇಕಾಗುವ ಶಸ್ತಾದಿಗಳು ಸಾಕಷ್ಟು ಸಂಗ್ರಹವಾದವು. ಹೊಸ ಕುದರೆಗಳನ್ನು ಕೊಂಡು, ರಜಪೂತ-ಸೈನ್ಯದ ಬಲವನ್ನು ಬೆಳೆಸೋಣವಾಯಿತು. ಈ ಯಾವತ್ತು ಸಂಗತಿಗಳು ಅತ್ಯಲ್ಪ ಕಾಲದಲ್ಲಿ ಆದವು; ಮತ್ತು ಬಹಳ ವ್ಯವಸ್ಥಿತ ರೀತಿಯಿಂದಾದವು. ಮೊಗಲರು ಇದನ್ನು ತಿಳಿಯಲು ಸಮರ್ಧರಾಗಲಿಲ್ಲ.