ಪುಟ:ಮಹಾರಾಣಾ ಪ್ರತಾಪ ಸಿಂಹ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಪೂತಸ್ಥಾನ MMMMMMMMMMMMMMMMMMMMMMMMMM. ಮಧ್ಯಭಾಗದಲ್ಲಿರುವ ಅರವಲೀ ಪರ್ವತಾವಳಿಯು, ಕೇವಲ ಮಳೆಯ ಗಾಳಿ ( ವನ್ನೂನ)ಗಳನ್ನು ತಡೆದು ಮಳೆಸುರಿಸಿ ಉಪಕಾರ ಮಾಡುತ್ತದೆಂಬದಿಷ್ಟೆ ಅಲ್ಲ; ಪಶ್ಚಿಮದಿಕ್ಕಿನಿಂದ ಬರುವ ವಾಯುತಾಡಿತ ಉಸಬಿನ ರಾಶಿಯನ್ನು ಮೇವಾಡ ಮೊದಲಾದ ರಾಜ್ಯಗಳಲ್ಲಿ ಬರುಗೊಡುವದಿಲ್ಲ. ಅರವಲಿಯು ರಜಪೂತಸ್ತಾನದ ಉತ್ತರ ಪೂರ್ವ ಮೇರೆಯಲ್ಲಿರುವ ಜಯಪೂರ ರಾಜ್ಯದೊಳಗಿನ ಕ್ಷೇತ್ರಿ ಎಂಬ ಸ್ಥಳದಿಂದ ಪ್ರಾರಂಭವಾಗಿದೆ. ಮೊದಲು ಭಿನ್ನ-ಭಿನ್ನ ವಾದ ಪರ್ವತದ ಸಾಲು ಗಳು, ಕ್ರಮವಾಗಿ ಎತ್ತರವಾಗುತ್ತ ಹೋಗಿ, ಅಜಮಿರದ ಹತ್ತರ ಬಹು ಎತ್ತರ ವಾಗಿವೆ. ಅಜಮೀರವು ಹಿಂದುಸ್ತಾನದಲ್ಲಿ ಉನ್ನತವಾದ ಸುಂದರ ಪಟ್ಟಣವ. ಇಲ್ಲಿಂದ ಮುಂದೆ ಅರವಲೀ ಪರ್ವತದ ನಾಲುಗಳೆಲ್ಲ ಏಕಾಗಿ, ಅವಿಚ್ಛಿನ್ನ ಗೋಡೆಯಂತೆ ಮುಂದಕ್ಕೆ ಸಾಗಿದೆ. ಈ ಉನ್ನತವಾದ ಪರ್ವತದ ಮೇಲ್ಬಾಗ ದಲ್ಲಿ ಮೈರಬಾರ ರಾಜ್ಯವಿರುವದು. ಈ ಸಂಸ್ಥಾನದ ನಿವಾಸಿಗಳಾದ ಮೈರಟಾ ತಿಯ ಜನರು ಭಿಲ್ಲರಂತೆ ಕಾಡುಜನರಾಗಿರುವರು. ಈ ಭಿಲ್ಲ ಮತ್ತು ಮೈರಜನರು ಸುಧಾರಿಸಿದ ರಜಪೂತರಿಂದ ಓಡಿಸಲ್ಪಟ್ಟು, ಪರ್ವತಪ್ರದೇಶಗಳಲ್ಲಿ ಆಶ್ರಯ ಹೊಂದಿದರು ಅದರಿಂದ ಮೈರಬಾರ, ಭಿಲ್ಲಬಾರ ಮೊದಲಾದ ಗುಡ್ಡದ ಮೇಲಿನ ಪ್ರದೇಶಗಳುಂಟಾಗಿವೆ. ಉತ್ತರ ದಿಕ್ಕಿನಿಂದ ರಜಪೂತಸ್ಥಾನದ ಮೇಲೆ ಸಾಗಿಬರುವ ದಾಳಿಗಾರರ ಪ್ರಧನ ದೃಷ್ಟಿಯು ಅಜಮೀರದ ಮೇಲೆ ಬೀಳುವದು. ಯಾಕಂದರೆ ಅಜಮಿ ರವು ರಾಜಸ್ತಾನದ ಬಾಗಿಲಿದಂತಿದೆ. ಮೊದಲು ಯಾವದೊಂದು ರೀತಿಯಿಂದ ದುರ್ಭೇದ್ಯವಾದ ಈ ಅಜಮೀರದ ಕೋಟೆಯನ್ನು ಜಯಿಸಿದನಂತರ ಶತ್ರುಗ ಳಿಗೆ ರಜಪೂತಸ್ಥಾನದ ಕಡೆಗೆ ಲೋಲುಪದೃಷ್ಟಿಯನ್ನು ಚೆಲ್ಲುವ ಸಾಹಸವುಂಟಾ ಗುವದು. ಅಜಮೀರದಿಂದ ಸುಮಾರು ೭೦ ಮೈಲುಗಳ ವರೆಗಿರುವ ಅರವಲೀ ಪರ್ವ ತವ ಅಜಮೀರ ಮೈರಬಾರ ಸಂಸ್ಥಾನಗಳಲ್ಲಿರುವದು. ಈ ಭಾಗದಲ್ಲಿಯ ಪರ್ವ ತದ ಪಶ್ಚಿಮಭಾಗವು ಬಹಳ ಎತ್ತರವಾಗಿದೆ, ಮತ್ತು ನಾನಾತರದ ಘಟ್ಟದ ಮಾರ್ಗಗಳಿಂದ ತುಂಬಿದೆ. ಮೈರಬಾರದ ಕಡೆಯ ಭಾಗದಲ್ಲಿ ದೇವಿರವೆಂಬ ಘಟ್ಟದ ಮಾರ್ಗವಿರುವದು. ಅದರಾಚೆಯಲ್ಲಿ ಪರ್ವತದ ಪೂರ್ವಭಾಗದಿಂದ ಮೇವಾಡ ರಾಜ್ಯವು ಆರಂಭವಾಗುವದು. ದೇವಿರದಿಂದ ಪರ್ವತವು ಹೆಚ್ಚು