ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪುತ ಸ್ನಾನ Mw vvvv v

\ \ n \ + + V V /\ \ \ vN ಪರ್ವತವನ್ನು ದಾಟಿ ಹೋಗುವದಿಲ್ಲ; ಕಾರಣ ಪೂರ್ವಭಾಗದಲ್ಲಿ ಸಾಕಷ್ಟು ಮಳೆಯಾಗುವದು. ಅದರಿಂದ ಈ ಭಾಗದಲ್ಲಿ ಎತ್ತರವಾದ ಮತ್ತು ವಿಸ್ತಾರವಾದ ಗಿಡಗಳಿರುವವ. ಈ ದಿಕ್ಕಿನಲ್ಲಿ ಪರ್ವತವು ಸವೆಯುತ್ತ ನಡೆದು, ಕ್ರಮವಾಗಿ ಭೂಮಿಯು ತಗ್ಗಾಗುತ್ತ ಹೋಗಿದೆ. ಅದರಿಂದ ಅದು ಮನುಷ್ಯರ ವಾಸಸ್ಥಳಕ್ಕೆ ಯೋಗ್ಯವಾಗಿದೆ. ಪರ್ವತದ ಕೆಳಭಾಗದಲ್ಲಿ ಗಿರಿನದಿಗಳ ದಂಡೆಗಳಲ್ಲಿ ಬೆಳೆಯು ಚನ್ನಾಗಿ ಬರುವದು. ಅರವಲಿಯ ಎರಡನೆಯ ಭಾಗದಲ್ಲಿ ( ಪಶ್ಚಿಮಭಾಗದಲ್ಲಿ ) ಮಳೆಯು ಬಹಳ ಕಡಿಮೆ, ಅದರಿಂದ ಪರ್ವತಾವಳಿಯಿಂದ ಸಿಂಧುನದದ ವರೆಗಿನ ವಿಸ್ತಾರವಾದ ಪ್ರದೇಶವು ಮರುಭೂಮಿಯಾಗಿದೆ ಈ ಭಾಗದಲ್ಲಿ ಪರ್ವತವು ಬಹಳ ವಿಸ್ತಾರವಾಗಿದ್ದು, ಪಶ್ಚಿಮ ದಿಕ್ಕಿನಿಂದ ಅದನ್ನು ಸಹಜವಾಗಿ ಏರಿಹೋಗ ಲಿಕ್ಕೆ ಬರುವಂತಿಲ್ಲ. ಕೇವಲ ಸಿಂಧುನದವೇ ಪಶ್ಚಿಮದಿಕ್ಕಿನಿಂದ ಬರುವ ವಿದೇ ಶೀಯ ದಾಳಿಗಾರರನ್ನು ತಡೆದಿರುವದೆಂಬಂತಿಲ್ಲ, ರಾಜಸ್ತಾನದ ಮರುಪ್ರಾಂತವು ಪಶ್ಚಿಮದಿಕ್ಕಿನಿಂದ ಬರತಕ್ಕ ದಾಳಿಗಾರರ ಹಾವಳಿಯನ್ನು ಪ್ರತಿಬಂಧಿಸಿದೆ ಪೂರ್ವ ಭಾಗದಲ್ಲಿ ಬನಾಸವು ಮುಖ್ಯ ನದಿಯು ಇದು ಅರವಲೀ ಪರ್ವತದಲ್ಲಿ ಹುಟ್ಟಿ, ಆಗ್ನೆಯ ದಿಕ್ಕಿಗೆ ಹರಿದು, ಚಂಬಳನದಿಗೆ ಕೂಡುತ್ತದೆ ಚಂಬಳನದಿಯು ಯಮು ನಾನದಿಗೆ ಕೂಡುತ್ತದೆ ಅದರಿಂದ ಗಂಗಾನದಿಯ ಪ್ರವಾಹವು ಅರವಲೀ ಪರ್ವ ತದ ವರೆಗೆ ಬಂದಿದೆಯೆಂದು ಹೇಳಬಹುದು, ಕಾರಣ ರಾಜಸ್ತಾನದ ಪೂರ್ವ ಭಾಗವು ಅನುಗಂಗಾಪ್ರದೇಶದಲ್ಲಿದೆಯೆಂದು ಹೇಳಲಿಕ್ಕೆ ಬರುವಂತಿದೆ ಪಶ್ಚಿಮ ಭಾಗದಲ್ಲಿ ಧರವೆಂಬ ಮರುಭೂಮಿಯದೆ ಇಲ್ಲಿ ಕೇವಲ ಉಸುಕಿನ ರಾಶಿಯು ತುಂಬಿರುವದು. ಇದರಲ್ಲಿ ಸಂಬರವೆಂಬ ಉಪ್ಪುನೀರಿನ ಸರೋವರವಿದೆ. ಲೂನಿ ಯೆಂಬ ನದಿಯು ಉಪ್ಪುನೀರನ್ನು ತೆಗೆದುಕೊಂಡು ಸಮುದ್ರಕ್ಕೆ ಕೂಡುವದು ಪೂರ್ವಭಾಗದಲ್ಲಿ ಸೃಷ್ಟಿ ದೇವಿಯ ವಿಚಿತ್ರ ಸೌಂದರ್ಯವನ್ನು ನೋಡ ಬಹುದು. ಎತ್ತ ನೋಡಿದತ್ತ ಎತ್ತರವಾದ ಪರ್ವತದ ಸಾಲುಗಳೂ, ಅವುಗಳ ಕೆಳ ಭಾಗದಲ್ಲಿ ಕಂದರಗಳೂ, ಅಲ್ಲಲ್ಲಿ ಸಂಕೀರ್ಣವಾದ ಪರ್ವತದ ದಾರಿಗಳೂ ಅವೆ. ಪರ್ವತದ ಇಳಿಜಾರಾದ ಭೂಮಿಯಲ್ಲಿ ಎಷ್ಟೋ ನದಿಗಳು, ಅಂಕಡೊಂಕಾಗಿ ತೀರ ವೇಗದಿಂದ ಹರಿಯುತ್ತಿರುವವು. ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ಅವುಗಳ ಗತಿಗಳು, ನೋಡುವವರಿಗೆ ನೂತನ ದೃಶ್ಯವನ್ನು ಂಟುಮಾಡುತ್ತಿರುವವು. ಈ ಪ್ರದೇ ಶ್ರದಲ್ಲಿ ಮನುಷ್ಯನು ಯಾವ ದಿಕ್ಕಿನಿಂದ ನೋಡಿದರೂ, ಪರ್ವತಮಾಲೆಯು ಕಂಡು