ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪಸಿಂಹ ೧೬೨ MM . \ vv /\/ ಮಾಡಲಿಕ್ಕೆ ಪ್ರಯತ್ನಿಸಿದಲ್ಲಿ ಭಾಷೆಯ ದೈನ್ಯತ್ವವು ಪ್ರಕಟವಾಗುವದು. ಆದರೆ ನಮ್ಮ ಕಥಾನಕಕಾಲದಲ್ಲಿ, ಈ ಸ್ಥಳದಲ್ಲಿ ಈ ಅರಮನೆಗಳಿರಲಿಲ್ಲ. ಆ ಕಾಲದಲ್ಲಿ ಈ ಸರೋವರದ ತಟದಲ್ಲಿ, ಪರ್ವತದ ಕೆಳಭಾಗದಲ್ಲಿ ಕುದ್ರ-ಕುಟಿರಗಳಿದ್ದವು; ಇಲ್ಲಿರುವ ಜೀರ್ಣ-ಮಂಟಪದ ಮೇಲ್ಬಾಗದಲ್ಲಿ ಮಹಾರಾಣಾನ ರಕ್ತಪತಾಕೆಯು ಹಾರಾಡುತ್ತಲಿದ್ದಿತು. ಪ್ರಕೃತಿಯ ಚಿತ್ರಪಟದಲ್ಲಿ ಇಂತಹ ದೃಶ್ಯವು ಹುಡುಕಿದರೂ ದೊರೆಯುವಂತಿಲ್ಲ ಈ ಯಾವತ್ತು ಪರ್ಣಕುಟೀರಗಳಲ್ಲಿ ದರಬಾರವು ನೆರೆಯುತ್ತಿ ದ್ವಿತು, ಸರದಾರರು ಒಟ್ಟುಗೂಡುತ್ತಿದ್ದರು; ರಾಜ್ಯ ಕಾರ್ಯವು ನಡೆಯುತ್ತಿದ್ದಿತು. ಶಿಶೋದಿಯಾಕುಲದ ರಾಣಾನ ರಾಜೋಚಿತ ಉತ್ಸವಾದಿಗಳು ಜರಗುತಲಿದ್ದವು, ಈ ಸಾಮಾನ್ಯ ಗುಡಿಸಲುಗಳ ಸಮೂಹವು ಅತ್ಯುಚ್ಚ ಹೃದಯಗಳ ಮತ್ತು ಶ್ರೇಷ್ಠ ಕಲ್ಪನೆಗಳ ಆವಾಸಸ್ಥಾನವಾಗಿದ್ದಿತು; ಆಗ್ರಾದ ಸ್ವರ್ಣಖಚಿತವಾದ ಅರಮನೆ ಯಲ್ಲಿಯೂ ಕೂಡ ಇವುಗಳನ್ನು ನೋಡುವಂತಿರಲಿಲ್ಲ ಮಹಾರಾಣಾನ ಜೀವನ ಸಂಧ್ಯೆಯು ಈ ಕುಟಿರಗಳಲ್ಲಿಯೇ ಕಳೆದುಹೋಯಿತು. - ಬೇರೆ ಬೇರೆ ಸ್ಥಳಗಳಲ್ಲಿ ಮೇಲಿಂದಮೇಲೆ ಪರಾಜಿತರಾಗಿ ಮೊಗಲರು ಕಡೆ ಯಲ್ಲಿ ಉದಯಪುರವನ್ನು ಬಿಟ್ಟು ಹೋದರು, ಅವರು ಈ ಸ್ಥಳವನ್ನು ಪುನಃ ತಮ್ಮ ಕೈವಶಮಾಡಿಕೊಳ್ಳಲಿಕ್ಕೆ ಯತ್ನ ಮಾಡಲಿಲ್ಲ. ಸುಮಾರು ಮೂವತ್ತು ವರುಷಗಳ ವರೆಗೆ ಮೊಗಲರು ರಜಪೂತರೊಡನೆ ಯುದ್ಧ ಮಾಡಿದರು; ಈ ಅವಧಿಯಲ್ಲಿ ಜಯ ಪರಾಜಯಗಳೆಷ್ಟು ಸಾರೆ ದೊರೆತವೆಂಬದರ ಲೆಕ್ಕವಿಲ್ಲ. ರಜಪೂತರು ಸ್ವಜಾತಿ ಗಾಗಿಯೂ ಸ್ವದೇಶಕ್ಕಾಗಿಯೂ ಯುದ್ಧ ಮಾಡುತ್ತಿದ್ದರು, ಮೊಗಲರು ಶ್ರೇಷ್ಠತ್ವದ ಸಲುವಾಗಿಯೂ, ಧನಸಂಪಾದನೆಗಾಗಿಯೂ ಯುದ್ಧ ಮಾಡುತ್ತಿದ್ದರು. ರಜಪೂತ ರಲ್ಲಿರುವ ಅಪ್ರತಿಮ ಉತ್ಸಾಹವೂ, ಅಲೌಕಿಕ ಆತ್ಮತ್ಯಾಗವೂ ಮೊಗಲರಲ್ಲಿರಲಿಲ್ಲ; ಇರಲು ಸಾಧ್ಯವೂ ಇರಲಿಲ್ಲ. ಸತ್ತು ಸತ್ತುಳಿದರೂ ರಜಪೂತರ ಉತ್ಸಾಹವು ಇಲ್ಲ ದಾಗಲಿಲ್ಲ; ಎಷ್ಟೋ ಕಾಲದ ವರೆಗೆ ಜಯದಿಂದ ಮೆರೆದರೂ ಮೊಗಲರ ಉದ್ಯ ಮವು ಇಲ್ಲದಾಯಿತು; ಅಂದರೆ ರಜಪೂತರ ಉತ್ಸಾಹವು ದಿನಾಲು ಬೆಳೆಯುತ್ತಲೂ, • • It 18 ea8y to Waste adjectives on 8uch 8 8ight, but in sober truth, there cannot be, there can never have been else. where in the world, such a spectacle as the Pichola lake pr esents &c ” Under the sun P. 33.