ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾರಾಣಾ ಪ್ರತಾಪ ಸಿಂಹ , , , , , , , , , , , , , , , , , , , 7 |

  1. ni hhhhhh s hAhhhhh

ಬರುವದು, ಅದರ ಬೇರೆ ಬೇರೆ ಸಾಲುಗಳು ದೂರದಲ್ಲಿ ಆಕಾಶದಲ್ಲಿ ಕೂಡಿ ಹೋದಂತೆ ಕಾಣುವವು. ಯಾವನಾದರೂ ಅಪರಿಚಿತ ದಾರಿಕಾರನು ಹಾದಿಯನ್ನು ತಪ್ಪಿದರೆ ತಾನೆಲ್ಲಿರುವೆನೆಂಬದನ್ನು ಸಹ ಗೊತ್ತು ಹಿಡಿಯಲಾರನು. ಬಹುಕಾಲ ಇಲ್ಲಿ ಯೇ ವಾಸಮಾಡಿ, ಮಾರ್ಗಗಳ ಪರಿಚಯವನ್ನುಂಟುಮಾಡಿಕೊಂಡ ಜನರು ಮಾತ್ರ ಇಲ್ಲಿ ಪ್ರವಾಸಮಾಡಬಹುದಾಗಿದೆ. ಶತ್ರುಗಳು ಈ ಪರ್ವತಪ್ರದೇಶವನ್ನು ಸಹಜವಾಗಿ ಜಯಿಸಿಕೊಳ್ಳಲಾರರು. ತನ್ನ ರಂಗಭೂಮಿಯಲ್ಲಿ ವಾಸಮಾಡುವ ಮನುಷ್ಯರು ಸ್ವಾತಂತ್ರ್ಯಪ್ರಿಯರೂ ಅದಕ್ಕಾಗಿ ಪ್ರಾಣಬಿಡುವದಕ್ಕೆ ಲೇಶಮಾತ್ರ ವು ಹಿಂದೆಗೆಯದವರೂ ಆಗುವಂತೆ ಮಾಡುವ ಮೋಹಿನೀಶಕ್ತಿಯು ಈ ಪರ್ವತ ದಲ್ಲಿದೆ. ಇಲ್ಲಿ ವಾಸಮಾಡುವ ಜನರು ತಮ್ಮ ಸ್ವಾತಂತ್ರ್ಯದ ರಕ್ಷಣೆಗಾಗಿ ಬೇಕಾ ಗುವ ಶರೀರಬಲ, ಮಾನಸಿಕಶಕ್ತಿ, ಕಷ್ಟ ಸಹಿಷ್ಟತೆ ಮೊದಲಾದವುಗಳನ್ನು ಸ್ವಾಭಾ ವಿಕವಾಗಿ ಹೊಂದಿರುತ್ತಾರೆ. ಕುದುರೆಯು ಈ ದೇಶದ ಏಕ ಮಾತ್ರ ವಾಹನದ ಸಾಧನವು. ಅಶ್ವಾರೋಹಿಗಳಾದ ರಜಪೂತರು ವೀರತ್ವದಲ್ಲಿ ಅದ್ವಿತೀಯರು; ಮತ್ತು ಸ್ವದೇಶದ ಗೌರವಸ್ವರೂಪರು. ಆದರೆ ಪಶ್ಚಿಮಭಾಗದಲ್ಲಿ ಕೇವಲ ಮರುಭೂಮಿ. ಬಹು ದೂರದ ವರೆಗೆ ಹಬ್ಬಿದ ಉಸಬಿನ ರಾಶಿಯು ಪ್ರಖರವಾದ ರವಿಯ ಕಿರಣಗಳಿಂದ ಬೆಂಕಿಯಂತೆ ಸುಡುತ್ತಿರುವದು. ಸರಿಯಾದ ದಾರಿಗಳಿಲ್ಲ, ಹಾದಿಕಾರರಿಗೆ ವಿಶ್ರಾಂತಿಯ ಸ್ಥಳ ಗಳಿಲ್ಲ; ಮೇಲಾಗಿ ಈ ಮಾರ್ಗಗಳಲ್ಲಿ ಕಳ್ಳರ ಭಯವೂ ಬಹಳ. ಸಣ್ಣ ಸಣ್ಣ ಮುಳ್ಳು ಕಂಟಿಗಳ ಮಧ್ಯದಲ್ಲಿ ಹಾದುಹೋಗುತ್ತಿರುವಾಗ, ಉಸುಬಿನ ಮೈದಾನ ಗಳು ಸಮಾಂತರದಿಂದ ಸಾಲಾಗಿ ನಿಂತಿರುವಂತೆ ಕಂಡುಬರುವವು. ಅದರಿಂದ ಕಳ್ಳರು ಎಲ್ಲಿ ಅಡಗಿರುವರೆಂಬದನ್ನು ತಿಳಿಯಲಿಕ್ಕೆ ಬರುವಂತಿಲ್ಲ. ಈ ಉಸಬಿನ ಮೈದಾನಗಳು ೫೦ ರಿಂದ ೧೦೦ ಶೂಟಿನ ವರೆಗೆ ಎತ್ತರವಿದ್ದು, ಕೆಲಕೆಲವು ಕಡೆ ಯಲ್ಲಿ ಎರಡು ಮೈಲುಗಳ ವರೆಗೆ ಉದ್ದವಾಗಿರುವವು. ಮರುಭೂಮಿಯ ಮೇಲಿರುವ ಈ ಉಸಬಿನ ಮೈದಾನಗಳು, ದೂರದಿಂದ ನೋಡುವವರಿಗೆ, ವಿಸ್ತೀರ್ಣವಾದ ಸಾಗರದಲ್ಲಿಯ ಅನುಚ್ಚ ತರಂಗಭಂಗದಂತೆ ಕಾಣುತ್ತಿರುವವು. ಇಡೀ ರಜಪೂತ ಸ್ಥಾನದಲ್ಲಿ ಭಾರವನ್ನು ಹೊತ್ತು ಕೊಂಡು ಹೋಗುವ ಕೆಲಸವನ್ನು ಮಾಡುವ ಪ್ರಾಣಿಯೆಂದರೆ ಒಂಟೆಯು,