ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಮಹಾರಾಣಾ ಪ್ರತಾಪಸಿಂಹ M ಸ್ಟೇಚ್ಛೆಯಿಂದ ಆ ಸ್ಥಳವನ್ನು ಬಿಟ್ಟು ಹೋದರು. ಕಾರಣ ಪ್ರತಾಪಸಿಂಹನಿಗೆ ತನ್ನ ರಾಜಧಾನಿಯು ಅನಾಯಾಸವಾಗಿ ದೊರೆಯಿತು. ಬಹು ದಿವಸಗಳಾದ ಮೇಲೆ, ಅತೀವ ಕಷ್ಟವನ್ನು ಸಹಿಸಿದ ತರುವಾಯ, ಭೀಷಣ ಸಾಹಸಕೃತ್ಯಗಳನ್ನು ಕೈಕೊಂಡಬಳಿಕ ಚಿತೋಡದ ಗೌರವವು ಪುನಃ ಉದಿತವಾಯಿತು. ಇದರ ಸಲು ವಾಗಿ ರಜಪೂತರು ತೋರಿಸಿದ ಅಮಾನುಷಿಕ ಆತ್ಮಯಜ್ಞ, ಸಹಿಷ್ಣುತೆ, ಪರಾ ಕ್ರಮಗಳು ಜಗತ್ತಿನ ಯಾವ ದೇಶದ ಇತಿಹಾಸದಲ್ಲಿಯೂ ಕಾಣಬರುವದಿಲ್ಲೆಂದು ಹೇಳಬಹುದಾಗಿದೆ. ಪರಾಕ್ರಮಿಯಾದ ಇರಾಣದ ಅರಸನು ತನ್ನ ದೊಡ್ಡ ಸೈನ್ಯದೊಡನೆ ಗ್ರೀಸವನ್ನಾಕ್ರಮಿಸಿದನು, ಇವರಿಂದ ಗ್ರೀಕರ ಸ್ವತಂತ್ರತೆಯು ನಾಶವಾಗುವ ಸಮಯದಲ್ಲಿ, ಮುಷ್ಟಿ ಮಯ ಗ್ರೀಕವೀರರು ಧರ್ಮಪಲಿಯ ಘಟ್ಟದ ಮಾರ್ಗ ದಲ್ಲಿ ಸ್ವದೇಶಕ್ಕಾಗಿ ಆತ್ಮಯಜ್ಞವನ್ನು ಮಾಡಿದ್ದಾರೆ; ಅದರಂತೆಯೇ ಪ್ರತಾಪನ ಸೈನಿಕರೂ ಹಳದೀಘಟ್ಟದ ಯುದ್ಧದಲ್ಲಿ ಅಮಾನುಷಿಕ ಆತ್ಮಯಜ್ಞವನ್ನು ಮಾಡಿ ದ್ದಾರೆ. ಗ್ರೀಕರು ಮಾರಧನದ ಪ್ರಖ್ಯಾತವಾದ ರಣಭೂಮಿಯಲ್ಲಿ ಇರಾಣಿಯರನ್ನು ಸೋಲಿಸಿಲಿ, ಸ್ವದೇಶದ ಉದ್ಧಾರ ಮಾಡಿದ್ದಾರೆ; ಅದರಂತ ಪ್ರತಾಪಸಿಂಹನೂ ದೇವೀರದ ಯುದ್ಧಭೂಮಿಯಲ್ಲಿ ಮೊಗಲರ ಬಲವನ್ನು ನಿರ್ಮೂಲ ಮಾಡಿ, ಶತ್ರುಗಳಿಂದ ತನ್ನ ದೇಶವನ್ನು ಕಾಪಾಡಿಕೊಂಡಿದ್ದಾನೆ. ಮಾರಧನದ ಯುದ್ಧಫಲವು ಬೇರೆಯಾಗಿದ್ದಲ್ಲಿ, ಯುರೋಪದ ಇತಿಹಾಸವು ಬೇರೆ ರೀತಿಯಿಂದ ಪರಿವರ್ತಿತವಾಗುತ್ತಲಿತ್ತು; ಅದರಂತೆ ದೇವೀರದ ಕಾಳಗದಲ್ಲಿ ಪ್ರತಾಪನು ಜಯಶಾಲಿಯಾಗದಿದ್ದಲ್ಲಿ, ರಜಪೂತರ ವಂಶಗೌರವದ ಮತ್ತು ಜಾತಿ ಯ ಅಸ್ತಿತ್ವದ ಅವಸ್ಥೆಯು ಏನಾಗುತ್ತಿತ್ತೆಂಬದನ್ನು ಯಾರು ಬಲ್ಲರು? ಆದರೆ ಗ್ರೀಸ ದೇಶದ ಅನೇಕ ಇತಿಹಾಸಕಾರರು ಈ ಐತಿಹ್ಯವನ್ನು ಬರೆದಿಟ್ಟಿರುವಂತೆ, ನಮ್ಮ

  • ಇರೆಣದ ಅರಸನಾದ ದರಾಯಸನು ಕ್ರಿ ಶ ಪೂ ದಲ್ಲಿ ೪೯೦ ನೇ ವರ್ಷ ಮಾರಥನ ದಲ್ಲಿ ಪರಾಜಿತನಾದನು ಇವನ ಮಗನಾದ ಜರಕ್ಷಿಸನು ದೊಡ್ಡ ಸೈನ್ಯವನ್ನು ತಗೆದುಕೊಂಡು ಗ್ರೀಸವನ್ನಾಕ್ರಮಿಸಿದನು ಈ ಸಮಯದಲ್ಲಿ ಮಹಾವೀರನಾದ ಲಿವೊನಿಡಸನು ತನ್ನ ತುಸು ಸೈನಿ ಕರೊಡನೆ ಥರ್ಮಪಲಿಯ ಘಟ್ಟದ ಮಾರ್ಗದಲ್ಲಿ ವನನ್ನು ಎದುರಿಸಿದನು, ( ಕ್ರಿ ಶ ಪೂ ೪೫೦ ) ಮತ್ತು ಕಡೆತನಕ ಯುದ್ಧ ಮಾಡಿ, ಸಸೈನ್ಯ ಮರಣಹೊಂದಿದನು