ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜೀವನ ಸಂಧ್ಯಾ ೧೭೫ ಇಂದು ಉದಯಪುರದ ರಾಜವಂಶವು ಭಾರತೀಯ ಕ್ಷತ್ರಿಯರಲ್ಲಿ ಶ್ರೇಷ್ಟತೆ ಯನ್ನು ಪಡೆಯುವದಕ್ಕೂ, ಹಿಂದೂ-ನೃಪತಿಗಳಲ್ಲಿ ಉದಯಪುರದ ಮಹಾ ರಾಣಾನು ಅಗ್ರಗಣ್ಯನಾಗುವದಕ್ಕೂ, ಪೂರ್ವಜರ ವಂಶಮರ್ಯಾದೆಯೂ ವೀರತ್ವ-ಪ್ರತಿಭೆಯೂ ಮುಖ್ಯ ಕಾರಣಗಳಾಗಿವೆ,* ಮತ್ತು ಈ ಪೂರ್ವಪುರುಷ ರಲ್ಲಿ ಪ್ರತಾಪನು ಶ್ರೇಷ್ಠತಮನು. ಈ ಪ್ರತಾಪನೊಡನೆ ಸಮರ, ಸಂಗ್ರಾಮಸಿಂಹ, ಹಂಬೀರ, ಕುಂಭ, ರಾಜಸಿಂಹ ಮೊದಲಾದ ವೀರನೃಪತಿಗಳು ಉದಯಪುರದ ವಂಶಾವಳಿಯನ್ನು ಸಮುಜ್ವಲವಾಗಿ ಮಾಡಿದ್ದಾರೆಂಬದನ್ನು ಇಲ್ಲಿ ಬೇರೆ ಹೇಳುವ ಕಾರಣವಿಲ್ಲ. ಕೇವಲ ಮೇವಾಡವೊಂದೇಯೇಕೆ? ಸಮಗ್ರ ಭಾರತೀಯರು ಇವರ ಗೌರವದಿಂದ ಗೌರವಾನ್ವಿತರಾಗುತ್ತಿದ್ದಾರೆ. ಯಾವದೇ ಯುಗದೊಳಗಾ ಗಲಿ, ಯಾವ ದೇಶದವರೇ ಆಗಲಿ, ಯಾವ ಜಾತಿಯವರೇ ಆಗಲಿ, ತಮ್ಮಲ್ಲಿ ಈ ತರದ ಜನರ ಜನ್ಮಗ್ರಹಣದಿಂದ ಸ್ವ-ಗೌರವದ ವಿಷಯದಲ್ಲಿ ಅಭಿಮಾನವನ್ನು ಹೊಂದುತ್ತಿದ್ದಾರೆ.

  1. ಒಬ್ಬ ಇಂಗ್ಲೀಷ ಲೇಖಕನು ಉದಯಪುರದ ದರ್ಶನ ಕಾಲದಲ್ಲಿ ಬರೆದಿದ್ದಾನೆ -

• Udaipur stands alone aud unrivalled in India by virtue of India's most characteristic and troubound law. Were free election to be made tomoi row among the native competitors for the Kingship of India, no one would dare to stawd against the Maharana of Udaipur.” Perceval Landon's " under the sun PP. 27-28 ಹಿಂದುಸ್ತಾನದ ಈಗಿನ ಸರ್ವಾಧಿಪತಿಗಳಾದ ಲಾರ್ಡ ಚೇಷ್ಟಫರ್ಡರವರು ಉದಯಪು ರದ ದರ್ಶನ ಕಾಲದಲ್ಲಿ ಹೇಳಿದ್ದಾರೆ. Ever since Iny arrival in India, it has been ny eager desire to visit Udaipur the Rome of the premier chief of Rajputana, the land of beautiful lakes and places, the scene of so many glorious days of chivalry in the past, the birth place of many heroes-khonnan: Hamir, chonda, khumbo, Partap Rajsingh, to mentais only a few. These are names of which any nation and any age might be proud.” Lord Chelmsford's Banquet speech at Udaipur on the 14 th November 19I6