ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಮಹಾರಾಣಾ ಪ್ರತಾಪಸಿಂಹ MMMMMMM My vvvvvvM ದಿಂದ ಮೇವಾಡದ ಭೂಮಿಯು ಶೋಭಿಸಹತ್ತಿತು. ಒಂದು ಸಮಯದಲ್ಲಿ ಪ್ರತಾ. ಪನು ಸ್ವಜಾತಿಯ ಜನರೆಲ್ಲರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ, ಜನರ ಮನೆಗಳನ್ನು ಸ್ಮಶಾನದಂತೆ ಮಾಡಿದ್ದನು, ಈ ಸಮಯದಲ್ಲಿ ಅವನು ವಿಜಾತಿಯ ಶತ್ರುಗಳನ್ನು ಚೂರು ಚೂರಾಗಿ ಮಾಡಿ, ಮೇವಾಡದ ಘಟ್ಟದ ಮಾರ್ಗಗಳನ್ನೂ ಯುದ್ಧ ಭೂಮಿಗಳನ್ನೂ ಮಸಣದಂತೆ ಮಾಡಿದನು. ಕೇವಲ ಕಮಲಮೊರ ವೊಂದೇ ಅಲ್ಲ; ತುಸು ದಿವಸಗಳಲ್ಲವನು ಒಂದೊಂದಾಗಿ ಇಪ್ಪತ್ತೆರಡು ಕೋಟೆ ಗಳನ್ನು ತನ್ನ ಅಧೀನಪಡಿಸಿಕೊಂಡನು.? ಈ ಸಮಯದಲ್ಲಿ ಪ್ರತಾಪನು ವೈರಿಗಳ ಸೇಡನ್ನು ಭಯಂಕರ ರೀತಿಯಿಂದ ತೀರಿಸಿಕೊಳ್ಳತೊಡಗಿದನು. ಇದೊಂದು ರಜಪೂತರ ಭೀಷಣ ಅತ್ಯಾಚಾರವೆಂದು ತೋರುವಂತಿದ್ದರೂ, ಅಸ್ವಾಭಾವಿಕವಾದುದಲ್ಲವೆಂದು ಹೇಳಬಹುದಾಗಿದೆ, ಯಾ ಕಂದರೆ ಮೊಗಲರು ರಜಪೂತರನ್ನು ಬಹಳವಾಗಿ ದುಃಖಪಡಿಸಿದ್ದರು. ಅವರ ಅತ್ಯಾಚಾರಕ್ಕೆ ಮೇರೆಯಿರಲಿಲ್ಲ. ಈ ಮೊಗಲರು ಒಂದೇಸವನೆ ಇಪ್ಪತ್ತೈದು ವರುಷಗಳ ವರೆಗೆ ರಜಪೂತರ ಬೆನ್ನು ಹತ್ತಿ, ನಾನಾ ಸ್ಥಳಗಳಲ್ಲಿ ಅವರ ಮೇಲೆ ಬಿದ್ದು, ಅನೇಕ ಪ್ರದೇಶಗಳನ್ನು ತಮ್ಮ ಅಧೀನಪಡಿಸಿಕೊಂಡಿದ್ದರು, ಉಳಿದವರನ್ನು ಗೃಹತ್ಯಾಗಿಗಳನ್ನಾಗಿ ಮಾಡಿ, ಸನ್ಯಾಸಿಗಳಾಗುವಂತೆ ಮಾಡಿದ್ದರು, ಅಸಂಖ್ಯ ರಾಜಪುತ್ರರಮಣಿಯರು ಮೊಗಲರ ಕೈಯಿಂದ ಪಾರಾಗುವದಕ್ಕಾಗಿ ಜೋಹಾರ ವ್ರತದಲ್ಲಿ ಅಗ್ನಿ ನಾರಾಯಣನಿಗೆ ಆಹುತಿಯಾಗಬೇಕಾಯಿತು. ಹೀಗಾಗಿ ಮೊಗ ಲರು ರಜಪೂತರನ್ನು ನಿರ್ಮೂಲ ಮಾಡುವದಕ್ಕೆ ತಮ್ಮ ಯಾವಚ್ಛಕ್ತಿಯನ್ನು ಪ ಯೋಗಿಸುವದಕ್ಕೂ ಹಿಂದುಮುಂದೆ ನೋಡಿರಲಿಲ್ಲ. ಇಂತಹ ಕ್ರೂರರಾದ ಶತ್ರು ಗಳು ಇಂದು ಕೈಯಲ್ಲಿ ಸಿಕ್ಕುಬಿದ್ದಿರುವಾಗ, ಸಾಧುಭಾವದಿಂದ ಇವರನ್ನು ಸುಮ್ಮನೆ ಬಿಟ್ಟು ಬಿಡುವದು ರಜಪೂತ ಸೈನಿಕರಿಗೆ ಅಸಂಭವವಾಯಿತು. ಮೊಗಲರು ಕೆಲವು ರಜಪೂತರ ಗಾಯದಲ್ಲಿ ಉಪ್ಪು ತುಂಬಿ, ಅವರಿಗೆ ಮರ್ಮಾಂತಿಕವಾದ ವೇದನೆಯನ್ನುಂಟುಮಾಡಿದ್ದರು; ಇದನ್ನು ಆ ರಜಪೂತರು ಮರೆಯುವದು ಹೇಗೆ ? ಕಾರಣ ರಜಪೂತರು ಶತ್ರುಗಳಿಂದೊದಗಿದ ಹಿಂದಿನ ಯಾವತ್ತೂ ಅತ್ಯಾಚಾರಗಳ ಸೇಡನ್ನು ತೀರಿಸತೊಡಗಿದರು. ಈ ತರದ ಸ್ಥಿತಿಯಲ್ಲಿ ಕ್ಷಮೆಯನ್ನು ತೋರಿಸು ವದು ಮಹತ್ವವಾದದ್ದು ; ಇಂತಹ ಮನುಷ್ಯರ ಕೀರ್ತಿಯು ಜಗತ್ತಿನಲ್ಲಿ ಬೆಳೆಯು. t Rajasthan Vol I P. 281