ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೦ ಮಹಾರಾಣಾ ಪ್ರತಾಪಸಿಂಹ /vvvvvvvvvv レレレノレノレノッy ソレソレッvvvv ಪಂಚನದ ಪ್ರದೇಶವೂ ವೇದ-ನಾದದಿಂದ ಕೂಡಿದ ಸಮಯದಲ್ಲಿಯೂ, ಮುನಿ ಪ್ರತರಾದ ಆರ್ಯರಲ್ಲಿ ವೀರರ ಅಭಾವವಿರಲಿಲ್ಲ ವೇದಕಾಲದ ತರುವಾಯದ ಲ್ಲಿಯ ಸಂಸ್ಕೃತ ಸಾಹಿತ್ಯದ ಬಹುಭಾಗವು ಹಿಂದೂ ಜನರ ವೀರತ್ವಕ್ಕೆ ಸಂಬಂಧಿ ಸಿದ್ದು, ಮುಂದಿನ ಕಾಲದಲ್ಲಿ ಅಂದರೆ ಹಿಂದೂಜನರು ಧರ್ಮ, ದರ್ಶನ ಮೊದಲಾ ದವುಗಳ ವಿಷಯದ ವಿಚಾರಗಳಲ್ಲಿ ಪೂರ್ಣನಿರತರಾದ ಸಮಯದಲ್ಲಿಯೂ ನಮ್ಮ ಸಮಾಜದಲ್ಲಿ ವೀರರಿಗೆ ಕೊರತೆಯಿರಲಿಲ್ಲ, ಬೌದ್ಧ ಧರ್ಮದ ಬೆಳವಣಿಗೆಯ ವೇಳೆ ಯಲ್ಲಿಯೂ ವೀರಧರ್ಮವು ಚನ್ನಾಗಿ ಪಾಲಿಸಲ್ಪಡುತಲಿತ್ತು; ಆದರೆ ಈ ಪ್ರಾಚೀನ ಕಾಲದ ವೀರತ್ವ-ಖ್ಯಾತಿಯ ಗೌರವವನ್ನು ಬಿಟ್ಟರೂ ನಡೆಯಬಹುದು. ಆಧುನಿಕ ಐತಿಹಾಸಿಕಯುಗದಲ್ಲಿ-ಮುಸಲ್ಮಾನರ ಆಳಿಕೆಯ ಸಮಯ ದಲ್ಲಿ ಹಿಂದೂ ಧರ್ಮದಲ್ಲಿಯ ಮೂರು ಜಾತಿಯ ಜನರು ವೀರತ್ವಕ್ಕಾಗಿ ಪ್ರಖ್ಯಾತ ರಾಗಿದ್ದಾರೆ; ಇವರು ಯಾರೆಂದರೆ-ರಜಪೂತ, ಮಹಾರಾಷ್ಟ್ರ, ತೀಕ ಇವರೇ ಕ್ರಮವಾಗಿ ಹಿಂದುಸ್ತಾನದಲ್ಲೆಲ್ಲ ವ್ಯಾಪಿಸಿದ ಮುಸಲ್ಮಾನರ ಬಲವನ್ನು ನಾಶಮಾ ಡಿದರು. ಇದರಿಂದಲೇ ಮುಸಲ್ಮಾನರಿಂದ ಗೆಲ್ಲಲ್ಪಟ್ಟ ಭಾರತಭೂಮಿಯು ಕಡೆಯ ಲೊಂದು ವಿದೇಶೀಯ ಮಹಾಜನಾಂಗದವರಿಗೆ ಅನಾಯಾಸವಾಗಿ ದೊರೆಯು ವಂತಾಯಿತು. ಈ ಮೂರು ಜಾತಿಗಳಲ್ಲಿ ಬಹುಸಂಖ್ಯಾಕರಾದ ವೀರರುದಯಿಸಿ ದ್ದಾರೆ, ಇವರಲ್ಲಿ ಯಾವತ್ತು ಸಂಗತಿಗಳಿಂದ ಮೂವರು ಶ್ರೇಷ್ಠತಮರಾಗಿದ್ದಾರೆ, ಇವರು ಯಾರೆಂದರೆ-ಮಹಾರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ, ಶೀಕ ಗುರು ಗೋವಿಂದಸಿಂಹ. ಈ ಮೂವರು ಮಹಾಪುರುಷರ ಮಹಾಮಂತ್ರದಿಂದ ದೀಕ್ಷಿತರಾಗಿ, ಮೂರು ಜಾತಿಯ ಜನರು ವೀರತ್ವದ ವಿಷಯವಾಗಿಯೂ, ಮಹ ತ್ವದ ವಿಷಯವಾಗಿಯೂ ವಿಶ್ವವಿಶ್ರತರಾದರು.

  • ಈ ಮೂವರು ಮಹಾತ್ಮರಲ್ಲಿ ಪ್ರತಾಪಸಿಂಹನು ಶ್ರೇಷ್ಠತಮನೆಂದು ಹೇಳ ಲಿಕ್ಕೆ ಬರುವಂತಿದೆ. ಶಾಂತವಾದ ಜಲಪ್ರವಾಹದಲ್ಲಿ ನಾವಿಕನ ನೌವಿದ್ಯೆಯನ್ನು ಗೊತ್ತು ಹಿಡಿಯಲಾಗುವದಿಲ್ಲ; ಅದರಂತೆ ಪ್ರಬಲವಾದ ಶತ್ರುಗಳೊಡನೆ ಯುದ್ಧ ಮಾಡದಿರುವಲ್ಲಿ, ಜನರ ವೀರ್ಯ ಪ್ರತಿಭೆಯನ್ನು ಕಾಣಲಿಕ್ಕೆ ಬರುವಂತಿಲ್ಲ. ಕೆಲ ವೆಡೆಯಲ್ಲಿ ಎದುರಾಳಿಯ ಬಲಪರೀಕ್ಷೆಯಿಂದ ಮತ್ತೊರ್ವನ ಶಕ್ತಿಯನ್ನು ಗೊತ್ತು ಪಡಿಸುವದುಂಟು. ಮುಸಲ್ಮಾನ ಸಾಮ್ರಾಟರಲ್ಲಿ ಸರ್ವಶ್ರೇಷ್ಠನೂ, ತನ್ನ ರಾಜನೀತಿಯ ಮೋಹಿನೀ ಶಕ್ತಿಯಿಂದ ಹಿಂದೂ-ಮುಸನ್ಮಾನರೆಲ್ಲರನ್ನು ಒಲಿಸಿ