ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೩ ಜೀವನ ಸಂಧ್ಯಾ A 17: + hin - 2 ~ ~ ~ ~ ~ ~

ಮೊಗಲರ ಉತ್ಸಾಹವು ಕಡಿಮೆಯಾಗುತ್ತಲೂ ನಡೆಯಿತು ಪ್ರತಾಪನು ಉದಯ ಪುರಕ್ಕೆ ತಿರುಗಿ ಬಂದ ತರುವಾಯ, ಮುಸಲ್ಮಾನರು ರಾಜಸ್ತಾನವನ್ನು ಬಿಟ್ಟು ಹೋಗುವದಕ್ಕೆ ಇದು ಮೊದಲನೆಯ ಕಾರಣವು. ಪ್ರತಾಪಸಿಂಹನ ಕರೋರವ್ರತ, ದೀರ್ಥೋದ್ಯೋಗ, ಆತ್ಮ ತ್ಯಾಗಗಳನ್ನು ನೋಡಿ, ಶತ್ರುಮಿತ್ರರೆಲ್ಲರೂ ವಿಮುಗ್ಗರಾಗಿಹೋಗಿದ್ದರು. ಪ್ರತಾಪನ ಸೈನಿಕರಾದ ರಜಪೂತರು, ಇವನನ್ನು ದೇವರಂತೆ ತಿಳಿದು, ಭಕ್ತಿಯಿಂದ ಆಚರಿಸುತ್ತಿದ್ದರು. ಮೊಗಲಪಕ್ಷದಲ್ಲಿ ಸೇರಿದ ರಜಪೂತರಲ್ಲನೇಕರು ಪ್ರತಾಪನ ವಿಷಯದಲ್ಲಿ ಮನಃ ಪೂರ್ವಕವಾದ ಭಕ್ತಿಯನ್ನಿರಿಸಿದ್ದರು. ಇವರು ಪ್ರತಾಪನ ವಿರುದ್ದವಾದ ಕಾರ್ಯ ಗಳನ್ನು ಮಾಡುವದಕ್ಕೆ ಎಂದೂ ಮುಂದುವರಿಯುತ್ತಿದ್ದಿಲ್ಲ. 'ಪೃಥ್ವಿರಾಜನು ಪ್ರತಾಪನಲ್ಲಿ ಪ್ರೀತಿಯನ್ನಿರಿಸಿದ್ದನೆಂಬದು ಅವನ ಪತ್ರದಿಂದ ಗೊತ್ತಾಗುವಂತಿದೆ. ಪ್ರತಾಪನ ವಿರೋಧಿಗಳಾದ ರಜಪೂತರಲ್ಲಿ ಮಾನಸಿಂಹನು ಮುಖ್ಯನು. ಇವನು ಪ್ರತಾಪನಿಂದ ಅವಮಾನಿತನಾಗಿ, ಅದರ ಸೇಡನ್ನು ತೀರಿಸಿಕೊಳ್ಳು ವದಕ್ಕೆ ಪ್ರತಾ ಪನ ವಿರೋಧಿಯಾಗಿದ್ದನು. ಆದರೆ ಇವನು ಹಳದೀಘಟ್ಟದ ಯುದ್ಧದ ತರು ವಾಯ ಪ್ರತಾಪನನ್ನು ಪ್ರೀತಿಸತೊಡಗಿದನು. ಇವನು ಪ್ರತಾಪನ ವಿಷಯದಲ್ಲಿ ಭಕ್ತಿವಂತನಾಗಿ, ರಜಪೂತರ ರಾಜ್ಯದಲ್ಲಿ ಸುಲಿಗೆಯನ್ನು ಮಾಡುವದಕ್ಕೆ ಸಮ್ಮತಿ ಸದಿರುವದರಿಂದ, ಅಕಬರನಿಂದ ತಿರಸ್ಕೃತನಾದ ಸಂಗತಿಯನ್ನು ಹಿಂದೆ ಹೇಳಿ ದ್ದೇವೆ. ಕೇವಲ ಮಾನಸಿಂಹನೊಬ್ಬನೇ ಅಲ್ಲ; ಸೇನಾಪತಿ ಅಸಫಖಾನನೂ ಇದೇ ಅಪರಾಧದಿಂದ ಬಾದಶಹನ ಅವಕೃಪೆಗೆ ಪಾತ್ರನಾದನು. ಒಂದು ಸಮಯ ದಲ್ಲಿ ಮೊಗಲಸಾಮ್ರಾಜ್ಯದ ಮುಖ್ಯ ಸೇನಾಪತಿಯು ಪ್ರತಾಪನನ್ನು ಅತ್ಯಂತ ವಾಗಿ ಸ್ತುತಿಸಿ, ಪತ್ರ ಕಳಿಸಿಕೊಟ್ಟದ್ದನ್ನು ಹಿಂದೆ ಉಲ್ಲೇಖಿಸಿದ್ದೇವೆ. ಬೇರೆಯವರ ಮಾತೊತ್ತಟ್ಟಿಗಿರಲಿ; ಸ್ವತಃ ಅಕಬರನು ಕೂಡ ಪ್ರತಾಪನನ್ನು ಪ್ರೀತಿಸಿದನು. ಮೊದಲು ಇವನಲ್ಲಿ ಎಷ್ಟೆ ಪ್ರತಿಹಿಂಸೆಯ ಇಚ್ಛೆಯಿರಲೊಲ್ಲದೇಕೆ, ಕಡೆಯಲ್ಲಿ ಪ್ರತಾಪನ ಅಪ್ರತಿಮ ಗುಣಗಳನ್ನು ನೋಡಿ, ಮುಗ್ಧನಾಗದಿರಲು ಸಮರ್ಧನಾಗ ಲಿಲ್ಲ. ಕಾರಣ ಅಕಬರನು ಪ್ರತಾಪನಿಗೆ ಹೆಚ್ಚು ಕಷ್ಟವನ್ನುಂಟುಮಾಡಲಿಕ್ಕೆ ಇಚ್ಚಿಸಲಿಲ್ಲ. ಮೊಗಲರು ಮೇವಾಡದ ಮೇಲೆ ದಂಡೆತ್ತಿ ಬರದಿರುವದಕ್ಕೆ ಇದು ಎರಡನೆಯ ಕಾರಣವು.