ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮವಾಡ.ವಿಜಯ ೧೫೬ M ವದು. ಹೀಗಾದಲ್ಲಿ ಮನುಷ್ಯ-ದೇವರಲ್ಲಿ ಪ್ರಭೇದವೇ ಉಳಿಯುವಂತಿಲ್ಲ; ಯಾಕಂದರೆ ದೇವರು ದಯಾಸಾಗರನಾಗಿದ್ದು, ಯಾವತ್ತರಲ್ಲಿಯೂ ದಯೆಯನ್ನು ತೋರಿಸುತ್ತಿರುವನು. ಅಂತೆಯೇ ಮನುಷ್ಯನೂ ಶತ್ರು-ಮಿತ್ರರಲ್ಲಿ ಸಮಭಾವವನ್ನಿ ವೃದ್ದಾದರೆ ಎಲ್ಲರನ್ನೂ ಪ್ರೇಮದಿಂದ ನಡೆಯಿಸಿಕೊಂಡದ್ದಾದರೆ, ಅವನೂ ದೇವತ್ವವನ್ನು ಹೊಂದುವನು. ಈ ಮೇರೆಗೆ ಎಷ್ಟೋ ಸಾಧುಗಳು ಆಚರಿಸಿ, ದೇವತ್ವವನ್ನು ಪಡೆದವರು ಭಾರತಭೂಮಿಯಲ್ಲಿ ಅನೇಕರಾಗಿ ಹೋಗಿದ್ದಾರೆ. ಆದರೆ ಸಾಂಸಾರಿಕ ಮನುಷ್ಯರಿಗೆ ಇದು ಸಾಧ್ಯವಾಗುವದೆಂಬದನ್ನು ಹೇಳಲಿಕ್ಕೆ ಬರುವಂತಿಲ್ಲ. ಆದುದರಿಂದ ರಜಪೂತರು ಈ ಪ್ರಸಂಗದಲ್ಲಿ ದಯದೋರಿಸುವದು ಸಂಭವಪರವಾಗಿತ್ತೆ, ಹೇಗೆಂಬದು ವಿವೇಚ್ಛವಿಷಯವಾಗಿದೆ. ರಜಪೂತರ ಪ್ರತಿ ಜ್ಞೆಯೂ, ಸಾಹಸವೂ ಭೀಷಣವಾಗಿರುವಂತೆ, ಅವರ ಪ್ರತಿಹಿಂಸೆಯೂ ಭಯಂಕ ರ ಸ್ವರೂಪವನ್ನು ಹೊಂದಿತ್ತು, ತುಸು ದಿವಸಗಳಲ್ಲಿಯೇ ಪ್ರತಾಪನು ಚಿತೋಡ ಮತ್ತು ಮಂಡಲಗಡಗಳನ್ನು ಬಿಟ್ಟು, ಮೇವಾಡದ ಯಾವ ಪ್ರದೇಶಗಳನ್ನು ಕೈವಶಮಾಡಿಕೊಂಡನು. ಹಿಂದೆ ಮಾನಸಿಂಹನು ಪ್ರತಾಪನ ದರ್ಶನಕ್ಕೆ ಬಂದ ವೇಳೆಯಲ್ಲಿ ಅವಮಾ ನಿತನಾಗಿ, ರಾಣಾನ ಗರ್ವವನ್ನಿಳಿಸುವ ಪ್ರತಿಜ್ಞೆ ಮಾಡಿ ಹೋಗಿದ್ದನೆಂಬದನ್ನು ಹೇಳಿದ್ದೇವೆ. ಹಳದೀಘಟ್ಟದ ಯುದ್ಧದ ತರುವಾಯ ಪ್ರತಾಪನಿಗೊದಗಿದ ಅನೇಕ ದುಃಖಗಳನ್ನು ನೋಡಿ, ಮಾನಸಿಂಹನಿಗೆ ಪರಮಾನಂದವಾಗಿದ್ದಿತು. ಮತ್ತು ಅವನು ತನ್ನ ಪ್ರತಿಜ್ಞೆಯಂತೆ ಪ್ರತಾಪನ ಗರ್ವವನ್ನಿಳಿಸಿದೆನೆಂದು ಭಾವಿಸಿ, ಗರ್ವಿತನಾಗಿ ಕಾಲಹರಣ ಮಾಡುತ್ತಿದ್ದನು. ಪ್ರತಾಪನು ತನಗೊದಗಿದ ಈ ಸುಯೋಗದಲ್ಲಿ ಮಾನಸಿಂಹನಿಗೆ ತಕ್ಕ ಶಾಂತಿಯನ್ನು ವಿಧಿಸುವ ಮನಸು ಮಾಡಿ ದನು. ಅದರಂತೆ ಅವನು ಅಂಬರವನ್ನು ಮುತ್ತಿ, ಅದರ ಮುಖ್ಯ ವ್ಯಾಪಾರದ ಸ್ಥಳವಾದ ಮಾಲಪುರವನ್ನು * ಸುಲಿಗೆಮಾಡಿದನು. ಮುಸನ್ಮಾನರು ಅನೇಕ ಸ್ಥಳಗಳಲ್ಲಿ ಪರಾಜಿತರಾಗಿ ಓಡಿಹೋದರು; ಉದ ಯಪುರದಲ್ಲಿದ್ದ ಅಕಬರನ ಸೈನಿಕರು, ಆ ಸ್ಥಳವನ್ನು ರಕ್ಷಿಸಿಕೊಳ್ಳಲು ಸಮರ್ಧ ರಾಗಲಿಲ್ಲ; ಅದರಿಂದವರು ರಜಪೂತರ ಪೀಡೆಯನ್ನು ತಪ್ಪಿಸಿಕೊಳ್ಳುವದಕ್ಕಾಗಿ,

  • ಇದು ಅಜಮೀರದಿಂದ ಸುಮಾರು ೪೫ ಮೈಲಿನ ಮೇಲೆ ಪೂರ್ವಕ್ಕಿರುವದು, ಮತ್ತು ಜಯಪುರದಿಂದ ದಕ್ಷಿಣಕ್ಕೆ ಸುಮಾರು ಇಷ್ಟೇ ದೂರದಲ್ಲಿದೆ. ಇದೊಂದು ಉತ್ತಮವಾದ ಬಂದರವು.