ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಮಹಾರಾಣಾ ಪ್ರತಾಪಸಿಂಹ, vvvvvvv / / / • • • • ನ್ನುಂಟುಮಾಡುತ್ತ, ಅವನ ವ್ರತಕ್ಲಿಷ್ಟವಾದ ದೇಹವನ್ನು ಜರ್ಜರವಾಗಿ ಮಾಡಿ ಬಿಡುತ್ತಿದ್ದವು, ವಾಚಕಮಹಾಶಯ, ಈ ಸ್ಥಿತಿಯಲ್ಲಿ ಮನುಷ್ಯನು ಸಮಾಧಾನಪಡೆಯು ವದು ಹೇಗೆ? ಮಾನವನು ಶಾಂತಿಯನ್ನು ಹೊಂದಬೇಕಾದಲ್ಲಿ, ಚಿಂತೆಯಿಲ್ಲದವ ನಾಗಿರುವದು ಅವಶ್ಯವಾದದ್ದು. ಹೀಗಿರುವಲ್ಲಿ ಮನುಜನಿಗೆ ಶಾಂತಿಯು ಎಷ್ಟು ಮಾತ್ರವೂ ದೊರೆಯುವಂತಿಲ್ಲ. ಮಹಾರಾಣಾನ ಚಿಂತೆಗೆ ಮೇರೆಯಿರಲಿಲ್ಲ. ಅದ ರಿಂದವನು ಚಿಂತೆಯಿಂದ ಬಿಡುಗಡೆಹೊಂದುವ ಸಂಭವವಿರಲಿಲ್ಲ. ಈ ತರದ ಸ್ಥಿತಿಯಲ್ಲಿ ಮನುಷ್ಯನಿಗೆ ಮಾನಸಿಕ ವ್ಯಾಧಿಯುಂಟಾಗಿ, ಶರೀರದ ಮೇಲೆ ಇದರ ಪರಿಣಾಮವಾಗದೆ ಇರದು. ಪ್ರತಾಪನ ಅಗ್ನಿಯಂತೆ ಪ್ರಕಾಶಿಸುವ ದೇಹವು ಪಾಂಡುವರ್ಣವನ್ನು ಧರಿಸಿತು; ಅಕಾಲದಲ್ಲಿ ಮುಸ್ಸು ಅವನನ್ನಾವರಿಸಿತು. ರಾಣಾನ ಜೀವನದ ಚಿರಸಹಚರರಾದ ಸರದಾರರು, ಅನೇಕ ರೀತಿಯಿಂದ ಸಮಾ ಧಾನಪಡಿಸತೊಡಗಿದರು; ಆದರೆ ಇದರಿಂದೇನೂ ಉಪಯೋಗವಾಗಲಿಲ್ಲ; ಯಾಕಂದರೆ ಪ್ರತಾಪನ ಮನಸಿಗೆ ಸಮಾನವಾದ ಮನಸು ಜಗತ್ತಿನಲ್ಲಿ ದುರ್ಲ ರ್ಭವು; ಈ ಸ್ಥಿತಿಯಲ್ಲಿ ಅವನ ಮನಸಿನ ಮೇಲೆ ಇತರರ ಅಧಿಕಾರವೆಷ್ಟು ಮಾತ್ರ ವೂ ನಡೆಯುವ ಸಂಭವವಿರಲಿಲ್ಲ. ಪ್ರತಾಪಸಿಂಹನು ತನ್ನ ಪರ್ಣಕುಟೀರದಲ್ಲಿಯ ಹುಲ್ಲುಹಾಸಿಗೆಯ ಮೇಲೆ ಮಲಗಿ, ಮರಣದ ಮಾರ್ಗವನ್ನು ನೋಡಹತ್ತಿದನು. ಪ್ರತಾಪನಿಗೆ ಹದಿನೇಳು ಮಂದಿ ಗಂಡುಮಕ್ಕಳಿದ್ದರು. ಇವರಲ್ಲಿ ಅಮರ ಸಿಂಹನು ಎಲ್ಲಕ್ಕೂ ಹಿರಿಯನು. ಪ್ರತಾಪನು ಅಮರಸಿಂಹನನ್ನೇ ತನ್ನ ಉತ್ತರಾಧಿ ಕಾರಿಯೆಂದು ಆರಿಸಿದನು. ಯುವರಾಜನಾದ ಅಮರಸಿಂಹನು ಪೂರ್ವಜರ ಗೌರವ ರಕ್ಷಣೆಯನ್ನು ಮಾಡಲು ಸಮರ್ಧನಿರುವನೋ, ಇಲ್ಲವೋ ಎಂಬದನ್ನು ಪ್ರತಾಪನು ಸರ್ವಥಾ ಭಾವಿಸುತ್ತಿದ್ದನು. ಅಮರಸಿಂಹನು ತುಸು ಎತ್ತರನಾಗಿದ್ದನು. ಇವ ನೊಮ್ಮೆ ತಂದೆಯ ಮನೆಯಿಂದ ಅನ್ಯಮನಸ್ಕನಾಗಿ ಹೊರಗೆ ಹೋಗುತ್ತಿರುವ ಸಮಯದಲ್ಲಿ, ಒಂದು ಬಿದರು ಕೋಲು ತಾಕಿ, ಇವನ ಉಷ್ಟ್ರೀಯವು ಕೆಳಗೆ ಬಿದ್ದಿತು. ಸಂದೇಹಾಕುಲಿತನಾದ ಪ್ರತಾಪನು ಇದೊಂದು ಅಶುಭ ಚಿನ್ಮವೆಂದು ಭಾವಿಸಿ, ಅಸ್ಥಿರನಾದನು. ಇವನು ಭಾವಿಸಿದ್ದೇನಂದರೆ:- ( ಅಮರಸಿಂಹನು ಕಠೋರವ್ರತಗಳನ್ನಾಚರಿಸಲು ಸಮರ್ಥನಾಗುವದಿಲ್ಲ-ಆದುದರಿಂದ ಪೂರ್ವಜರ