ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವನ ಸಂಧ್ಯಾ ೧೬೭ ಗೌರವವನ್ನು ರಕ್ಷಿಸಲು ಸಮರ್ಥನಾಗುವದಿಲ್ಲ. ” ಈ ಚಿಂತೆಯು ಪ್ರತಾಪನನ್ನಾವ ರಿಸಿ, ಬಹಳ ದುಃಖವನ್ನುಂಟುಮಾಡಿತು. ಕ್ರಮವಾಗಿ ದಿವಸಗಳು ಕಳೆದುಹೋದವು, ಕಡೆಯಲ್ಲಿ ಪ್ರತಾಪನ ಅಂತಿ ಮಕಾಲವು ಸವಿಾಪಿಸಿತು. ಪ್ರತಾಪನು ಗುಡಿಸಲಿನೊಳಗಿನ ಕುದ್ರ ಹಾಸುಗೆಯಲ್ಲಿ ಮಲಗಿದ್ದಾನೆ; ನಾಲ್ಕೂ ಕಡೆಯಲ್ಲಿ ಮುಖ್ಯ ಮುಖ್ಯ ಸರದಾರರು ಕುಳಿತಿದ್ದಾರೆ; ಯಾರ ಮುಖದಲ್ಲಿಯೂ ಮಾತಿಲ್ಲ; ಎಲ್ಲರೂ ಮನೋವ್ಯಥೆಯಿಂದ ಕೂಡಿ, ಮಹಾ ವೀರನಾದ ರಾಣಾನ ಅಂತಿಮಕಾಲವನ್ನು ನಿರೀಕ್ಷಿಸಿಕೊಂಡಿದ್ದರು. ಈ ಸಮಯ ದಲ್ಲಿ ಪ್ರತಾಪನ ಮುಖದಿಂದ ದುಃಖಸೂಚಕ ಕಾತರಧ್ವನಿಯೊಂದು ಹೊರಟಿತು. ಚಂದಾಯತ್ ಸರದಾರನು ಮೃದುಸ್ವರದಿಂದ ಕೇಳಿದನು - ಮಹಾರಾಣಾನು ಸಮಾಧಾನದಿಂದ ಮರಣಹೊಂದಲಿಕ್ಕೆ ನಿಮ್ಮ ವನ್ನು ಂಟುಮಾಡಿದ ಸಂಗತಿಯು ಯಾವದು? ರಾಣಾನ ಮನಸ್ಸನ್ನಾವರಿಸಿದ ಅಂತಹ ದುಃಖವಾದರೂ ಯಾವದು? ?? ಮಹಾರಾಣಾನು ಉತ್ತರಕೊಟ್ಟನು ಯವನರಿಂದ ಮೇವಾಡವನ್ನು ರಕ್ಷಿಸಿ ಕೊಳ್ಳುವೆವೆಂದು ನೀವೆಲ್ಲರೂ ವಚನಕೊಟ್ಟದ್ದಾದರೆ, ಮಹಾರಾಣಾನು ಸಮಾ ಧಾನದಿಂದ ಮರಣವನ್ನೆದುವನು. ” ಮುಂದೆ ತುಸು ಹೊತ್ತಾದ ಮೇಲೆ, ಪ್ರತಾಪನು ಮೆಲ್ಲನೆ ಅಮರಸಿಂಹನ ವಿಷಯಕವಾದ ಮಾತನ್ನೆತ್ತಿದನು; ತನಗೊದಗಿದ ಸಂದೇಹವನ್ನು ಹೇಳಿದನು. ಮತ್ತೆ ಮುಂದೆ ಹೇಳತೊಡಗಿದನು- ಸಾಲುಂಬ್ರದ ಅರಸನೆ, ನನ್ನಿಂದ ಚಿತೋ ಡದ ರಕ್ಷಣೆಯಾಗಲಿಲ್ಲ; ನನ್ನ ಮಗನಿಂದಲೂ ಈ ಕಾರ್ಯವಾಗುವಂತಿಲ್ಲ. ಈ ರಾಜ್ಯದ ಸಂರಕ್ಷಣೆಯನ್ನು ಮಾಡಿಕೊಳ್ಳಬೇಕಾದಲ್ಲಿ, ಒದಗುತ್ತಿರುವ ದುಃಖಕಠೋರತೆಗಳನ್ನು ಅಮರಸಿಂಹನು ಸಹಿಸಿಕೊಳ್ಳಲಾರನು. ಈ ಸ್ಥಳದಲ್ಲಿ ಈ ಪರ್ಣಕುಟೀರಗಳ ಬದಲು, ಉತ್ತಮ ಅರಮನೆಗಳುಂಟಾಗುವವೆಂಬದನ್ನು ನಾನು ದಿವ್ಯ-ಚಕ್ಷುವಿನಿಂದ ನೋಡುತ್ತಿರುವೆನು. ಹೀಗಾದಲ್ಲಿ ರಜಪೂತರಲ್ಲಿ ಸುಖಲಾಲ ಸೆಯು ಬೆಳೆಯುವದು. ಇದರಿಂದುಂಟಾಗತಕ್ಕ ವಿಲಾಸವು ಈ ಸ್ಥಳದಲ್ಲಿ ತಲೆಯೆ ತ್ತುವದು; ಮತ್ತು ಈ ವಿಲಾಸದ ಅನುಷಂಗಿಕ ಸಂಗತಿಗಳು ರಜಪೂತರನ್ನಾವರಿ ಸುವವು, ಜನ್ಮಭೂಮಿಯ ರಕ್ಷಣೆಗಾಗಿ ನಾವೆಲ್ಲರೂ ನಮ್ಮ ರಕ್ತವನ್ನು ನೀರಿನಂತ ವೆಚ್ಚ ಮಾಡಿದ್ದೇವೆ. ಆದರೆ ವಿಲಾಸದಲ್ಲಿ ಮಗ್ನರಾಗುತ್ತಿರುವ ಮುಂದಿನ ರಾಣಾರು