ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪವಾಡ.ವಿಜಯ ೧೫ ವಿಂಶಪರಿಚ್ಛೇದ. ಮೇವಾಡ-ವಿಜಯ, ರಥಸ್ಯಕಂ ಚಕ್ರಂ ಭುಜಗಯ ಮಿತಾಳ ಸಪ್ತ ತುರಗಾ | ನಿರಾಲಂಬೋ ಮಾರ್ಗಶ್ಚರಣವಿಕಲಃ ಸಾರಥಿರಪಿ || ರವಿರ್ಯಾತೃವಾಂತರಂ ಪ್ರತಿದಿನವಪಾರ ಸ್ಯ ನಭಸಃ | ಕ್ರಿಯಾಸಿದ್ಧಿಃ ಸತ್ತೇ ಭವತಿ ಮಹತಾಂ ನೋಪಕರಣೇ || ೧ || -ಭೋಜಪ್ರಬಂಧ ಸೈನ್ಯವೂ, ಯುದ್ಧೋಪಕರಣಗಳೂ ಸಿದ್ದವಾದ ತರುವಾಯ, ಪ್ರತಾಪನು 'ಅಸ್ವದೇಶದ ಪುನರುದ್ಧಾರಕ್ಕಾಗಿ, ಮರುಪ್ರಾಂತರವನ್ನು ಬಿಟ್ಟು, ತಿರುಗಿ ಬಂದನು. ಅವನು ಈ ಸಮಯದಲ್ಲಿ ಸ್ಥಿರಪಡಿಸಿಕೊಂಡದ್ದೇನಂದರೆ'- ಈ ವರೆಗೆ ಸಾಗಿಸುತ್ತ ಬಂದಿರುವ ಕಾರ್ಯವನ್ನು ಕಡೆಗಾಣಿಸುವದಕ್ಕೆ ಇದೊಂದು ಸಾರೆ ಕಡೆಯ ಪ್ರಯತ್ನವನ್ನು ಮಾಡುವೆನು-ಸ್ವದೇಶದ ಸ್ವಾತಂತ್ರ್ಯಕ್ಕಾಗಿಯೂ, ಸ್ವಜನಾಂಗದ ಗೌರವರಕ್ಷಣೆಗಾಗಿಯೂ ವಿಶ್ವಪ್ರಯತ್ನ ಮಾಡುವೆನು. ಒಂದುವೇಳೆ ನಾನು ಈ ಕೃತಕಾರ್ಯವನ್ನು ಮಾಡಲಾರದವನಾದರೆ ನನ್ನಿಂದ ಈ ಕೆಲಸ ವಾಗದಲ್ಲಿ, ಪ್ರಾಣತ್ಯಾಗ ಮಾಡಿ, ಸಕಲ ದುಃಖಗಳಿಂದ ಬಿಡುಗಡೆಯಾಗುವೆನು, ” ಪ್ರತಾಪನ ಈ ಸಿದ್ಧತೆಯು ಅತ್ಯಲ್ಪ ಕಾಲದಲ್ಲಾಗಿದ್ದಿತು, ಅದರಿಂದ ಮೊಗಲರು ಸಂದೇಹ ತೆಗೆದುಕೊಳ್ಳುವ ಅವಕಾಶವನ್ನು ಹೊಂದಲಿಲ್ಲ. ಪ್ರತಾಪನು ಸ್ವದೇಶ ವನ್ನು ಬಿಟ್ಟು ಹೋಗಿ, ದೂರದೇಶದಲ್ಲಿ ವಾಸಿಸುವ ಉದ್ಯೋಗಕ್ಕೆ ತೊಡಗಿರುವ ನೆಂಬದು ಮೊಗಲರಿಗೆ ಗೊತ್ತಿತ್ತು; ಹೀಗಾದಲ್ಲಿ ಸಮಗ್ರ ಮೇವಾಡವು ರಕ್ತಪಾತ ವಿಲ್ಲದೆ, ಯವನರ ಹಸ್ತಗತವಾಗುತ್ತಲಿದ್ದಿತು. ಕಾರಣ ಮೊಗಲರಿಗೆ ಪ್ರತಾಪನ ವಿಷಯದಲ್ಲಿ ಅವನ ಈ ಯುದ್ಧದ ಸಿದ್ಧತೆಯ ಬಗ್ಗೆ ತುಸುಮಟ್ಟಿಗೆ ಸಂದೇಹ ವುಂಟಾದರೂ, ಅದನ್ನವರು ಲಕ್ಷಕ್ಕೆ ತೆಗೆದುಕೊಳ್ಳಲಿಲ್ಲ. ಯಾಕಂದರೆ ಪ್ರತಾಪನ ಈ ಕಾರ್ಯಕ್ಕೆ ವಿಘ್ನು ಮಾಡಿ, ಅನರ್ಧಕವಾದ ಲೋಕಹಾನಿಯನ್ನು ಮಾಡಿಕೊ ಧೃವದು ಅವರ ಇಷ್ಟವಾಗಿರಲಿಲ್ಲ. * ಸೇನಾಪತಿಯಾದ ಶಹಬಾಜಖಾನನು ಅರವಲಿಯ ಆಗ್ನೆಯ ಭಾಗದಲ್ಲಿ ರುವ ಸಮನೆಲವುಳ್ಳ ಸ್ಥಳವೆಲ್ಲವನ್ನು ಕ್ರಮವಾಗಿ ಆಕ್ರಮಿಸಿಕೊಂಡಿದ್ದನು; ಮತ್ತು