ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-೧೬೪ ಮಹಾರಾಣಾ ಪ್ರತಾಪಸಿಂಹ, ಮೇವಾಡವು ಗುಡ್ಡಗಾಡು ಪ್ರದೇಶವಾಗಿದ್ದಿತು; ಇಂಧ ಪ್ರದೇಶದಲ್ಲಿ ಯುದ್ಧ ಮಾಡುವದರಿಂದ ಬಾದಶಹನಿಗೆ ವಿಶೇಷ ಲಾಭವಾಗುವಂತಿರಲಿಲ್ಲ. ಕಾರಣ ಜಯಾಪಜಯಗಳ ಭೇದವು ಅತ್ಯಲ್ಪವಾಗಿದ್ದಿತು. ಇನ್ನು ಅತ್ಯಲ್ಪ ಫಲದಾಯಕ ವಾದ ಜಯವಾದರೂ ಸುಲಭವಾಗಿ ದೊರೆಯುವಂತಿರಲಿಲ್ಲ; ಯಾಕಂದರೆ ವೀರ ರಾದ ರಜಪೂತರು ಸುಲಭವಾಗಿ ಸೋಲತಕ್ಕವರಾಗಿರಲಿಲ್ಲ. ಅದರಿಂದ ಮೇವಾ ಡದ ವಿಜಯಕ್ಕಾಗಿ ನಿರರ್ಧಕ ರೀತಿಯಿಂದ ಸೈನ್ಯಹಾನಿ ಮಾಡಿಕೊಳ್ಳುವದು ಬಾದಶಹನ ಮನಸಿಗೆ ಬರಲಿಲ್ಲ. ಮೊಗಲರು ಪುನಃ ಮೇವಾಡದ ಮೇಲೆ ದಂಡೆ ತಿ ಬರದಿರುವದಕ್ಕೆ ಇದು ಮೂರನೆಯ ಕಾರಣವಾಯಿತೆಂದು ಹೇಳಬಹುದು. ಈ ಸಮಯದಲ್ಲಿ ಅಕಬರನು ಬಂಗಾಲ, ಕಾಶ್ಮೀರ, ದಕ್ಷಿಣಹಿಂದುಸ್ತಾನ ಗಳಲ್ಲಿ ಜಯಪಡೆಯುವ ಗೊಂದಲದಲ್ಲಿ ಬಿದ್ದನು. ಸನ್ ೧೫೭೬ ರಲ್ಲಿ ಮೊಗಲರು ಬಂಗಾಲದಲ್ಲಿ ಜಯಪಡೆದಿದ್ದರು. ಆದರೆ ಇದು ಕೇವಲ ಜಯವಾಗಿದ್ದಿತಲ್ಲದೆ ಇದರಿಂದಾವ ಲಾಭವೂ ಆಗಿರಲಿಲ್ಲ. ಯಾಕಂದರೆ ಮೊಗಲರು ಈ ದೇಶವನ್ನು ಗೆದ್ದು ಕೊಂಡಬಳಿಕ ಇದನ್ನು ತಮ್ಮ ಆಧೀನದಲ್ಲಿಟ್ಟು ಕೊಂಡು, ಮೊಗಲ ಅಧಿಕಾ ರಿಗಳನ್ನು ನಿಯಮಿಸಿ, ರಾಜ್ಯ ಕಾರಭಾರವು ಸುಸೂತ್ರವಾಗಿ ಸಾಗುವಂತೆ ಮಾಡಿರ ಲಿಲ್ಲ. ಸರೋವರದಲ್ಲಿ ಕಲ್ಲನ್ನೆಸೆದ ಕೂಡಲೇ ನೀರು ಒತ್ತಟ್ಟಿಗೆ ಸರಿದು, ಆ ಕಲ್ಲಿಗೆ ಸ್ಥಳವನ್ನು ಕೊಡುವದು; ಮತ್ತು ಪರಮುಹೂರ್ತದಲ್ಲಿ ಪುನಃ ಆ ಸ್ಥಳವನ್ನು ವ್ಯಾಪಿಸಿಕೊಳ್ಳುವದು. ಅದರಂತೆ ಮೊಗಲರು ವಂಗದೇಶವನ್ನು ಆಕ್ರಮಿಸಿದ ತರುವಾಯ, ಅಲ್ಲಿಯ ಪರಾಣರು ಅಧವಾ ದೇಶೀಯ ಅರಸರು ಯುದ್ಧದಲ್ಲಿ ಪರಾಜಿತರಾಗಿ ಓಡಿಹೋಗುತ್ತಿದ್ದರು. ಪುನಃ ಸಮಯ ದೊರೆತ ಕೂಡಲೆ ಮೊದ ಲಿನಂತೆ ರಾಜ್ಯವನ್ನು ಕೈಯಲ್ಲಿ ತೆಗೆದುಕೊಳ್ಳುವದಕ್ಕೆ ಕುಂಠಿತರಾಗುತ್ತಿರಲಿಲ್ಲ. ಇದೇ ಬಂಗಾಲವನ್ನು ಗೆದ್ದುಕೊಂಡು, ಅಲ್ಲಿ ಸಂಪೂರ್ಣವಾದ ಅಧಿಕಾರವನ್ನು ನಡೆಸಬೇಕೆಂಬ ಇಚ್ಛೆಯು ಮೊಗಲರಲ್ಲಿ ಸಂಪೂರ್ಣವಾಗಿ ಇದ್ದಿತು; ಮತ್ತು ಬಾದಶಹನು ಇದಕ್ಕಾಗಿ ಮೇಲಿಂದ ಮೇಲೆ ಬಂಗಾಲಕ್ಕೆ ಸೈನ್ಯ ಕಳುಹಿಸಿದ್ದನು. ಕಾಶ್ಮೀರ ಮತ್ತು ಕಾಬೂಲಗಳನ್ನು ಜಯಿಸುವದಕ್ಕಾಗಿಯೂ ಮೊಗಲರ ಅನೇಕ ಸೈನ್ಯದ ಹಾನಿಯಾಗಿದ್ದಿತು. ಈ ಸಮಯದಲ್ಲಿ ದಕ್ಷಿಣಹಿಂದುಸ್ತಾನದಲ್ಲಿರುವ ಅಹ ಮೃದನಗರವನ್ನು ಜಯಿಸುವದಕ್ಕೆ ಬಾದಶಹನು ಹೋಗಿ, ದೊಡ್ಡ ಯುದ್ಧ ಕಾರ್ಯದಲ್ಲಿ ವ್ಯಗ್ರನಾದನು. ದಕ್ಷಿಣದಲ್ಲಿ ನಡೆದ ಯುದ್ದವು ಕ್ರಮವಾಗಿ ಘೋರ