ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪಸಂಹಾರ MM • • * • • • • • • ೧೭೧ ••••••• • • • • ಕೊಂಡವನೂ ಆದ ವಿಶ್ವವಿಖ್ಯಾತ ಅಕಬರ ಬಾದಶಹನು ಪ್ರತಾಪನ ಎದುರಾ ಳಿಯು, ಶಿವಾಜಿಯ ಪರಮ ಶತ್ರುವಾದ ಔರಂಗಜೇಬನು ಕುಟಿಲನೀತಿಯಿಂದಲೂ ಪರಧರ್ಮಪೀಡೆಯಿಂದಲೂ, ಬಹು ಜನರಿಗೆ ಬೇಡಾಗಿದ್ದನು; ಇದರಿಂದ ಇವನ ಎಷ್ಟೋ ಬಲವು ಕಡಿಮೆಯಾಗಿದ್ದಿತು. ಗೋವಿಂದಸಿಂಹನು ಪ್ರಬಲನಾದ ವೇಳೆ ಯಲ್ಲಿ ಮೊಗಲರ ವೀರ್ಯ-ವಸ್ಥೆಯು ನಿರ್ವಾಣೋನ್ಮುಖವಾಗಿದ್ದಿತು. ಪ್ರತಾಪನು ಮೊಗಲ-ಗೌರವದ ಮಧ್ಯಾನ್ಹ ಕಾಲದಲ್ಲಿ ತನ್ನ ಸ್ವಲ್ಪ ಜನ ಸಹಚರರೊಡನೆ ಬಹು ವರ್ಷಗಳ ವರಗೆ ಪ್ರಬಲಶತ್ರುವಿನೊಡನೆ ಯುದ್ಧ ಮಾಡಿ, ವೀರತ್ವದ ಪರಸೀಮೆ ಯನ್ನು ತೋರ್ಪಡಿಸಿದ್ದಾನೆ. ಪ್ರತಾಪನು ಈ ಮೂವರಲ್ಲಿ ಸರ್ವಶ್ರೇಷ್ಠನು. ಯಾಕಂದರೆ ಇವನ ಶತ್ರುವಿನ ಬಲವೂ, ಸಿದ್ದತೆಯೂ, ಅನುಕೂಲತೆಯೂ ಹೆಚ್ಚಾಗಿದ್ದಿತು, ಕಾರಣ ಪ್ರತಾಪನು ವೀರಕುಲಚೂಡಾಮಣಿಯು. - ಪ್ರತಾಪನ ಈ ನೀರತ್ವದಲ್ಲಿ ನೀಚತೆಯು ತೀರಮಾತ್ರವೂ ಇಲ್ಲ, ಪ್ರತಾ ಪನ ಇತಿಹಾಸದಲ್ಲಿ ದುರ್ಬಲ ಶತ್ರುಗಳೊಡನೆ ಕೆಟ್ಟ ವ್ಯವಹಾರ ನಡೆಸಿದ ಸಂಗ. ತಿಯಿಲ್ಲ, ಶತ್ರುನಾಶಕ್ಕಾಗಿ ಕಪಟತ್ವದ ಅಧವಾ ವಿಶ್ವಾಸಘಾತಕದ ಉದಾಹರಣೆ ಗಳಿಲ್ಲ; ಸತ್ಯಭಂಗಮಾಡಿದ ಒಂದೂ ಪ್ರಸಂಗವಿಲ್ಲ. ಪ್ರತಾಪನ ಕರೋರವಾದ ಆಳಿಕೆಯಿಂದ ರಾಜಸ್ತಾನವು ಸ್ಮಶಾನವಾಗಿ ಪರಿಣಮಿಸಿತ್ತು. ಆದರೆ ಈ ಸ್ಮಶಾನ ದಲ್ಲಿ ಅಸದೃಶ್ಯವಿಲ್ಲ; ಅಪವಿತ್ರತೆಯಿಲ್ಲ; ದುರ್ಗಂಧವಿಲ್ಲ ಪ್ರತಾಪನು ತನ್ನ ಜೀವನದಲ್ಲಿ ನೀತಿಯ ಮತ್ತು ಧರ್ಮದ ಅಪಮಾನವನ್ನೆಂದೂ ಮಾಡಿಲ್ಲ. ಅದು ದರಿಂದ ಪ್ರತಾಪನ ಚರಿತೆಯು ನಿರ್ಮಲವೂ, ಶುದ್ಧವೂ ಆಗಿದೆ. ಈ ಪವಿತ್ರ ಚರಿ ತ್ರೆಯ ಪ್ರದೀಪ್ತ ಪ್ರಕಾಶವು ರಜಪೂತಸ್ತಾನದ ಎಲ್ಲೆಡೆಯಲ್ಲಿ ಬೆಳಗುತಲಿದ್ದಿತು. ಪ್ರತಾಪನಲ್ಲಿರುವ ವೀರತ್ವಕ್ಕಿಂತಲೂ, ಉಳಿದ ಉತ್ತಮ ಗುಣಗಳು ಹೆಚ್ಚು ಮಹತ್ವವಾದವುಗಳಾಗಿವೆ. ಇವನ ಜೀವನವು ಕೇವಲ ಯುದ್ಧ ಮಾಡುವದರಲ್ಲಿ ಯೇ ಕಳೆದುಹೋಗಿದ್ದರೂ, ಇವನು ಸಾಧಾರಣ ಯೋಧ್ಯಗಳಂತೆ ಪರರಾಜ್ಯ ಗಳಿಸುವ ಆಶೆಯುಳ್ಳವನಾಗಿರಲಿಲ್ಲ, ಎರಡನೆಯವರ ಧನವನ್ನಪಹರಿಸುವ ಇಚ್ಛೆ ಯಿರಲಿಲ್ಲ; ಅನ್ಯಾಯದ ಅಧವಾ ಅನರ್ಧಕರವಾದ ಕೊಲೆಯನ್ನು ಮಾಡಿ, ಇವನು ತನ್ನ ಆಯುಧವನ್ನು ಕಲಂಕಿತವನ್ನಾಗಿ ಮಾಡಿಕೊಂಡಿಲ್ಲ. ಸ್ವರಾಜ್ಯದ ಉದ್ದಾರವೇ ಇವನ ಉದ್ದೇಶವಾಗಿದ್ದಿತು, ಅದರಿಂದ ಎರಡನೆಯವರ ರಾಜ್ಯವನ್ನು ಕಸಿದುಕೊಳ್ಳುವ ಇಚ್ಛೆಯು ಇವನಲ್ಲಿ ಉಂಟಾಗಲಿಲ್ಲ. ಕರ್ಮವೀರ ಪ್ರತಾಪನು