ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕೃತಜ್ಞತಾ-ದರ್ಶನ. =Kಡಿ ಈ ಮೊದಲೇ ತಿಳುಹಿಸಿದಂತೆ, ಭಾರತಬಂಧು ಗ್ರಂಥಮಾಲೆಯ ಪ್ರಧನ ಪುಷ್ಟವಾದ “ ಮಹಾರಾಣಾ ಪ್ರತಾಪಸಿಂಹ ” ಎಂಬ ಗ್ರಂಧವು ಸಂಪೂರ್ಣ ತಯಾರಾಗಿ, ವಾಚಕರ ಕೈಸೇರುತ್ತಿರುವದನ್ನು ನೋಡಿ, ನಮಗೆ ಸಂತೋಷ ವಾಗುತ್ತದೆ. ಈ ಕಾಲದಲ್ಲಿ ಗ್ರಂಥಮಾಲೆಯ ಪ್ರಕಟನೆಯ ಕಾರ್ಯವು ಬಹಳ ಜಡವಾದದ್ದೆಂಬದನ್ನು ಸೂಜ್ಞರಿಗೆ ಸೂಚಿಸಲವಶ್ಯವಿಲ್ಲ. ಅದರಿಂದ ಈ ಕೆಲಸದಲ್ಲಿ ನಮಗೂ ಅನೇಕ ತೊಂದರೆಗಳು ಬಂದವು. ಆದರೂ ದೇವರ ದಯೆಯಿಂದಲೂ, ಉದಾರಹೃದಯರಾದ ಎಚ್. ವಿ. ಸವಣೂರ ಎಲ್. ಮ್, ಎಂಡ ಎಸ್. ಇವರ ಸಂಪೂರ್ಣವಾದ ಸಹಾನುಭೂತಿಯಿಂದಲೂ ನಾವು ಕೃತಕಾರ್ಯರಾದವೆಂದು ಇಲ್ಲಿ ಹೇಳದಿರಲಾರೆವು. ಮುದ್ರಣಕೆಲಸವನ್ನು ಅಂದವಾಗಿಯೂ, ಇತರ ಕೆಲಸಗಳನ್ನು ಬದಿಗೊತ್ತಿ ಆದಷ್ಟು ತೀವ್ರವಾಗಿಯೂ ಮಾಡಿಕೊಟ್ಟ ಬಗ್ಗೆ ಮಹಾವೀರ ಪ್ರೆಸ್ಸಿನ ಚಾಲಕ ರಾದ ಶ್ರೀ ದೇವೆಂದ್ರ ಫಡೆಪ್ಪಾ ಚೌಗುಲೆ ಇವರ ಉಪಕಾರವನ್ನು ಈ ಪ್ರಸಂಗ ದಲ್ಲಿ ಸ್ಮರಿಸದಿರಲಾರೆವು; ಮತ್ತು ಅನೇಕ ಭಾಷಾಬಂಧುಗಳು ನಮಗೆ ಆಶ್ರಯ ವಿತ್ತು, ಸಹಾಯಮಾಡಿದ ಬಗ್ಗೆ ಅವರಿಗೆ ನಾವು ತುಂಬಾ ಕೃತಜ್ಞರಾಗಿದ್ದೇವೆ