ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮವಾಡ ವಿಜಯ ೧೫೫ ••••• MMMMMM ಮೊಗಲ ಸೈನಿಕರ ಬೇರೊಂದು ಗುಂಪು ಇದ್ದಿತು. ಇವರೂ ಶಹಬಾಜಖಾನನ ಸೈನಿಕರಂತೆ ಯಮನ-ಮನೆಗೆ ಹೋಗಬೇಕಾಯಿತು. ರಜಪೂತರಿಗೆ ದೇವೀರದ ಯುದ್ಧದಲ್ಲಿ ದೊರೆತ ಜಯವು ಅತಿಶಯ ಮಹ ತ್ವದ್ದಾಗಿದೆ, ಇದರಿಂದ ಮುಂದೆ ರಜಪೂತರು ಕ್ರಮವಾಗಿ ಉನ್ನತಿಯನ್ನು ಪಡೆದಿ ದ್ದಾರೆ. ಕಾರಣ ದೇವಿರದಲ್ಲಿ ರಜಪೂತರ ಭಾಗ್ಯ-ಪ್ರವಾಹದ ಗತಿಯು ಬೇರೆಕಡೆಗೆ ಒಲಿಯಿತೆಂದು ಹೇಳಬಹುದು ದೈವವಶದಿಂದ ತಡೆಯನ್ನುಂಟುಮಾಡಿದ ಬಂಡೆ ಗಲ್ಲು, ಬೇರೊಂದು ಕಡೆಗೆ ಹೋದದ್ದಾದರೆ ಇಲ್ಲದಂತಾದರೆ ತಡೆದ ಗತಿಯುಳ್ಳ ನದಿಯ ವಾರಿ-ಪ್ರವಾಹವು ತೀರವೇಗದಿಂದ ತೀರಭೂಮಿಯನ್ನು ತೋಯಿಸುತ್ತ ಓಡುವಂತೆ, ದೇವೀರದ ಪವಿತ್ರ-ಭೂಮಿಯಲ್ಲಿ ಚಿರಶತ್ರುಗಳಾದ ಮೊಗಲರನ್ನು ಸೋಲಿಸಿದ ರಜಪೂತರ ವಿಜಯ-ವಾಹಿನಿಯು ಮಹಾವೇಗದಿಂದ ಮುಂದೆ ಸಾಗಿತು. ಯವನರ ಬಲವಾಗಲಿ, ಕೌಶಲ್ಯವಾಗಿ ಈ ಪ್ರಬಲತರವಾದ ವೇಗ ವನ್ನು ತಡೆಯಲು ಎಷ್ಟು ಮಾತ್ರವೂ ಸಮರ್ಥವಾಗಲಿಲ್ಲ. ಹಳದೀಘಟ್ಟದ ಯುದ್ಧದ ತರುವಾಯ ರಜಪೂತ ಸೈನಿಕರು ಮೇಲಿಂದ ಮೇಲೆ ಅಪಜಯ ಪಡೆ ಯುತ್ತ ನಡೆದಂತೆ, ದೇವೀರದ ವಿಜಯದ ನಂತರ ಎಲ್ಲ ಕಡೆಯಲ್ಲಿಯ ಜಯ ಶಾಲಿಗಳಾಗುತ್ತ ನಡೆದರು, ಅಂದರೆ ಹಳದೀಘಟ್ಟದಲ್ಲುಂಟಾದ ತಡೆಯು, ದೇವೀರ ದಲ್ಲಿ ಇಲ್ಲದಂತಾಗಿಹೋಯಿತು. ಹಳದೀಘಟ್ಟದ ಸಂಧ್ಯೆಯು, ದೇವೀರದಲ್ಲಿ ಪ್ರಭಾತವಾಗಿ ಪರಿಣಮಿಸಿತು. ತೀವ್ರವೇ ರವಿಕುಲದ ರಜಪೂತರ ಗೌರವ ಸೂರ್ಯನು ಭಾಗ್ಯಾಕಾಶದಲ್ಲಿ ಸಮುದಿತನಾದನು. ಮೊಗಲರು ಬಹು ತೊಂದರೆಯಲ್ಲಿ ಬಿದ್ದರು; ಇವರು ಪುನಃ ತಮ್ಮಲ್ಲಿ ವ್ಯವಸ್ಥೆಯನ್ನುಂಟುಮಾಡಿಕೊಂಡು, ಯುದ್ಧಕ್ಕೆ ಸಿದ್ದರಾಗುವ ಪೂರ್ವದಲ್ಲಿಯೇ, ರಜಪೂತರು ಕಮಲಮೂರ ದುರ್ಗವನ್ನಾಕ್ರಮಿಸಿದರು; ಈ ಸ್ಥಳದಲ್ಲಿ ಸೇನಾಪತಿ ಯಾದ ಅಬ್ದುಲನು ತನ್ನ ಸೈನಿಕರೊಡನೆ ರಜಪೂತರ ಕ್ರೋಧಕ್ಕೆ ಆಹುತಿಯಾ ದನು. ವಿಜಯಿಗಳಾದ ರಜಪೂತರು ಸ್ವದೇಶದ ಮತ್ತು ಸ್ವಜಾತಿಯ ಶತ್ರುಗಳ ಪ್ರತಿಹಿಂಸೆಯನ್ನು ಭಯಂಕರ ರೀತಿಯಿಂದ ಮಾಡಹತ್ತಿದರು. ಇವರ ಒರೆಯಿಂದ ಹಿರಿದ ಖಡ್ಡಗಳಿಂದ ಯಾರೂ ಪಾರಾಗಲಿಲ್ಲ; ಶತ್ರುಗಳ ದರ್ಶನಮಾತ್ರದಿಂದ ರಜ ಪೂತರು ಅವರನ್ನು ಗೊತ್ತಿಗೆ ಹಚ್ಚತೊಡಗಿದರು. ಹೀಗಾಗಿ ಮೊಗಲರ ರಕ್ತ