ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವನ ಸಂಧ್ಯಾ ೧LA VVVVVVVV \ vvvvvvvvv vvvvvv vvv ತರವಾಗುತ್ತ ನಡೆಯಿತ್ತು, ಅದರಿಂದ ಮೊಗಲ ಸರಕಾರದ ಅಧಿಕಾಂಶ ಸೈನಿಕರು ಈ ಕಡೆಗೆ ಹೋಗಬೇಕಾಯಿತು. ಇದು ಅಕಬರನು ಪುನಃ ಮೇವಾಡವನ್ನಾಕ ಮಿಸದಿರುವದಕ್ಕೆ ನಾಲ್ಕನೆಯ ಕಾರಣವು. ಈ ಯಾವತ್ತು ಕಾರಣಗಳಿಂದ ಮೊಗಲರು ರಾಜಸ್ತಾನವನ್ನು ಬಿಟ್ಟು ಹೋದರು. ದೂರದ ದಾರಿಯನ್ನು ನಡೆದುಬಂದ ಸಧಕನು, ವಿಶ್ರಾಂತಿಯನ್ನು ತೆಗೆದುಕೊಳ್ಳುವಂತೆ, ರಣಶ್ರಾಂತನಾದ ಮಹಾರಾಣಾನು ಉದಯಪುರದ ಕುಟೀ ರದಲ್ಲಿ ತನ್ನ ಆಯುಷ್ಯದ ಕಡೆಯ ಭಾಗವನ್ನು ಶಾಂತಿಯಿಂದ ಕಳೆಯುವ ಅವ ಸರವನ್ನು ಹೊಂದಿದನು. ಹೀಗೆ ಸಮಯದೊರೆತರೂ, ಪ್ರತಾಪನಿಗೆ ಶಾಂತಿಯು ದೊರೆಯಲಿಲ್ಲ; ಯಾಕಂದರೆ ಮನುಷ್ಯನು ಶಾಂತಿಯಲ್ಲಿ ಕಾಲಕಳೆಯಬೇಕಾದಲ್ಲಿ, ಮನಸನ್ನು ಸುಪ್ರಸನ್ನ ವಾಗಿಟ್ಟುಕೊಳ್ಳುವದು ಅವಶ್ಯವಿರುವದು; ಆದರೆ ರಾಣಾನ ಮನಸ್ಸು ಪ್ರಸನ್ನವಾಗಿರಲಿಲ್ಲ; ಯಾಕಂದರೆ ಅವನು ಕೈಕೊಂಡ ಕಾರ್ಯವು ಸಂಪೂರ್ಣ ವಾಗಿ ಕೊನೆಗಂಡಿರಲಿಲ್ಲ. ರಾಣಾನು ಬಹುಕಾಲವನ್ನು ಯುದ್ಧದಲ್ಲಿ ಕಳೆದನು. ಆದರೆ ಚಿತೋಡವು ಅವನ ಹಸ್ತಗತವಾಗಲಿಲ್ಲ. ಅದರಿಂದ ರಾಣಾನು ಸದಾ ಇದೇ ವಿಚಾರದಲ್ಲಿರುತ್ತಿದ್ದನು. ಆದರೆ ಇವನ ವಿಚಾರಕ್ಕೆ ಸಲವಾಗುವಂತಿರ ಲಿಲ್ಲ, ಚಿತೋಡವು ಹಸ್ತಗತವಾಗುವ ಆಶಯು ಉಳಿದಿರಲಿಲ್ಲ; ಕಾರಣ ಪ್ರತಾ ಪನ ಕಣ್ಣಿಗೆ ಸದಾ ನಿರಾಶೆಯ ಅಂಧಕಾರವು ಕಾಣಿಸುತಲಿತ್ತು. ಇವನು ಪರ್ವ ತದ ಎತ್ತರವಾದ ಶಿಖರದಲ್ಲಿ ನಿಂತು, ದೂರದಲ್ಲಿರುವ ಚಿತೋಡವನ್ನು ನೋಡಿದಾ ಗೆಲ್ಲ, ಕ್ರೋಧದಿಂದಲೂ, ವಿಷಾದದಿಂದಲೂ, ನಿರಾಶೆಯಿಂದಲೂ, ಎಚ್ಚರದಷ್ಟು ತ್ತಿದ್ದನು. ಪಿತೃಪುರುಷರ ಲೀಲಾಸ್ಥಳವಾದ ಚಿತೋಡವು ಮೊಗಲರ ಹಸ್ತಗತವಾ ಗುವದೆಂಬ ಚಿಂತೆಯನ್ನು ಪ್ರತಾಪನು ಸಹಿಸಲಾರದವನಾಗಿದ್ದನು. ಬಾಪ್ಪಾರಾವ ಳನ ವೀರಕೀರ್ತಿ, ಸಮರಸಿಂಹನ ಜೀವನಾಹುತಿ, ಲಕ್ಷಣಸಿಂಹನ ಆತ್ಮಯಜ್ಞ, ಬಾದಲ-ಹಮೀರ-ಪುತ್ತ-ಜಯಮಲ್ಲರ ಅಸಾಮಾನ್ಯ ಶೂರತನ ಈ ಮೊದಲಾದ ಸಂಗತಿಗಳು ಒಂದೊಂದಾಗಿ ಬಂದು ಪ್ರತಾಪನ ಮನಶ್ಚಕ್ಷುವಿನ ಮುಂದೆ ನಿಲ್ಲು ತಿದ್ದವು; ಆಗ ಅವನು ಕಲ್ಲಿನಂತೆ ನಿಶ್ಚಲಭಾವದಿಂದ ಕುಳಿತುಬಿಡುತ್ತಿದ್ದನು. ಉದ್ವೇಗ ಮತ್ತು ಅಸಮಾಧಾನಗಳು ನೂರಾರು ಚೇಳು ಕಡಿದ ವೇದನೆಯ