ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧LO ಮಹಾರಾಣಾ ಪ್ರತಾಪಸಿಂಹ vvvvvvvvvvvvv vvvvvvvvvvvvvvvvvvvvvv V V V /yyyyy ಏಕವಿಂಶ ಪರಿಚ್ಛೇದ. ಜೀವನ-ಸಂಧ್ಯಾ, ಅದು ಕಾರಣದಿಂ ಮಾನವ, | ಮುದದಲಿ ಕೈಕೊಂಡ ಬಳಿಕ ಕಾರ್ಯವನೊ೦ದ೦ || ಒದಗಿದ ದುಃಖಕ ಹದರಲ್‌ | ಸದಯಾಘನಶಂಕರನೊಲಿಯನು ನಿಮಗೆಂದುಂ 18 ೧1 ಉದಯಪುರವು ಹಸ್ತಗತವಾದ ತರುವಾಯ, ಪ್ರತಾಪನು ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಮೇವಾಡದ ಬಹುಭಾಗವು ರಜಪೂತರ ವಶವಾಗಿದ್ದರೂ, ಶಿಶೋದಿಯಾ ರಜಪೂತರ ಪ್ರಾಚೀನ ರಾಜಧಾನಿಯಾದ ಚಿತೋ ಡವು ಪ್ರತಾಪನ ಕೈಸೇರಿರಲಿಲ್ಲ. ಪ್ರತಾಪನು ಭೀಮಸಿಂಹನ ಧನದಿಂದ ಸೈನ್ಯ ಸಂಚಯ ಮಾಡಿದನೆಂದು ಹಿಂದೆ ಹೇಳಿದ್ದೇವೆ. ಈ ಸೈನಿಕರಲ್ಲಿಯ ಬಹು ಜನರು ಈವರೆಗಾದ ಅನೇಕ ಯುದ್ಧಗಳಲ್ಲಿ ಮರಣಹೊಂದಿದ್ದರು. ಉಳಿದ ಸೈನಿಕರು ಆತ್ಮ ರಕ್ಷಣೆಗಾಗಿ ಅವಶ್ಯವಾಗಿ ಬೇಕಾಗಿದ್ದರು. ಮುಸಲ್ಮಾನರು ಚಿತೋಡದ ರಕ್ಷಣೆ ಗಾಗಿ ದೊಡ್ಡ ಸೈನ್ಯವನ್ನಿರಿಸಿದ್ದರು. ಪ್ರತಾಪನು ತನ್ನಲ್ಲಿರುವ ಅಲ್ಪಸಂಖ್ಯಾಕ ರಾದ ಸೈನಿಕರನ್ನು ಕರೆದುಕೊಂಡುಹೋಗಿ, ಚಿತೋಡದಲ್ಲಿರುವ ಮೊಗಲ ಸೈನಿಕ ರನ್ನು ಸೋಲಿಸುವದು ಆಗದ ಕಾರ್ಯವಾಗಿತ್ತು. ಕಾರಣ ಹೀಗೆ ಮಾಡುವ ದರಿಂದ ರಜಪೂತರಿಗೆ ಯಾವ ಲಾಭವೂ ಆಗುತ್ತಿರಲಿಲ್ಲ; ಮೇಲಾಗಿ ಹಾನಿಯನ್ನು ಹೊಂದುವ ಸಂಭವವಿದ್ದಿತು. ಪ್ರತಾಪನ ಬಳಿಯಲ್ಲಿ ಈಗಿರುವ ರಜಪೂತಸೈನಿಕರು ಅನೇಕ ಯುದ್ದ ಮಾಡಿ ದಣಿದವರಾಗಿದ್ದರು; ಅದರಿಂದ ಇವರು ಈವರೆಗೆ ಗೆದ್ದು ಕೊಂಡ ಸೀಮೆಗಳ ರಕ್ಷಣೆಮಾಡಿಕೊಳ್ಳಲಿಕ್ಕೆ ಸಹ ಅಸಮರ್ಥರಾಗಿದ್ದರು. ಇಂತಹ ಪ್ರಸಂಗದಲ್ಲಿ ಚಿತೋಡದ ಮೇಲೆ ದಂಡೆತ್ತಿ ಹೋಗುವದು ಹೇಗೆ? ಕಾರಣ ಪ್ರತಾಪನು ತಿರುಗಿ ಚಿತೋಡವನ್ನು ಹಸ್ತಗತಮಾಡಿಕೊಳ್ಳಲು ಸಮರ್ಧನಾಗಲಿಲ್ಲ. ಚಿತೋಡವು ಪ್ರತಾಪನ ಪೂರ್ವಜರ ಲೀಲಾಕ್ಷೇತ್ರವಾಗಿದ್ದಿತು. ರಜ ಪೂತರು ಚಿತೋಡದಿಂದ ವಿತಾಡಿತರಾಗಿ ನಾನಾ ಕಷ್ಟಗಳನ್ನೂ, ಅಗೌರವವನ್ನೂ ಹೊಂದಿದ್ದರು. ಚಿತೋಡದ ಉದ್ಧಾರಕ್ಕಾಗಿಯೇ ಪ್ರತಾಪನು ಕಠೋರಪ್ರತಿಜ್ಞೆ ಯನ್ನು ಮಾಡಿದ್ದನು. ಆದರೆ ಆ ಚಿತೋಡವು ಈ ವರೆಗೆ ಕೈವಶವಾಗದಿದ್ದುದರಿಂದ