ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨ ಮಹಾರಾಣಾ ಪ್ರತಾಪಸಿಂಹ, ಮಾನವಚರಿತೆಯ ಉಚ್ಚತಮ ಶಿಖರದಲ್ಲಿ ಕುಳಿತಿದ್ದಾನೆ. ಇವನ ದೇವಮೂತಿ ಯಂತೆ, ಇವನ ಚರಿತ್ರೆಯೂ ದೇವತ್ವಪೂರ್ಣವಾಗಿದೆ; ಆದುದರಿಂದ ಈ ಮೂರ್ತಿ ಯೂ, ಚರಿತೆಯೂ ಹಿಂದುಸ್ತಾನದ ಪ್ರತಿಮನೆಗಳಲ್ಲಿ ಪೂಜೆಯನ್ನು ಹೊಂದಲು ಯೋಗ್ಯವಾಗಿವೆ. ಯಾವದೊಂದು ಕಾರ್ಯವನ್ನು ಕೈಕೊಳ್ಳಬೇಕಾದಲ್ಲಿ ಅದರ ವಿಷಯವಾಗಿ ಸಂಪೂರ್ಣ ವಿಚಾರಮಾಡಿ, ನಿರ್ಧರಿಸಿಕೊಳ್ಳುವದು ಮಹಾತ್ಮರ ಲಕ್ಷಣವಾಗಿದೆ. ಇವರು ಒಮ್ಮೆ ಸ್ಥಿರಮಾಡಿಕೊಂಡರೆಂದರೆ, ಆ ಕೆಲಸವನ್ನು ಕಡೆಹಾಯಿಸದೆ ಎಂದೂ ಬಿಡುವದಿಲ್ಲ; ಯಾಕಂದರೆ ಜಗತ್ತಿನಲ್ಲಿರುವ ಯಾವತರದ ವಿಘ್ನಗಳೂ ಇವರನ್ನು ಕರ್ತವ್ಯಪಂಧದಿಂದ ದೂರ ಸರಿಸಲು ಸಮರ್ಥವಾಗಲಾರವು. ಮಹಾವೀರ ನೆಪೋಲಿಯನನು ಇತಾಲಿಯನ್ನು ಜಯಸಿಕೊಳ್ಳಬೇಕೆಂದು ನಿರ್ಧರಿಸಿ ಕೊಂಡಿದ್ದನು, ಆದರೆ ಇವನ ವಿಜಯಯಾತ್ರೆಗೆ ಅಲ್ಪ ಪರ್ವತವು ವಿಘ್ನವಾಗಿ ದ್ದಿತು; ಆಗ ಅವನು ಹೇಳಿದ್ದೇನಂದರೆ- ಅಲ್ಪ ಪರ್ವತವನ್ನು ಹಾರಿಸಿಬಿಡಿರಿ. ” ಇದರಿಂದ ನೋಡಲು ಆಕಾಶವನ್ನು ಮುಟ್ಟುವ ಅಲ್ಪಪರ್ವತವು ಇವನ ಮಾರ್ಗ ವನ್ನು ಕಟ್ಟು ಮಾಡಲು ಸಮರ್ಥವಾಗಲಿಲ್ಲ; ಯಾಕಂದರೆ ಇವನು ದೃಢವ್ರತನೂ, ಅದ್ಭುತಕಾರ್ಯನೂ ಆಗಿದ್ದನು. ಇದರಂತೆಯೇ ಮಹಾವೀರ ಪ್ರತಾಪನು, ದೇಶದ ಶತ್ರುಗಳಾದ ಯವನರಿಗೆ ಸ್ವದೇಶವನ್ನು ಮಾರಲಿಕ್ಕಿಲ್ಲೆಂದು ಸ್ಥಿರಪಡಿಸಿ ಕೊಂಡಬಳಿಕ, ಮಹಾ ಪರಾಕ್ರಮಿಯೂ, ಪ್ರಜಾಪ್ರಿಯನೂ ಆದ ಅಕಬರನ ಸೈನ್ಯಬಲವೂ, ಧನಬಲವೂ, ಆಲೋಚನೆಯ ಬಲವೂ ಅತೀವ ಕ್ಷುದ್ರವಾದವುಗ ಳೆಂದೆಣಿಸಿದನು; ಮತ್ತು ಇವೆಲ್ಲಕ್ಕೂ ಎದುರಾಗಿ ನಿಂತು, ಸಹಜವಾಗಿ ನಾಶ ಮಾಡಿಬಿಡುವೆನೆಂದು ಗೊತ್ತು ಮಾಡಿಕೊಂಡನು. ನೂರಾರು ಸ್ವಜಾತಿಯ ವೀರರು ಶತ್ರುಪಕ್ಷವನ್ನವಲಂಬಿಸಿದರು; ಪ್ರತಾಪನು ಇದಕ್ಕೆ ಹೆದರಲಿಲ್ಲ. ಅಸಂಖ್ಯ ಮೊಗಲ ಸೇನೆಯು ಅರವಲಿಯ ಮಾರ್ಗದಲ್ಲಿ ಬಂದು ಕೂಡಹತ್ತಿತು; ಪ್ರತಾಪನು ಇದ ಕ್ಕೂ ಅಂಜಲಿಲ್ಲ. ಇಷ್ಟೆಲ್ಲ ತೊಂದರೆಗಳುಂಟಾದರೂ ಪ್ರತಾಪನು ಸ್ಥಿರನಾಗಿ ದ್ದನು. ಆತ್ಮವಿಕ್ರಯವನ್ನಾಗಲಿ, ಸ್ವದೇಶದ ಸ್ವಾತಂತ್ರ್ಯವಿಕ್ರಯವನ್ನಾಗಲಿ ಮಾಡ ಲಿಕ್ಕಿಲ್ಲೆಂದು ಮಾಡಿದ ಅವನ ಪ್ರತಿಜ್ಞೆಯು ಎಂದೂ ಚಲಿಸಲಿಲ್ಲ. ಕೇವಲ ಮೊಗಲರ ಶ್ರೇಷ್ಠತ್ವವನ್ನೊಪ್ಪಿಕೊಂಡರೆ ಸಾಕು; ಪ್ರತಾಪನಿಗೆ ಸ್ವದೇಶವು ತಿರುಗಿ ಸಿಗುತ್ತಿದ್ದಿತು; ಪೂರ್ವಜರ ರಾಜಧಾನಿಯಾದ ಚಿತೋಡವನ್ನು ಪ್ರವೇಶಿಸಿ, ಸಂಭ್ರ